ಮುಗಿಯಿತು ಬಿಎಸ್ವೈ ಸುಮಲತಾ ಭೇಟಿ ಮಾತುಕತೆ ! ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತ ಹೇಳಿದ್ದೇನು ಗೊತ್ತಾ??

ಮಂಡ್ಯ ಲೋಕಸಭಾ ಕ್ಷೇತ್ರದ ನೂತನ ಸಂಸದೆಯಾಗಿರುವ ಸುಮಲತಾ ಅಂಬರೀಶ್ ರವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕೆಲವು ಮೂಲಗಳ ಪ್ರಕಾರ ನರೇಂದ್ರ ಮೋದಿ ರವರು ಸುಮಲತಾ ಅಂಬರೀಶ್ ರವರಿಗೆ ಸಂಪುಟ ಸಚಿವೆಯಾಗಿ ಸ್ಥಾನ ಕೊಡಲು ನಿರ್ಧಾರ ಮಾಡಿ ಈ ಮಾತುಕತೆಗೆ ಆದೇಶ ನೀಡಿದ್ದರು ಎನ್ನಲಾಗಿದೆ. ಇನ್ನು ಈ ಭೇಟಿ ಮಾತುಕತೆ ಇದೀಗ ಮುಗಿದಿದ್ದು ಸುಮಲತಾ ಅಂಬರೀಶ್ ರವರು ಬಿಜೆಪಿಯ ಸೇರ್ಪಡೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಬಿಜೆಪಿ ಪಕ್ಷದ ಬೆಂಬಲದೊಂದಿಗೆ ಅಖಾಡಕ್ಕೆ ಇಳಿದಿದ್ದ ಸುಮಲತಾ ಅಂಬರೀಶ್ ರವರು, ಮಂಡ್ಯ ಜಿಲ್ಲೆಯ ಜನತೆಯ ಸ್ವಾಭಿಮಾನದಿಂದ ಗೆದ್ದು ಬೀಗಿದ್ದಾರೆ.

ಹೀಗಿರುವಾಗ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸುಮಲತಾ ರವರು, ಮಂಡ್ಯ ಜಿಲ್ಲೆಯ ಜನತೆಯ ನನಗೆ ಪಕ್ಷಬೇದ ಮರೆತು ಬೆಂಬಲ ನೀಡಿದ್ದಾರೆ. ಸಿಎಂ ಕುಮಾರಸ್ವಾಮಿ ರವರು ನೂರಾರು ಕೋಟಿ ಖರ್ಚು ಮಾಡಿದರೂ ಅಲ್ಲಿನ ಜನ ನನಗೆ ಬೆಂಬಲ ನೀಡಿದ್ದಾರೆ, ಬಿಜೆಪಿ ಪಕ್ಷವೂ ಸಹ ನನಗೆ ಬೆಂಬಲ ನೀಡಿತ್ತು. ಎಲ್ಲರೂ ಸಹಕಾರ ನೀಡಿದ ಕಾರಣ ನನ್ನ ಗೆಲುವಿಗೆ ಎಲ್ಲರೂ ಕಾರಣರು, ಬಿಜೆಪಿ ಪಕ್ಷ ಇಡೀ ದೇಶದೆಲ್ಲೆಡೆ ಭರ್ಜರಿ ಜಯ ದಾಖಲಿಸಿದೆ ಆದ ಕಾರಣ ಬಿಜೆಪಿ ಪಕ್ಷಕ್ಕೆ ಶುಭಾಶಯ ಸಲ್ಲಿಸುತ್ತಿದ್ದೇನೆ. ಇನ್ನು ಬಿಜೆಪಿ ಸೇರುವ ಬಗ್ಗೆ ನನಗಾಗಿ ಕೆಲಸ ಮಾಡಿದ ಮಂಡ್ಯ ಜಿಲ್ಲೆಯ ಜನರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ, ನಾನು ಪಕ್ಷೇತರ ಅಭ್ಯರ್ಥಿಯಾಗಿದ್ದು ಮಂಡ್ಯ ಅಭಿವೃದ್ಧಿಗೆ ಯಾವ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದು ಎಂದು ಜನರು ಹಾಗೂ ರೈತರು ತೀರ್ಮಾನ ಮಾಡುತ್ತಾರೆಯೋ ಅದರಂತೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.ಮೂಲಗಳ ಪ್ರಕಾರ ಸುಮಲತಾ ಅಂಬರೀಶ್ ರವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗುತ್ತಿದೆ.

Post Author: Ravi Yadav