ಶಿವನ ಮೈಮೇಲೆ ಯಾವಾಗಲೂ ಹುಲಿಯ ಚರ್ಮ ಇರುವಂತೆ ಚಿತ್ರಿಸಲಾಗಿದೆ ! ಯಾಕೆ ಎಂದು ನಿಮಗೆ ಗೊತ್ತೇ??

ಶಿವನ ಅತ್ಯಂತ ಜನಪ್ರಿಯ ಚಿತ್ರವೆಂದರೆ, ಹುಲಿಚರ್ಮದ ಮೇಲೆ ಕುಳಿತಿರುವುದು, ಹುಲಿ ಚರ್ಮವನ್ನು ಧರಿಸಿರುವುದು ಅಥವಾ ಹುಲಿ ಚರ್ಮವನ್ನು ಮೈಮೇಲೆ ಸುತ್ತಿಕೊಂಡು ಇರುವುದು. ಭಾರತೀಯ ಸಂಸ್ಕೃತಿಯು ಈ ಹುಲಿ ಚರ್ಮಕ್ಕೆ ಒಂದು ಕಥೆಯನ್ನು ಹೇಳಿದರೆ, ಅಸಲಿ ಕತೆಯೇ ಬೇರೆ ಇದೆ. ಹೌದು ಭಾರತೀಯ ಸಂಸ್ಕೃತಿಯ ಪ್ರಕಾರ ಹುಲಿ ಚರ್ಮವು ಶಿವನನ್ನು ವಿಶ್ವದ ಎಲ್ಲಾ ಶಕ್ತಿಗಳ ನಿಯಂತ್ರಕ ಎಂದು ಸೂಚಿಸುತ್ತದೆ. ಆದರೆ ಅಸಲಿ ಕತೆಯೇ ಬೇರೆ ಇದೆ ಎಂಬುದು ನಿಮಗೆ ಗೊತ್ತೇ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ. ( ಈ ಕಥೆಯನ್ನು ಶಿವ ಪುರಾಣದಿಂದ ಆಯ್ಕೆ ಮಾಡಲಾಗಿದ್ದು, ಶಿವಪುರಾಣದಲ್ಲಿ ಶಿವನು ಹುಲಿಯ ಚರ್ಮದ ಮೇಲೆ ಕುಳಿತುಕೊಳ್ಳಲು ಅಥವಾ ಅದನ್ನು ಯಾವ ಕಾರಣಕ್ಕೆ ಧರಿಸುತ್ತಾನೆ ಎಂಬುದರ ಸಂಪೂರ್ಣ ವಿಶ್ಲೇಷಣೆ ಇದೆ).

ಶಿವಪುರಾಣದ ಪ್ರಕಾರ ಶಿವ ಇಡೀ ವಿಶ್ವವನ್ನು ಸದಾ ಸುತ್ತುತ್ತಿರುತ್ತಾನೆ. ಒಮ್ಮೆ ಶಿವನು ಕಾಡಿನ ಮೂಲಕ ಹಾದು ಹೋಗುತ್ತಿದ್ದ ಸಮಯದಲ್ಲಿ ಕಾಡಿನಲ್ಲಿ ಹಲವಾರು ಪ್ರಬಲ ಸಂತರು ವಾಸವಾಗಿರುವುದನ್ನು ನೋಡುತ್ತಾನೆ. ಅವರು ತಮ್ಮ ಹೆಂಡತಿಯರೊಂದಿಗೆ ತಮ್ಮ ಆಶ್ರಮಗಳಲ್ಲಿ ವಾಸವಿದ್ದರು. ಸಂತರ ಪತ್ನಿಯರು ಸುಂದರ ಯುವಕನಾದ ಶಿವನತ್ತ ಆಕರ್ಷಣೆ ಗೊಂಡರು, ತಮಗೆ ತಿಳಿಯದೆಯೇ ಶಿವನತ್ತ ಆಕರ್ಷಿತಗೊಂಡ ಸಂತರ ಹೆಂಡತಿಯರು, ತಮ್ಮ ದೈನಂದಿನ ದಿನಚರಿಗಳ ಮೇಲೆ ಕೇಂದ್ರೀಕರಿಸಲು ವಿಫಲರಾದರು. ಇದನ್ನು ಕಂಡ ಸಂತರು ಹೆಂಡತಿಯರ ಬದಲಾದ ನಡವಳಿಕೆಯ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸಿದಾಗ ಅವರಿಗೆ ಸಿಕ್ಕ ಉತ್ತರ ಶಿವ. ಇದರಿಂದ ಕುಪಿತಗೊಂಡ ಸಂತರು ಶಿವನಿಗೆ ಪಾಠ ಕಲಿಸಲು ನಿರ್ಧಾರ ಮಾಡಿದರು.

