ಸಲಾಂ ಸರ್- ಅಣ್ಣಾಮಲೈ ರವರು ಮತ್ತೊಂದು ಮುಖ ನಿಮಗೆ ಗೊತ್ತೇ?? ಇಲ್ಲಿದೆ ನೋಡಿ

ಅಣ್ಣಾಮಲೈ ಅವರು ಇದೀಗ ರಾಜೀನಾಮೆ ನೀಡಿ ಹಲವಾರು ಅಭಿಮಾನಿಗಳನ್ನು ಶಾಕ್ ಗೆ ಒಳಗಾಗುವಂತೆ ಮಾಡಿದ್ದಾರೆ. ದಕ್ಷ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈ ರವರು ಸಮಾಜಘಾತುಕರಿಗೆ ಅಕ್ಷರಸಹ ಸಿಂಹಸ್ವಪ್ನವಾಗಿದ್ದರು. ಎಂತಹ ಸಮಯದಲ್ಲಿಯೂ ಸಹ ಕಾಯಕವೇ ಕೈಲಾಸ ಎಂದು ಕೆಲಸ ನಿರ್ವಹಿಸುತ್ತಿದ್ದ ಅಣ್ಣಾಮಲೈ ರವರು ಕರ್ನಾಟಕದಲ್ಲಿ ಅತಿವೃಷ್ಟಿ ಉಂಟಾಗಿ, ಮಳೆ ಹೆಚ್ಚಾಗಿ ಜನರು ತೊಂದರೆಯಲ್ಲಿ ಸಿಲುಕಿದಾಗ, ಮಳೆಯ ನಡುವೆಯೇ ಬರಿಗಾಲಿನಲ್ಲಿ ತಮ್ಮ ಕೆಲಸವನ್ನು ನಿರ್ವಹಿಸದ ಘಟನೆಗಳು ಇಂದು ನಮ್ಮ ಕಣ್ಣಮುಂದಿವೆ. ಇಷ್ಟು ದಿವಸ ದಕ್ಷ ಅಧಿಕಾರಿಯ ಮುಖ ನೋಡಿದ್ದ ನಾವು ಇಂದು ಅವರ ಸಾಮಾಜಿಕ ಕಳಕಳಿಯ ಮತ್ತೊಂದು ಮುಖ ನೋಡುತ್ತಿದ್ದೇವೆ. 4 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ನಮ್ಮ ಸಹೋದರಿ ಬೈಂದೂರು ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗರ ಮೇಲೆ ಕೆಲವು ಘಾತುಕರು ಪೈಶಾಚಿಕ ಕೃತ್ಯ ನಡೆಸಿ ಕೊಂದು ಹಾಕಿದ್ದರು. ಅಕ್ಷತಾ ದೇವಾಡಿಗ ರವರು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ ನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದರು.

ಅದೇ ವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಸಮಾರಂಭದಲ್ಲಿ ಭಾಗಿಯಾಗಿದ್ದ ಅಣ್ಣಾಮಲೈ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅಕ್ಷತಾ ರವರ ತಂದೆ, ತಾಯಿ ಹಾಗೂ ತಂಗಿಯನ್ನು ಕಂಡ ಅಣ್ಣಾಮಲೈ ರವರು ಪ್ರಕರಣದಬಗ್ಗೆ ಸಂತಾಪವನ್ನು ವ್ಯಕ್ತಪಡಿಸಿ, ಇನ್ನುಮುಂದೆ ಅಕ್ಷತಾಳ ಹೆಸರಿನಲ್ಲಿ ತಾನು ಪ್ರತಿವರ್ಷ 10 ಸಾವಿರ ರೂ ಗಳನ್ನು ಬೈಂದೂರು ಪದವಿಪೂರ್ವ ಕಾಲೇಜಿನ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿನಿಗೆ ನೀಡುತ್ತೇನೆ ಎಂದು ಒಪ್ಪಿಕೊಂಡು, ಒಂದು ವೇಳೆ ನಾನು ವರ್ಗಾವಣೆಯಾದರೂ ಸಹ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ನೀಡಿ ತೆರಳಿದ್ದಾರೆ. ನಾಲ್ಕು ವರ್ಷಗಳಿಂದ ಇಲ್ಲಿಯವರೆಗೂ ಒಮ್ಮೆಯೂ ಫೋನ್ ಮಾಡುವ ಪ್ರಮೇಯ ಬಂದಿಲ್ಲ, ಯಾಕೆಂದರೆ ತಪ್ಪದೇ ಮರೆಯದೆ ಜುಲೈ ತಿಂಗಳಲ್ಲಿ ಫೋನ್ ಮಾಡಿ ಅಕ್ಷತಾಳ ಹೆಸರಿನಲ್ಲಿ ವಿದ್ಯಾರ್ಥಿ ವೇತನದ ಹಣವನ್ನು ಕಳುಹಿಸಿ ಕೊಡುತ್ತಿದ್ದಾರೆ ನಮ್ಮ ಅಣ್ಣಮಲೈ. ಒಟ್ಟಿನಲ್ಲಿ ಈ ರೀತಿಯ ಅಧಿಕಾರಿಯನ್ನು ನಾವು ಮತ್ತೊಮ್ಮೆ ಪಡೆಯಲು ಸಾಧ್ಯವಿಲ್ಲ. ಅಣ್ಣಾಮಲೈ ರವರ ಮುಂದಿನ ದಾರಿ ಯಾವುದೇ ಇರಲಿ ಅವರಿಗೆ ಶುಭವಾಗಲಿ ಎಂದು ಕರುನಾಡ ವಾಣಿ ತಂಡದಿಂದ ಶುಭ ಹಾರೈಸುತ್ತೇವೆ.