ಸುಮಲತಾ ರವರಿಗೆ ಬಂಪರ್ ಆಫರ್ ಘೋಷಿಸಲು ಮುಂದಾದ ನರೇಂದ್ರ ಮೋದಿ-ಚಾಣಕ್ಯ ಜೋಡಿ !!

ಕೆಲವೇ ಕೆಲವು ದಿನಗಳ ಹಿಂದೆ ನೀವು ಯಾವುದೇ ಟಿವಿ ಚಾನಲ್ ಓಪನ್ ಮಾಡಿದರು ನಿಮಗೆ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಿಂತ ಹೆಚ್ಚು ಸುದ್ದಿ ಕೇಳಿಬರುತ್ತಿದ್ದು ಮಾತ್ರ ಮಂಡ್ಯ ಜಿಲ್ಲೆಯ ಚುನಾವಣೆ ಸುದ್ದಿ. ಎರಡು ಅಭ್ಯರ್ಥಿಗಳು ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿದ್ದರೂ ಒಂದು ಕಡೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ಮತ್ತೊಂದು ಕಡೆ ಕನ್ನಡಿಗರ ನೆಚ್ಚಿನ ನಾಯಕ ದಿವಂಗತ ಅಂಬರೀಶ್ ರವರ ಧರ್ಮಪತ್ನಿ ಸುಮಲತಾ ಅಂಬರೀಶ್ ರವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದ ಕಾರಣ ಮಂಡ್ಯ ಜಿಲ್ಲೆ ರಂಗೇರಿತ್ತು.

ಕೊನೆಗೂ ಮಂಡ್ಯ ಜನತೆಯ ಸ್ವಾಭಿಮಾನದ ನಂಬಿಕೆಯ ಮುಂದೆ, ಎಂಟು ಜನ ಶಾಸಕರು, ಮೂರು ಸಚಿವರು, ರಾಜ್ಯದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನ ಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸೋತು ಮಕಾಡೆ ಮಲಗಿದ್ದರು. ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿ ರವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತದಿಂದ ಸೋಲಿಸಿ ದಿಗ್ವಿಜಯವನ್ನು ಸಾಧಿಸಿ ಇಡೀ ದೇಶದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡ ಮೊಟ್ಟ ಮೊದಲ ಮಹಿಳೆ ಎಂಬ ಹಿರಿಮೆ ಪಾತ್ರರಾದರು. ಮಂಡ್ಯ ಜಿಲ್ಲೆಯು ಹಳ್ಳಿಯಿಂದ ದಿಲ್ಲಿಯವರೆಗೆ ಸದ್ದು ಮಾಡಿತ್ತು, ಎಷ್ಟರಮಟ್ಟಿಗೆ ಅಂದರೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ತಮ್ಮ ಚುನಾವಣೆಯ ಪ್ರಚಾರದಲ್ಲಿಯೂ ಸುಮಲತಾ ರವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದರು.

ಇಷ್ಟೆಲ್ಲಾ ಆಗಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆ ಗೊಂಡ ನಂತರ ಬಿಎಸ್ ಯಡಿಯೂರಪ್ಪ ನವರು ನರೇಂದ್ರ ಮೋದಿ ಭೇಟಿಯಾದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ರವರ ಗೆಲುವಿನ ಕುರಿತು ನರೇಂದ್ರ ಮೋದಿರವರು ಅಮಿತ್ ಶಾ ರವರ ಜೊತೆ ಚರ್ಚಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮೂಲಕ ಸುಮಲತಾ ಅಂಬರೀಶ್ ಅವರಿಗೆ ನರೇಂದ್ರ ಮೋದಿ ಅವರು ಸಿಹಿಸುದ್ದಿ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಡೀ ದೇಶದ ಗಮನ ಸೆಳೆದ ಮಂಡ್ಯ ಜಿಲ್ಲೆಯ ಚುನಾವಣೆಯಲ್ಲಿ ಭಾರೀ ಜಯ ಗಳಿಸಿರುವ ಸುಮಲತಾ ಅಂಬರೀಶ್ ರವರನ್ನು ತಮ್ಮ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಪ್ರಧಾನಿ ಮೋದಿರವರು ನಿರ್ಧರಿಸಿದ್ದು ಈ ಬಗ್ಗೆ ಯಡಿಯೂರಪ್ಪನವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಇದರ ಕುರಿತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗಳಾಗಿರುವ ಎಸ್ಎಂ ಕೃಷ್ಣ ರವರಿಗೆ ಸುಮಲತಾರವರ ಬಳಿ ಇದರ ಕುರಿತು ಚರ್ಚೆ ನಡೆಸಿ ಎಂದು ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಇದು ಸುಮಲತಾ ರವರು ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿರುವ ಎಸ್ಎಂ ಕೃಷ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸುಮಲತಾ ಅಂಬರೀಶ್ ರವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಖಾತೆ ನೀಡುವ ಬಗ್ಗೆ ನರೇಂದ್ರ ಮೋದಿ ಅವರು ಒಲವು ಹೊಂದಿದ್ದು, ಸಚಿವೆಯಾಗಿ ಅನುಭವ ಪಡೆದು ಸಂಸತ್ತಿಗೆ ಹೊಂದಿಕೊಂಡ ನಂತರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವುದು ನಿಚ್ಚಳವಾಗಿದೆ.

Post Author: Ravi Yadav