ಬ್ರೇಕಿಂಗ್: ನೂತನ ಸಂಸದರಿಗೆ ಬ್ರೇಕ್ ಹಾಕಲು ನಿರ್ಧರಿಸಿದ ಮೋದಿ, ವ್ಹಾ ಶಭಾಷ್ ಮೋದಿಜಿ

ಇಂದು ಇಡೀ ವಿಶ್ವವೇ ಕಾದುಕುಳಿತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಚುನಾವಣೋತ್ತರ ಸಮೀಕ್ಷೆಗಳು ಹಾಗೂ ರಾಜಕೀಯ ಪಂಡಿತರು ಎಲ್ಲರ ಲೆಕ್ಕಾಚಾರಗಳು ಸತ್ಯವಾಗಿವೆ. ಇನ್ನು ಮಹಾಘಟಬಂದನ್ ರಂಗದ ಪರಿಸ್ಥಿತಿಯ ಬಗ್ಗೆ ಹೆಚ್ಚಾಗಿ ವಿವರಣೆ ನೀಡುವ ಅಗತ್ಯವಿಲ್ಲ. ಯಾಕೆಂದರೆ ನರೇಂದ್ರ ಮೋದಿರವರ ಅಲೆಯು ಅಕ್ಷರಸಹ ಸುನಾಮಿಯಾಗಿ ಬದಲಾವಣೆಗೊಂಡು ಪ್ರಾದೇಶಿಕ ಪಕ್ಷಗಳು ಸೇರಿದಂತೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಹೀಗಿರುವಾಗ ಮೊದಲಿನಿಂದಲೂ ಅಚಲ ವಿಶ್ವಾಸದಲ್ಲಿ ಪ್ರಧಾನಿಯಾಗುತ್ತೇನೆ ಎಂದು ನಂಬಿಕೊಂಡಿರುವ ನರೇಂದ್ರ ಮೋದಿ ಅವರು ಮತ್ತೊಂದು ಆದೇಶವನ್ನು ಹೊರಡಿಸಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ.

ಸರ್ಕಾರದ ದುಂದುವೆಚ್ಚಗಳಿಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿರುವ ನರೇಂದ್ರ ಮೋದಿ ರವರು ನೂತನವಾಗಿ ಆಯ್ಕೆ ಯಾಗುವ ಸಂಸದರಿಗೆ ಪಂಚತಾರಾ ಹೋಟೆಲ್ ಗಳಲ್ಲಿ ವಾಸ್ತವ್ಯ ನೀಡದೆ ಐಷಾರಾಮಿ ಖರ್ಚು ವೆಚ್ಚಕ್ಕೆ ತಡೆ ಹಾಕುವ ನಿರ್ಧಾರ ಮಾಡಿದ್ದಾರೆ. ಹೌದು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿ ಫಲಿತಾಂಶ ಪ್ರಕಟಣೆ ಗೊಂಡ ನಂತರ ಸಂಸದರು ದೇಶ ರಾಜಧಾನಿ ದೆಹಲಿಯತ್ತ ವಹಿಸುವುದು ಸಾಮಾನ್ಯ ಸಂಗತಿ. ಇನ್ನು ದೆಹಲಿಯಲ್ಲಿ ಪಂಚತಾರಾ ಹೋಟೆಲ್ ಗಳಲ್ಲಿ ವಾಸ್ತವ್ಯ ಹೂಡುವ ಸಂಸದರ ನಿರ್ಣಯಕ್ಕೆ ಬ್ರೇಕ್ ಹಾಕಿರುವ ನರೇಂದ್ರ ಮೋದಿ ಅವರು ಯಾವುದೇ ಸಂಸದರು ದಿಲ್ಲಿ ಗೆ ಆಗಮಿಸಿದರೆ ಸಂಸತ್ತಿನ ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳಬೇಕು ಎಂಬ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಪಂಚತಾರಾ ಹೋಟೆಲ್ ಗಳಿಗೆ ಕೋಟಿ ಕೋಟಿ ಹಣ ಕಟ್ಟುವ ಬದಲು ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳುವಂತೆ ಮಾಡಿ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧಾರ ಮಾಡಿದ್ದಾರೆ.