ಹೊಸ ಸರ್ಕಾರ ರಚನೆಗೂ ಮುನ್ನ ಬಿಜೆಪಿ ಪಕ್ಷಕ್ಕೆ ಬಿಗ್ ಶಾಕ್- ಬಾರಿ ಹೊಡೆತ

ಇದೀಗ ಬಿಜೆಪಿ ಪಕ್ಷವು ಇಡೀ ದೇಶದಲ್ಲಿ ದಿಗ್ವಿಜಯವನ್ನು ಸಾಧಿಸಿ ಸ್ವತಂತ್ರವಾಗಿ ಬಹುಮತ ಗಳಿಸಿದೆ. ಇನ್ನು ಮೈತ್ರಿಕೂಟದ ಲೆಕ್ಕಾಚಾರಗಳನ್ನು ಗಮನಿಸಿದರೆ ಮುನ್ನೂರ ನಲವತ್ತಕ್ಕೂ ಹೆಚ್ಚು ಸೀಟುಗಳನ್ನು ಪಡೆದುಕೊಂಡು ಸುಭದ್ರವಾಗಿ ಐದು ವರ್ಷಗಳ ಕಾಲ ಸರ್ಕಾರ ನಡೆಸುವ ಮುನ್ಸೂಚನೆ ನೀಡಿದೆ. ಈ ರೀತಿಯ ಸಂಖ್ಯಾಬಲವನ್ನು ಹೊಂದಿರುವ ಬಿಜೆಪಿ ಪಕ್ಷವು ಮುಂದಿನ ಐದು ವರ್ಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದೆ, ವಿರೋಧಪಕ್ಷದ ಕುರ್ಚಿ ಖಾಲಿ ಇರುವುದರಿಂದ ಬಹಳ ಸುಲಭವಾಗಿ ಸ್ವಂತ ನಿರ್ಧಾರ ಗಳ ಮೂಲಕ ಅಧಿಕಾರ ನಡೆಸಬಹುದು. ಈಗಾಗಲೇ ಬಿಜೆಪಿ ಪಕ್ಷವು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಮುನ್ನಡೆಯುತ್ತಿದೆ.ಕೇವಲ ನೆನ್ನೆಯಷ್ಟೇ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಿ, ಮತ್ತೊಮ್ಮೆ ಸರ್ಕಾರ ರಚಿಸಲು ಅವಕಾಶ ನೀಡುವುದಕ್ಕಾಗಿ ರಾಷ್ಟ್ರಪತಿ ರವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟ ಏರುವುದು ಖಚಿತವಾಗಿದೆ. ಹೀಗಿರುವಾಗ ಬಿಜೆಪಿ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಕಳೆದ ಬಾರಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ, ನರೇಂದ್ರ ಮೋದಿ ರವರ ನೇತೃತ್ವದ ಸರ್ಕಾರದಲ್ಲಿ ಕಳೆದ ಬಾರಿಯಂತೆ ಈ ಬಾರಿ ಪಾತ್ರ ನಿರ್ವಹಿಸುವುದು ಅನುಮಾನವಾಗಿದೆ. ಬಹಳ ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ರವರು ಜೂನ್ನಲ್ಲಿ ತಮ್ಮ ಮಗನ ಮದುವೆಯ ಬಳಿಕ ಲಂಡನ್ ದೇಶಕ್ಕೆ ಚಿಕಿತ್ಸೆಗೆ ತೆರಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು, ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ತಿಳಿದುಬಂದಿದೆ. ಅರುಣ್ ಜೇಟ್ಲಿ ರವರಿಗೆ ಪರ್ಯಾಯ ನಾಯಕರ ಹುಡುಕಾಟ ಹೊಸ ತಲೆ ನೋವಾಗಿದ್ದು, ಈ ಸ್ಥಾನ ತುಂಬುವ ಪರ್ಯಾಯ ನಾಯಕನನ್ನು ಹುಡುಕಿ ತರುವುದು ಬಿಜೆಪಿ ಪಕ್ಷಕ್ಕೆ ಹೊಸ ಜವಾಬ್ದಾರಿಯಾಗಿದೆ.

Post Author: Ravi Yadav