ಬಿಗ್ ನ್ಯೂಸ್- ಯುವರಾಜ್ ಸಿಂಗ್ ಮುಂದಿನ ಹಾದಿ ಏನು ಗೊತ್ತಾ?? ನಿರ್ಧಾರ ಕೇಳಿದರೆ ಸಲಾಂ ಹೊಡೆಯುತ್ತೀರಾ !!

ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ರವರು ಇದೀಗ ಎಲ್ಲ ಅಂತರ್ರಾಷ್ಟ್ರೀಯ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ. ಭಾರತಕ್ಕೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದು ಕೊಟ್ಟಿದ್ದ ಯುವರಾಜ್ ಸಿಂಗ್ ರವರು ಇದೀಗ ಭಾರತ ತಂಡದಿಂದ ಹೊರ ಬಿದ್ದು, 1 ಪಂದ್ಯವನ್ನು ಆಡದೆ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ಭಾರಿ ಬೇಸರವನ್ನು ತಂದಿದೆ. ನೀವು ಯಾವುದೇ ಆಟಗಾರನ ಅಭಿಮಾನಿಯಾಗಿ ಇರಬಹುದು ಆದರೆ ಒಬ್ಬ ಕ್ರಿಕೆಟ್ ಪ್ರೇಮಿ ಯುವರಾಜ್ ಸಿಂಗ್ ನಂತಹ ಆಟಗಾರರನ್ನು ದ್ವೇಷಿಸಲು ಸಾಧ್ಯವಿಲ್ಲ ಎಂಬ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕೆಲ್ಲ ಕಾರಣ ಯುವರಾಜ್ ಸಿಂಗ್ ರವರ ಆಟದ ವೈಖರಿ, ನಡೆ ಹಾಗು ಹೋರಾಟದ ಮನೋಭಾವ ಎಂದರೆ ತಪ್ಪಾಗಲಾರದು.

ಇದೀಗ ನಿವೃತ್ತಿ ಘೋಷಣೆಮಾಡಿದ ಬಳಿಕ ಯುವರಾಜ್ ಸಿಂಗ್ ರವರು ಭಾರತಕ್ಕೆ ನೀಡಿದ ಕೊಡುಗೆಗಳನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ನನಗೆ ಕ್ಯಾನ್ಸರ್ ಇದೆ ಎಂಬುದು ತಿಳಿದರೂ, ಮೈದಾನದಲ್ಲಿ ಕ್ಯಾನ್ಸರ್ ರೋಗ ಉಲ್ಬಣಗೊಂಡರೂ, ದೇಶಕ್ಕಾಗಿ ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಹೋರಾಡಿ 2011ರ ವಿಶ್ವಕಪ್ ಕಿರೀಟವನ್ನು ಭಾರತದ ಮುಡಿಗೇರಿಸಿ, ತಾನೊಬ್ಬ ಹೋರಾಟಗಾರ ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ನಿರೂಪಿಸಿದ ಯುವರಾಜ್ ಸಿಂಗ್ ಅವರು ಇದೀಗ ಮಾಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಮುಂದಿನ ಹಾದಿಯನ್ನು ಸಹ ಸ್ಪಷ್ಟಪಡಿಸಿದ್ದಾರೆ.

ತಮ್ಮ ಮುಂದಿನ ಹಾದಿಯ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ರವರು,ನನ್ನಿಂದ ಕ್ರಿಕೆಟನ್ನು ಹೊರತೆಗೆಯಲು ಸಾಧ್ಯವಿಲ್ಲಆದರೆ ಇನ್ನು ಮುಂದೆ ಕ್ರಿಕೆಟ್ ಆಟದಿಂದ ಆದಷ್ಟು ದೂರ ಉಳಿಯುತ್ತೇನೆ, ನಾನು ಇನ್ನು ಮುಂದೆ ಸಮಾಜ ಸೇವಕನಾಗಿ ಮುಂದುವರೆಯಲು ನಿರ್ಧಾರ ಮಾಡಿದ್ದೇನೆ. ಮೂಲಸೌಕರ್ಯಗಳನ್ನು ಹೊಂದಿರದ ಬಡ ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾ, ಕ್ಯಾನ್ಸರ್ ರೋಗಿಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಾ ಉಳಿದ ಜೀವನವನ್ನು ಕಳೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಯುವರಾಜ್ ಸಿಂಗ್ ರವರು ತಮ್ಮ ಮುಂದಿನ ಹಾದಿಯನ್ನು ಈ ರೀತಿ ಸ್ಪಷ್ಟಪಡಿಸಿದ ಮರುಕ್ಷಣ, ಯುವರಾಜ ರವರ ಈ ನಿರ್ಧಾರಕ್ಕೆ ಬಾರಿ ಪ್ರಶಂಸೆಗಳು ಹರಿದುಬಂದಿವೆ. ಈ ವಿಷಯವನ್ನು ಖುದ್ದು ಭಾರತದ ಕ್ರಿಕೆಟ್ ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣಗಳ ಮುಖಪುಟಗಳಲ್ಲಿ ಹಾಕಿಕೊಂಡಿದೆ. ಲಕ್ಷಾಂತರ ಲೈಕ್ ಗಳು ಹಾಗೂ ಶೇರ್ ಗಳು ಈಗಾಗಲೇ ಈ ಪೋಸ್ಟ್ಗೆ ಹರಿದು ಬಂದಿದ್ದು, ಹಲವಾರು ಆಟಗಾರರು ಸಹ ಯುವರಾಜ ರವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಮಾಹಿತಿ ಹೊರ ಬೀಳುತ್ತಿದೆ. ಒಟ್ಟಿನಲ್ಲಿ ಇಷ್ಟು ದಿವಸ ದೇಶಕ್ಕಾಗಿ ಇನ್ನುಮುಂದೆ ಬಡ ಮಕ್ಕಳ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಹೋರಾಟ ಮಾಡಲು ನಿರ್ಧಾರ ಮಾಡಿರುವ ಯುವರಾಜ್ ಸಿಂಗ್ ರವರಿಗೆ ಕರುನಾಡ ವಾಣಿ ತಂಡದ ಕಡೆಯಿಂದ ಬಿಗ್ ಸೆಲ್ಯೂಟ್.

Post Author: Ravi Yadav