ಮೋದಿಗೆ ಉಘೇ ಉಘೇ ಎಂದ ಚೀನಾ ಅಧ್ಯಕ್ಷ- ಮೋದಿ ಆಡಳಿತದ ಕುರಿತು ಹೇಳಿದ್ದೇನು ಗೊತ್ತಾ??

ಮೋದಿಗೆ ಉಘೇ ಉಘೇ ಎಂದ ಚೀನಾ ಅಧ್ಯಕ್ಷ- ಮೋದಿ ಆಡಳಿತದ ಕುರಿತು ಹೇಳಿದ್ದೇನು ಗೊತ್ತಾ??

ನೀವು ಏನೇ ಹೇಳಿ ನರೇಂದ್ರ ಮೋದಿ ಅವರು ಭಾರತ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಕಳೆದ ಐದು ವರ್ಷದಲ್ಲಿ ಭಾರತದ ವರ್ಚಸ್ಸು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಚ್ಚಿದೆ. ವಿಶ್ವದಲ್ಲಿರುವ ಬಲಾಢ್ಯ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ತುದಿಗಾಲಲ್ಲಿ ಕಾದು ಕುಳಿತಿವೆ, ಇನ್ನು ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನವು ನರೇಂದ್ರ ಮೋದಿರವರ ಆಡಳಿತವನ್ನು ಕಂಡು ತೆಪ್ಪಗಾಗಿವೆ. ಏನೇ ಮಾಡಿದ್ರು ಸುಮ್ಮನೆ ಕೂರುವ ಹಳೆಯ ಭಾರತವಲ್ಲ ಇದು ನರೇಂದ್ರ ಮೋದಿರವರ ನೇತೃತ್ವದ ನವಭಾರತ, ಕಾಲ್ಕೆರೆದು ಜಗಳಕ್ಕೆ ಬಂದು ತಪ್ಪು ಮಾಡಿದರೆ ತಕ್ಕ ತಿರುಗೇಟು ನೀಡುತ್ತೇವೆ ಎಂಬುದನ್ನು ಈಗಾಗಲೇ ಹಲವು ಬಾರಿ ಸಾಬೀತು ಮಾಡಿದ್ದಾರೆ. ಆದರೆ ಇದೀಗ ನರೇಂದ್ರ ಮೋದಿ ರವರ ಆಡಳಿತವನ್ನು ಕಂಡು ಚೀನಾ ದೇಶವು ಹಾಡಿಹೊಗಳಿದೆ. ಅಷ್ಟಕ್ಕೂ ವಿಷಯದ ಮೂಲವೇನು ಗೊತ್ತಾ?? ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಕಳೆದ ಐದು ವರ್ಷಗಳಲ್ಲಿ ಭಾರತ ದೇಶವು ವಿಶ್ವದಲ್ಲಿಯೇ ಬಲಾಢ್ಯ ಆರ್ಥಿಕ ದೇಶವಾಗಿ ಮಾರ್ಪಡುತ್ತಿದೆ ಎಂದು ಹಲವಾರು ವರದಿಗಳು ಹೊರಬಿದ್ದಿವೆ. ಒಂದು ವೇಳೆ ಭಾರತದ ಪ್ರಗತಿ ಇದೇ ರೀತಿ ಮುಂದುವರೆದಲ್ಲಿ ಕೆಲವೇ ಕೆಲವು ವರ್ಷಗಳಲ್ಲಿ ಭಾರತ ವಿಶ್ವಗುರು ಆಗುತ್ತದೆ ಎಂಬ ವರದಿಗಳನ್ನು ವಿಶ್ವಬ್ಯಾಂಕ್ ಹಾಗೂ ವಿಶ್ವ ಸಂಸ್ಥೆಯು ಈಗಾಗಲೇ ಬಹಿರಂಗಪಡಿಸಿವೆ. ಈ ರೀತಿಯ ಸದೃಢ ಆರ್ಥಿಕತೆ ಹಾಗೂ ಜನರ ಜೀವನದ ಮಟ್ಟವನ್ನು ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.

ಇದೇ ಕಾರಣಕ್ಕಾಗಿ ಇದೀಗ ಭಾರತದ ನೆರೆ ಹಾಗೂ ಶತ್ರು ರಾಷ್ಟ್ರವಾಗಿರುವ ಚೀನಾದೇಶವು ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದೆ. ಇಷ್ಟು ದಿವಸ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೇ ಚೀನಾ ದೇಶಕ್ಕೆ ಹಲವಾರು ಸವಾಲುಗಳು ಎದುರಾಗುತ್ತವೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡುತ್ತಿದ್ದವು. ಅದು ಅಕ್ಷರಸಹ ಸತ್ಯ, ಯಾಕೆಂದರೆ ಈಗಾಗಲೇ ಹಲವಾರು ಬಾರಿ ವಿಶ್ವಮಟ್ಟದಲ್ಲಿ ಭಾರತವು ಚೀನಾ ದೇಶಕ್ಕೆ ಸರಿಯಾದ ತಿರುಗೇಟು ನೀಡಿದೆ. ಅದರಲ್ಲಿಯೂ ಡೋಕ್ಲಾಮ್ ವಿವಾದ, ಉಗ್ರ ಅಜರ್ ನನ್ನು ಭಯೋತ್ಪಾದಕರ ಜಾಗತಿಕ ಪಟ್ಟಿಗೆ ಸೇರುವಿಕೆಯ ವಿಚಾರಗಳು ಪ್ರಮುಖವಾದವು.

ಇಷ್ಟೆಲ್ಲಾ ನಡೆದರೂ ಸಹ ಇದೀಗ ಚೀನಾ ದೇಶದ ಅಧ್ಯಕ್ಷರಾಗಿರುವ ಜಿನ್ ಪಿಂಗ್ ರವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರದ ಏರಿರುವುದಕ್ಕೆ ಸಂತಸವನ್ನು ಹೊರಹಾಕಿ ನರೇಂದ್ರ ಮೋದಿ ರವರು ಭಾರತದ ಆರ್ಥಿಕತೆಯ ಅಭಿವೃದ್ಧಿ ಹಾಗೂ ಜನರ ಜೀವನ ಮಟ್ಟವನ್ನು ಸುಧಾರಿಸಲು ಕಳೆದ 5ವರ್ಷಗಳಲ್ಲಿ ಬಹಳ ಶ್ರಮ ಪಟ್ಟಿದ್ದಾರೆ. ಪ್ರಧಾನಿ ಮೋದಿ ರವರ ನೇತೃತ್ವದಲ್ಲಿ ಭಾರತದ ಆಡಳಿತವು ಬಹಳ ಪ್ರಗತಿಯನ್ನು ಕಂಡಿದೆ. ಭಾರತ ಮತ್ತು ಚೀನಾ ದೇಶಗಳ ನಡುವೆ ಸುದೀರ್ಘ ಕಾಲದ ಸ್ನೇಹವಿದೆ ಇದನ್ನು ಹೀಗೆ ಮುಂದುವರಿಸಲು ನರೇಂದ್ರ ಮೋದಿರವರ ಸಹಕರಿಸಬೇಕು ಎಂದು ಕೋರಿಕೊಂಡು, ಶುಭಾಶಯಗಳನ್ನು ತಿಳಿಸಿದ್ದಾರೆ.