ಬಿಜೆಪಿಯ ನೂತನ ಸಂಸದರಿಗೆ ಖಡಕ್ ಸಂದೇಶ ರವಾನೆ ಮಾಡಿದ ನರೇಂದ್ರ ಮೋದಿ- ಮುಂದಿದೆ ಮಾರಿ ಹಬ್ಬ !!

ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗುವುದು ಈಗಾಗಲೇ ಖಚಿತವಾಗಿದೆ. ಔಪಚಾರಿಕ ಸಭೆ ಎಂಬಂತೆ ಇಂದು ದೆಹಲಿಯ ಸಂಸತ್ ಹಾಲಿನಲ್ಲಿ ಬಿಜೆಪಿ ಪಕ್ಷವು ತನ್ನ ಮೈತ್ರಿ ಪಕ್ಷಗಳ ಜೊತೆ ಸಂಸದೀಯ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟದ ಎಲ್ಲಾ ಪಕ್ಷದ ನಾಯಕರು ನರೇಂದ್ರ ಮೋದಿ ರವರು ಮತ್ತೊಮ್ಮೆ ಪ್ರಧಾನಿಯಾಗಿ ಮುಂದುವರೆಯುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂಬುವುದರ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ನರೇಂದ್ರ ಮೋದಿ ಅವರು ಕೇವಲ ಪ್ರಮಾಣ ವಚನ ಸ್ವೀಕರಿಸುವುದಷ್ಟೇ ಬಾಕಿ ಇದೆ. ಈ ಎಲ್ಲಾ ಬೆಳವಣಿಗೆಗಳ ನಂತರ ಮಾತನಾಡಿದ ನರೇಂದ್ರ ಮೋದಿ ರವರು ಬಿಜೆಪಿ ಪಕ್ಷ ಸೇರಿದಂತೆ ಎನ್ಡಿಎ ಮೈತ್ರಿಕೂಟಗಳ ಎಲ್ಲಾ ಪಕ್ಷದ ಸಂಸದರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಸಂಸದರ ಐಷಾರಾಮಿ ಜೀವನಕ್ಕೆ ಬ್ರೇಕ್ ಹಾಕಿ, ದೆಹಲಿಗೆ ಯಾವುದೇ ಸಂಸದರು ಬಂದರೂ ಸಹ ಪಂಚತಾರಾ ಹೋಟೆಲ್ ಗಳಲ್ಲಿ ಉಳಿದುಕೊಂಡರೆ ಸರ್ಕಾರ ವೆಚ್ಚ ಭರಿಸುವುದಿಲ್ಲ ಬದಲಾಗಿ, ರಾಜಭವನದ ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಆದೇಶ ಹೊರಡಿಸುವುದರ ಮೂಲಕ ಸಂಸದರ ದುಂದುವೆಚ್ಚಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ ಎಂದು ಮನದಟ್ಟು ಮಾಡಿಕೊಟ್ಟಿದ್ದರು. ಇದೀಗ ಮತ್ತೊಂದು ಎಚ್ಚರಿಕೆ ನೀಡಿರುವ ನರೇಂದ್ರ ಮೋದಿ ರವರು ಮುಂದಿನ ಐದು ವರ್ಷಗಳ ಚಿತ್ರಣವನ್ನು ತೆಗೆದು ಇಟ್ಟಿದ್ದಾರೆ. ನರೇಂದ್ರ ಮೋದಿ ರವರ ಈ ಮಾತುಗಳನ್ನು ಕೇಳಿದರೆ, ದೇಶದ ಒಳಿತಿಗಾಗಿ ಕಳೆದ ಬಾರಿ ಮತದಾರರಿಗೆ ತೊಂದರೆಯಾದರೂ ಪರವಾಗಿಲ್ಲ, ದೇಶಕ್ಕಾಗಿ ಕೆಲವು ದಿನ ತೊಂದರೆ ಅನುಭವಿಸಿದರೆ ತಪ್ಪೇನಿಲ್ಲ ಎಂದು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರು. ದೇಶಕ್ಕಾಗಿ ತಮ್ಮ ಮತಗಳ ಬಗ್ಗೆ ಯೋಚಿಸದ ನರೇಂದ್ರ ಮೋದಿ ರವರು ಇನ್ನು ಸಂಸದರು ಕೆಲಸ ಮಾಡದಿದ್ದರೆ ಯಾವ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದು ಜನರ ಊಹೆಗೆ ಬಿಟ್ಟದ್ದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ? ನರೇಂದ್ರ ಮೋದಿ ರವರ ಮಾತುಗಳನ್ನು ತಿಳಿಯಲು ಒಮ್ಮೆ ಸಂಪೂರ್ಣ ಓದಿ. ನಾವು ದೆಹಲಿಯ ಸೆಂಟ್ರಲ್ ಹಾಲಿನಲ್ಲಿ ಸೇರಿರುವುದು ಸಾಮಾನ್ಯ ವಿಷಯಕ್ಕಾಗಿ ಅಲ್ಲ, ನಾವು ನವಭಾರತ ನಿರ್ಮಾಣಕ್ಕೆ ಮುಂದಾಗಬೇಕಾಗಿದೆ. ಯಾತ್ರೆ ಈ ಕ್ಷಣದಿಂದ ಆರಂಭವಾಗಬೇಕು, ಇಡೀ ದೇಶದ ರಾಜಕೀಯದಲ್ಲಿ ಬದಲಾವಣೆ ಬರುತ್ತಿದೆ. ಇಂತಹ ಬದಲಾವಣೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಎನ್ಡಿಎ ಮೈತ್ರಿಕೂಟಕ್ಕೆ ಪ್ರಚಂಡ ಬಹುಮತ ದೊರೆತಿದೆ, ಮತದಾರರು ನಮ್ಮನ್ನು ನಂಬಿ ಮತ ನೀಡಿದ್ದಾರೆ. ದಿನದಿಂದ ದಿನಕ್ಕೆ ರಾಜಕೀಯ ಪ್ರಭುದ್ಧವಾಗುತ್ತ ಸಾಗುತ್ತಿದೆ ಸೇವಾಮನೋಭಾವನೆ ಇದ್ದರೆ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ.

