ಯೋಗಿ ರವರಿಂದ ಮತ್ತೊಂದು ಖಡಕ್ ಐತಿಹಾಸಿಕ ನಿರ್ಧಾರ!

ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಮೇಲೆ ಯಾರೂ ಊಹಿಸದ ರೀತಿಯಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಅಪರಾಧಿಗಳಿಗೆ ದುಸ್ವಪ್ನವಾಗಿ ಕಾಡುತ್ತಿರುವ ಯೋಗಿ ಆದಿತ್ಯನಾಥ್ ರವರು ಇಡೀ ದೇಶದಲ್ಲಿಯೇ ನಂಬರ್1 ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಇತ್ತೀಚೆಗೆ ಪಾತ್ರರಾಗಿದ್ದಾರೆ. ಎಲ್ಲಾ ವರ್ಗದ ಅಭಿವೃದ್ಧಿಗೂ ಸಮಾನ ಒತ್ತು ನೀಡುತ್ತಿರುವ ಯೋಗಿ ಆದಿತ್ಯನಾಥ್ ರವರು, ಅಭಿವೃದ್ಧಿಯ ಜೊತೆಗೆ ಭಾರತದ ಇತಿಹಾಸ ಮರುಕಳಿಸುವಂತೆ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಮೊಘಲರು ಬದಲಾಯಿಸಿದ ಹಲವಾರು ಪ್ರದೇಶಗಳ ಹೆಸರನ್ನು ಬದಲಾಯಿಸಿ, ಭಾರತದ ಪ್ರಾಚೀನ ಸಂಸ್ಕೃತಿಯನ್ನು ಎತ್ತಿಹಿಡಿಯುವ ಯೋಗಿ ಆದಿತ್ಯನಾಥ್ ಅವರು ದಿಟ್ಟ ಹೆಜ್ಜೆ ಇಟ್ಟಿದ್ದರು. ಈ ರೀತಿಯ ನಿರ್ಣಯಗಳನ್ನು ಪ್ರತಿಯೊಂದು ರಾಜ್ಯದ ನಾಯಕರು ತೆಗೆದುಕೊಂಡು, ಭಾರತದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಡುಗೊರೆಯನ್ನಾಗಿ ನೀಡಬೇಕು ಎಂಬುದು ನಮ್ಮ ಆಶಯ.

ಇದೀಗ ಮತ್ತೊಂದು ಹೆಜ್ಜೆ ಇಟ್ಟಿರುವ ಯೋಗಿ ಆದಿತ್ಯನಾಥ್ ರವರು, ಇನ್ನು ಮುಂದೆ ಉತ್ತರಪ್ರದೇಶದಲ್ಲಿ ಸಂಸ್ಕೃತ ಭಾಷೆಯಲ್ಲಿ ಪತ್ರಿಕಾ ಪ್ರಕಟಣೆ ಮಾಡಲು ನಿರ್ಧಾರ ಮಾಡಿದ್ದಾರೆ. ಇಷ್ಟು ದಿವಸ ಕೇವಲ ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳಲ್ಲಿ ಪತ್ರಿಕಾ ಪ್ರಕಟಣೆಗೊಳ್ಳುತ್ತಿತ್ತು. ಇನ್ನು ಮುಂದೆ ಯೋಗಿ ಆದಿತ್ಯನಾಥ್ ರವರ ಪ್ರಮುಖ ಭಾಷಣಗಳು ಹಾಗೂ ಸರಕಾರದ ಮಾಹಿತಿಗಳು ಸಂಸ್ಕೃತ ಭಾಷೆಯಲ್ಲಿ ಸಾಮಾನ್ಯ ಜನರಿಗೆ ಸಿಗಲಿವೆ. ಇದರ ಬಗ್ಗೆ ಮಾತನಾಡಿರುವ ಯೋಗಿ ಆದಿತ್ಯನಾಥ್ ರವರು, ಭಾರತ ದೇಶದ ಡಿಎನ್ಎ ನಲ್ಲಿ ಸಂಸ್ಕೃತ ಭಾಷೆ ಇದೆ, ಆದರೆ ಈಗ ಅದು ಕೇವಲ ಪುರೋಹಿತರ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಉತ್ತರ ಪ್ರದೇಶದಲ್ಲಿ ಸಂಸ್ಕೃತದಲ್ಲಿ ಪ್ರಕಟವಾಗುವ ಇಪ್ಪತ್ತೈದು ನಿಯತಕಾಲಿಕೆಗಳು ಇವೆ, ಆದರೆ ಅವು ಯಾವುದು ದಿನಪತ್ರಿಕೆಗಳಲ್ಲ. ಆದ ಕಾರಣದಿಂದ ಇನ್ನು ಮುಂದೆ ಸಂಸ್ಕೃತ ಭಾಷೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಪತ್ರಿಕಾ ಹೇಳಿಕೆಯನ್ನು ಸಂಸ್ಕೃತದಲ್ಲಿ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದ್ದಾರೆ.

Post Author: Ravi Yadav