ಶಿವನು ಪ್ರತಿದಿನ ವಾಯುವಿಹಾರಕ್ಕೆ ತೆರಳುತ್ತಿದ್ದನು, ಆದ್ದರಿಂದ ಸಂತರು ಅದೇ ಹಾದಿಯಲ್ಲಿ ಬೃಹತ್ ಗುಂಡಿಯನ್ನು ಅಗೆದು, ತಮ್ಮಲ್ಲಿರುವ ಶಕ್ತಿಯನ್ನು ಬಳಸಿ ಶಿವನು ಹಳ್ಳದ ಬಳಿ ಹೋದ ತಕ್ಷಣ ಹಳ್ಳದಿಂದ ಹುಲಿ ಹೊರಬರುವಂತೆ ಮಾಡಿದರು. ಆದರೆ ಶಿವನಿಗೆ ಹುಲಿಯನ್ನು ನಿರ್ವಹಿಸಲು ಕಷ್ಟವಾಗುವುದಿಲ್ಲ, ತನ್ನ ಮೇಲೆ ಎರಗಿ ಬಂದ ಹುಲಿಯನ್ನು ಬಹಳ ಸುಲಭವಾಗಿ ಶಿವನು ಮಣಿಸಿ ಕೊಲ್ಲುತ್ತಾನೆ. ಹಾಗೂ ಅದರ ಚರ್ಮವನ್ನು ತುರಿದುಕೊಂಡು ತನ್ನ ದೇಹಕ್ಕೆ ಸುತ್ತಿ ಕೊಂಡನು. ಅಂತಿಮವಾಗಿ ಸಂತರು ಇಡೀ ತಮ್ಮ ಶಕ್ತಿಯನ್ನು ಬಳಸಿ ಸೃಷ್ಟಿಸಿದ ಹುಲಿಯನ್ನು ಕೊಂದ ಶಿವನು ಸಾಮಾನ್ಯ ಋಷಿ ಅಲ್ಲ ಎಂದು ಅರಿತುಕೊಂಡರು.

ತದನಂತರ ತಮ್ಮ ತಪ್ಪಿನ ಅರಿವಾಗಿ ಶಿವನ ಪಾದಕ್ಕೆ ನಮಿಸಿದರು, ಅಂದಿನಿಂದ ಶಿವನು ಹುಲಿ ಚರ್ಮವನ್ನು ಧರಿಸಿರುತ್ತಾನೆ. ಅದು ಅವನು ಎಲ್ಲರಿಗಿಂತಲೂ ಶಕ್ತಿಶಾಲಿ ಎಂದು ಸಾಂಕೇತಿಕವಾಗಿ ತೋರಿಸುತ್ತದೆ. ಕೊಲ್ಲಲ್ಪಟ್ಟ ಹುಲಿಚರ್ಮದ ಮೇಲೆ ಕುಳಿತ ಶಿವನು ಪ್ರಾಣಿ ಪ್ರವೃತ್ತಿಯ ಮೇಲೆ ಶಕ್ತಿಯ ವಿಷಯವನ್ನು ಸಂಕೇತಿಸುತ್ತದೆ ಎಂದು ದಂತಕಥೆಗಳು ಹೇಳುತ್ತವೆ. ಈ ಕಥೆಯ ಸಂಪೂರ್ಣ ಭಾಗವನ್ನು ಓದಲು ಶಿವಪುರಾಣವನ್ನು ಓದಿ. ಮತ್ತಷ್ಟು ಈ ರೀತಿಯ ಸಂಗತಿಗಳಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.