ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ವಿಶೇಷ ನಮನ ಸಲ್ಲಿಸಲು ಮುಂದಾದ ನರೇಂದ್ರ ಮೋದಿ !!

ನರೇಂದ್ರ ಮೋದಿ ರವರಿಗೆ ದೇಶದ ಮೇಲೆ ಇರುವ ಭಕ್ತಿ ಹಾಗೂ ಗೌರವದ ಬಗ್ಗೆ ನಿಮಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಕಳೆದ 5 ವರ್ಷಗಳ ಅಧಿಕಾರ ಅವಧಿಯಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಮುಂದೆಯೂ ಸಹ ನರೇಂದ್ರ ಮೋದಿ ಅವರು ನಮ್ಮ ದೇಶ ತಲೆಯೆತ್ತಿ ನಿಂತುಕೊಳ್ಳುವಂತೆ ಮಾಡಿದ್ದಾರೆ. ವ್ಯಾಪಾರ, ವ್ಯವಹಾರ ಹಾಗೂ ರಕ್ಷಣೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ನರೇಂದ್ರ ಮೋದಿ ಅವರು ಹಲವಾರು ಬಾರಿ ನೆರೆಯ ಕುತಂತ್ರಿ ಶತ್ರು ರಾಷ್ಟ್ರ ಚೀನಾ ಹಾಗೂ ಶತ್ರು ರಾಷ್ಟ್ರವಾದ ಪಾಕಿಸ್ತಾನ ದೇಶಗಳಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ. ಇನ್ನು ವ್ಯಾಪಾರ ವ್ಯವಹಾರಗಳ ಸಂಬಂಧಕ್ಕೆ ಬಂದರೆ, ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದುಕೊಂಡಿರುವ ಅಮೆರಿಕ ದೇಶಕ್ಕೂ ಸಹ ನರೇಂದ್ರ ಮೋದಿ ರವರು ಹಲವಾರು ಬಾರಿ ತಮ್ಮ ಖಡಕ್ ನಿರ್ಧಾರಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಇನ್ನು ದೇಶ ಕಾಯುವ ಸೈನಿಕರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ನರೇಂದ್ರ ಮೋದಿ ರವರು ಮೊದಲಿನಿಂದಲೂ ಸೈನಿಕರಿಗೆ ವಿಶೇಷ ರೀತಿಯ ಕಾಳಜಿ ಹಾಗೂ ಸೇನೆಯನ್ನು ಬಲಪಡಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಉಗ್ರರಿಗೆ ತಕ್ಕ ತಿರುಗೇಟು ನೀಡಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ, ಸೈನಿಕರಿಗೆ ಸಕಲ ಸೌಲತ್ತುಗಳನ್ನು ಸಿಗುವಂತೆ ಮಾಡಿರುವ ನರೇಂದ್ರ ಮೋದಿ ಅವರು ಇದೀಗ ನಮ್ಮೆಲ್ಲರ ರಕ್ಷಣೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ವೀರಮರಣವನ್ನು ಹೊಂದಿದ ಸೈನಿಕರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ. ಅದು ಹೇಗೆ ಗೊತ್ತಾ? ವಿಷಯದ ಸಂಪೂರ್ಣ ವಿವರಗಳ ಮಾಹಿತಿಯನ್ನು ತಿಳಿಯಲು ಕೆಳಗಡೆ ಓದಿ.

ಇನ್ನು ಕೇವಲ 24 ಗಂಟೆಗಳಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಭಾರತದ ಪ್ರಧಾನ ಸೇವಕರಾಗಿ ಪ್ರಮಾಣವಚನವನ್ನು ಸ್ವೀಕರಿಸುತ್ತಾರೆ. ಹಲವಾರು ರಾಷ್ಟ್ರಗಳ ನಾಯಕರು ಈ ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ರಾಜಕಾರಣಿಗಳು ಹಾಗೂ ಮತ್ತಿತರ ಜನಪ್ರಿಯ ನಾಯಕರು ನರೇಂದ್ರ ಮೋದಿರವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೇ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನರೇಂದ್ರಮೋದಿ ರವರು ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನು ಹೊಂದಿದ ಸೈನಿಕರ ಕುಟುಂಬಗಳಿಗೆ ಆಹ್ವಾನ ನೀಡಿದ್ದಾರೆ.

ಹೌದು ಪುಲ್ವಾಮ ದಾಳಿಯಲ್ಲಿ ದೇಶವನ್ನು ರಕ್ಷಿಸುವ ಸಮಯದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳನ್ನು ನರೇಂದ್ರ ಮೋದಿ ರವರು ಪ್ರಮಾಣವಚನ ಸ್ವೀಕಾರ ಮಾಡುವ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಾರೆ. ನರೇಂದ್ರ ಮೋದಿಯವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನರೇಂದ್ರ ಮೋದಿರವರ ಈ ಕಾರ್ಯಕ್ಕೆ ಪ್ರಶಂಸೆಗಳು ಜೋರಾಗಿ ಕೇಳಿಬರುತ್ತವೆ. ನರೇಂದ್ರ ಮೋದಿ ರವರ ಈ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ. ದೇಶದ ಪ್ರಮುಖ ಆಯ್ದ ಸುದ್ದಿಗಳನ್ನು ಪಡೆಯಲು ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.

Post Author: Ravi Yadav