ಪ್ರತಿಯೊಬ್ಬ ಸಂಸದರು ಸೇವಾ ಮನೋಭಾವನೆಯಿಂದ ಮುನ್ನುಗ್ಗಬೇಕು, ಅಹಂಕಾರದಿಂದ ದೂರವಿದ್ದು ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಗೆಲ್ಲುತ್ತೇವೆ ಎಂದು ದೇಶದ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ಮಾಡಿದರೆ, ಸುಮ್ಮನೆ ಕೂರುವ ಸರ್ಕಾರ ಇದಲ್ಲ. ಯಾವುದೇ ಸಂಸದರು ಪಾರ್ಟಿ ಹೆಸರಿನಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಭ್ರಮೆಯಲ್ಲಿ ಇರಬಾರದು. ಬದಲಾಗಿ ತಮ್ಮ ಕೆಲಸಗಳ ಮೂಲಕ ಜನರ ಮನಗೆದ್ದು ಗೆಲ್ಲುತ್ತೇನೆ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತಹ ಕೆಲಸಗಳನ್ನು ಮಾಡಬೇಕು. ಇಡೀ ದೇಶದ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬ ಸಂಸದನ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಪಕ್ಷದ ಹೆಸರು ಬಳಸಿಕೊಂಡು ಮತ ಕೇಳುವಂತಹ ಪರಿಸ್ಥಿತಿ ಬಂದರೆ ಸುಮ್ಮನೆ ಕೂರುವುದಿಲ್ಲ ಎಂದು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ

Post Author: Ravi Yadav