ಅಭಿನಂದನ್ ರವರಿಗೆ ಅವಮಾನ ಮಾಡಿದ ಪಾಕಿಸ್ತಾನ- ನೀಚ ಬುದ್ದಿ ಬಿಡದ ಪಾಪಿಗಳು (video) ನೋಡಿ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಲವರು ಮಾತಿನ ಮೂಲಕ ಬುದ್ಧಿವಾದ ಹೇಳಿದರೆ ಕೇಳುತ್ತಾರೆ, ಇನ್ನು ಕೆಲವರು ಪೆಟ್ಟಿನ ಮೂಲಕ ಬುದ್ಧಿವಾದ ಹೇಳಿದರೆ ಕೇಳುತ್ತಾರೆ. ಆದರೆ ಕೆಲವರಿಗೆ ಹುಟ್ಟಿನಿಂದ ಬಂದ ಗುಣವನ್ನು ಸುಟ್ಟರೂ ಹೋಗುವುದಿಲ್ಲ ಎಂಬ ಗಾದೆಯಿದೆ, ಈ ಗಾದೆಯ ಅಡಿಯಲ್ಲಿ ಹಲವಾರು ಜನ ನಿಮಗೆ ಕಾಣಸಿಗುತ್ತಾರೆ. ಅದರಲ್ಲಿ ಮೊದಲಿಗೆ ನಮಗೆ ಕಾಣಸಿಗುವುದು ನಮ್ಮ ನೆರೆಯ ಕುತಂತ್ರಿ ರಾಷ್ಟ್ರ ಪಾಕಿಸ್ತಾನ. ಈ ದೇಶವು ತನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದರೂ ಸಹ, ಸುಖಾಸುಮ್ಮನೆ ಭಾರತದ ಜೊತೆ ಕಾಲುಕೆರೆದು ಜಗಳಕ್ಕೆ ಕಾದು ಕುಳಿತಿರುತ್ತದೆ. ಇದೇ ರೀತಿ ಪಾಕಿಸ್ತಾನವು ಇದೀಗ ಪಾಕಿಸ್ತಾನದ ಒಳಗಡೆ ನುಗ್ಗಿ ಪಾಕಿಸ್ತಾನ ಫೈಟರ್ ಜೆಟ್ ಗಳನ್ನು ಹೊಡೆದು, ವಾಪಸ್ಸಾಗಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಮ್ಮ ದೇಶದ ಹೆಮ್ಮೆಯ ಸೈನಿಕ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಅವಮಾನಿಸಿದೆ.

ಹೌದು, ವಿಂಗ್ ಕಮಾಂಡರ್ ಅಭಿನಂದನ್ ರ ಪ್ರಕರಣವನ್ನು ಬಳಸಿಕೊಂಡು ತನ್ನ ನೀಚ ಬುದ್ಧಿಯ ಕೀಳು ಅಭಿರುಚಿಯನ್ನು ತೋರಿಸಿದ್ದು, ಭಾರತ ಹಾಗೂ ಪಾಕಿಸ್ತಾನದ ನಡುವೆ ಇದೇ ತಿಂಗಳ 16 ರಂದು ನಡೆಯುವ ವಿಶ್ವಕಪ್ ಪಂದ್ಯದ ಕುರಿತು ಶೂಟ್ ಮಾಡಲಾಗಿರುವ ಜಾಹೀರಾತಿನಲ್ಲಿ ಮತ್ತೊಮ್ಮೆ ಬಾಲ ಬಿಚ್ಚಿದೆ. ಶತ್ರು ರಾಷ್ಟ್ರದ ಹೆಮ್ಮೆಯ ಸೈನಿಕನನ್ನು ಬಳಸಿಕೊಂಡು ಪಾಕಿಸ್ತಾನವು ಈ ರೀತಿಯ ಕೃತ್ಯವನ್ನು ಎಸಗಿರುವುದು ಪಾಕಿಸ್ತಾನದ ನೀಚ ಬುದ್ಧಿಯನ್ನು ಎತ್ತಿ ತೋರಿಸುತ್ತದೆ. ಅಭಿನಂದನ್ ರವರು ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದಾಗ ಮಾತನಾಡಿದ ಅನುಕರಣೆಯನ್ನು ಹೋಲುವ ಮಾತುಗಳನ್ನು ಚಿತ್ರೀಕರಣ ಮಾಡಿ ತನ್ನ ಝಸ್ ಟಿವಿ ವಾಹಿನಿಯಲ್ಲಿ ಪ್ರಸಾರ ಮಾಡಿದೆ.

ಈ ಜಾಹೀರಾತಿನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಹೋಲುವ ವ್ಯಕ್ತಿಯು ನಟನೆ ಮಾಡಿದ್ದು, ಥೇಟ್ ಅವರಂತೆ ಮೀಸೆ ಅಂಟಿಸಿಕೊಂಡು ಭಾರತ ಕ್ರಿಕೆಟ್ ತಂಡದ ಜರ್ಸಿ ತೊಟ್ಟು ಟೀ ಕುಡಿಯುತ್ತಿರುವ ಸಂದರ್ಭದಲ್ಲಿ, ವಿಚಾರಣೆ ಮಾಡುವ ವ್ಯಕ್ತಿಯು ಟಾಸ್ ಗೆದ್ದರೆ ಏನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಕ್ಷಮಿಸಿ ನಾನು ಅದನ್ನು ಹೇಳುವಂತಿಲ್ಲ ಎಂದು ಹೇಳುತ್ತಾರೆ. ಮತ್ತು ಪಂದ್ಯದಲ್ಲಿ ಯಾವ ಹನ್ನೊಂದು ಆಟಗಾರರು ಆಡುತ್ತಾರೆ ಎಂದು ಕೇಳಿದಾಗ ಕ್ಷಮಿಸಿ ನಾನು ಅದನ್ನು ಹೇಳುವ ಹಾಗೆ ಇಲ್ಲ ಎಂದು ಉತ್ತರ ನೀಡುತ್ತಾರೆ. (ವಿಡಿಯೋ ಕೆಳಗಡೆ ಇದೆ ಒಮ್ಮೆ ನೋಡಿ)

ತದನಂತರ ಟೀ ಹೇಗಿದೆ ಎಂದಾಕ್ಷಣ, ವಿಚಾರಣೆ ಮಾಡುವ ವ್ಯಕ್ತಿಯು ಟೀ ಅದ್ಭುತವಾಗಿದೆ ಎಂದು ಉತ್ತರ ನೀಡಿ ವಿಂಗ್ ಕಮಾಂಡರ್ ಅಭಿನಂದನ್ ರವರನ್ನು ಅನುಕರಣೆ ಮಾಡಲು ಪ್ರಯತ್ನ ಮಾಡುತ್ತಾನೆ. ತದನಂತರ ಟೀ ಕಪ್ ಎತ್ತಿಕೊಂಡು ಹೊರಡಲು ಹೋದಾಗ, ಕಪ್ಪು ಎಲ್ಲಿಗೆ ಹೊತ್ತು ಕೊಂಡು ಹೋಗುತ್ತೀಯಾ? ಅದು ಪಾಕಿಸ್ತಾನದ ಕಪ್ಪೆಂದು ಕಿತ್ತುಕೊಳ್ಳುತ್ತಾರೆ. ತದನಂತರ ಪಾಕಿಸ್ತಾನಕ್ಕೆ ವಿಶ್ವಕಪ್ಪನ್ನು ವಾಪಸ್ ತನ್ನಿ ಎಂದು ಪಾಕಿಸ್ತಾನ ಕ್ರಿಕೆಟ್ ಟೀಮ್ ಕಪ್ ಗೆಲ್ಲುವ ಸಂದೇಶ ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ನೆಟ್ಟಿಗರು ಈ ಜಾಹೀರಾತನ್ನು ಈ ಕೂಡಲೇ ತೆಗೆಯದೆ ಇದ್ದಲ್ಲಿ ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ಜಾಹೀರಾತಿನ ಕಾರಣಕ್ಕೆ ಬಳಸಿದ ಪರಿಣಾಮ ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರ ನೀಡಿದ್ದಾರೆ.

Post Author: Ravi Yadav