ಒಂದು ವಿಶ್ವಕಪ್ ಆಡದೇ ನಿವೃತ್ತರಾದ ಭಾರತೀಯ ಲೆಜೆಂಡ್ ಯಾರು ಗೊತ್ತೇ??

ಒಂದು ವಿಶ್ವಕಪ್ ಆಡದೇ ನಿವೃತ್ತರಾದ ಭಾರತೀಯ ಲೆಜೆಂಡ್ ಯಾರು ಗೊತ್ತೇ??

ವಿಶ್ವಕಪ್ ಎಂಬುವುದು ವಿಶ್ವ ಕ್ರಿಕೆಟ್ ನ ಕಿರೀಟ. ಪ್ರತಿಯೊಬ್ಬ ಕ್ರಿಕೆಟ್ ಆಟಗಾರನಿಗೂ ತಾನು ವಿಶ್ವಕಪ್ನಲ್ಲಿ ಒಮ್ಮೆಯಾದರೂ ಆಡಬೇಕು ಎಂಬ ಹಂಬಲ ಮನಸ್ಸಿನಲ್ಲಿರುತ್ತದೆ. ವಿಶ್ವಕಪ್ ಟೂರ್ನಿಯಲ್ಲಿ ಆಡಿ ತನ್ನ ದೇಶದ ಕೀರ್ತಿ ಪತಾಕೆಯನ್ನು ಆರಿಸಿ ವಿಶ್ವಕಪ್ ಎಂಬ ಗರಿಯನ್ನು ದೇಶದ ಮುಡಿಗೆ ಏರಿಸಬೇಕು ಎಂಬುದು ಕ್ರಿಕೆಟ್ ಆಟಗಾರರ ಕನಸಾಗಿರುತ್ತದೆ. ಆದರೆ ಭಾರತೀಯ ಕ್ರಿಕೆಟ್ ಕಂಡ ಲೆಜೆಂಡ್ ಗಳಲ್ಲಿ ಒಬ್ಬರಾಗಿರುವ ಆಟಗಾರ ಹಲವಾರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಿದರೂ ಸಹ ಒಮ್ಮೆಯೂ ವಿಶ್ವಕಪ್ ಆಡುವ ಅವಕಾಶ ಪಡೆಯಲಿಲ್ಲ. ಅವರು ಯಾರು ಗೊತ್ತೇ?? ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಭಾರತೀಯ ತಂಡವು ಕಷ್ಟದ ಸಮಯದಲ್ಲಿ ಇರುವಾಗ ಪ್ರತಿಬಾರಿಯೂ ಕೈಹಿಡಿದು ಸೆಕೆಂಡ್ ಇನ್ನಿಂಗ್ಸ್ ಸ್ಪೆಷಲಿಸ್ಟ್ ಎಂದು ಖ್ಯಾತಿ ಪಡೆದುಕೊಂಡಿದ್ದ ವಿವಿಎಸ್ ಲಕ್ಷ್ಮಣ್ ರವರು, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಆಪತ್ಬಾಂಧವ. 9 ವಿಕೆಟ್ಗಳು ಉರುಳಿದರೂ ಕೊನೆಯ ವಿಕೆಟ್ ನಲ್ಲಿ ಬೌಲರ್ಗಳ ಕೈಯಲ್ಲೂ ಸಹ ಬ್ಯಾಟಿಂಗ್ ಮಾಡಿಸಿ ಮತ್ತೊಂದು ಕಡೆ ತಾನು ಭದ್ರವಾಗಿ ನೆಲೆಯೂರಿ ಎದುರಾಳಿ ತಂಡಗಳಿಗೆ ಪ್ರತಿರೋಧ ತೋರುತ್ತಿದ್ದ ವಿವಿಎಸ್ ಲಕ್ಷ್ಮಣ್ ರವರು ಹಲವಾರು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇವೆಸಲ್ಲಿಸಿದರೂ ಸಹ ಒಮ್ಮೆಯೂ ವಿಶ್ವಕಪ್ ಟೂರ್ನಿಯಲ್ಲಿ ಆಡಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಆಡದೇ ತಂಡದಿಂದ ನಿವೃತ್ತಿ ಪಡೆದ ಹಲವಾರು ಸ್ಟಾರ್ ಆಟಗಾರರಲ್ಲಿ ವಿವಿಎಸ್ ಲಕ್ಷ್ಮಣ್ ರವರು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ.