ಮೋದಿ ಅಲೆ ಕಂಡು ತೃತೀಯ ರಂಗಕ್ಕೆ ಎಳ್ಳುನೀರು ಬಿಟ್ಟ ದೇವೇಗೌಡರು! ಪ್ರಧಾನಿ ಕನಸು ಭಗ್ನ

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಚುನಾವಣೋತ್ತರ ಸಮೀಕ್ಷೆ ಗಳಲ್ಲಿ ನರೇಂದ್ರ ಮೋದಿರವರ ಅಲೆಯು ಕೇವಲ ಅಲೆಯಾಗಿ ಉಳಿದಿಲ್ಲ ಬದಲಾಗಿ ಐದು ವರ್ಷಗಳ ಸದೃಢ ಅಧಿಕಾರದಿಂದ ಸುನಾಮಿಯಾಗಿ ಪರಿವರ್ತನೆಗೊಂಡಿದೆ ಎಂದು ತಿಳಿದು ಬಂದಿದೆ. ತೃತೀಯ ರಂಗವು ಈ ಸುನಾಮಿಗೆ ಅಡ್ಡ ಗೋಡೆ ಕಟ್ಟಲು ಸುಖಾಸುಮ್ಮನೆ ಪ್ರಯತ್ನ ಪಟ್ಟಿತ್ತು, ಆದರೆ ಸುನಾಮಿಗೆ ಗೋಡೆ ಕಟ್ಟಲು ಸಾಧ್ಯವೇ ಎಂಬ ಅಂಶ ಇದೀಗ ಬಯಲಾಗಿದೆ. ಇಡೀ ದೇಶದಲ್ಲಿ ಇದೀಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು ಹಲವಾರು ಪ್ರಾದೇಶಿಕ ಪಕ್ಷಗಳ ಅಧ್ಯಕ್ಷರ ಪ್ರಧಾನಿಯ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.

ಇನ್ನು ಕೆಲವು ನಾಯಕರು ಚುನಾವಣೋತ್ತರ ಸಮೀಕ್ಷೆ ಗಳನ್ನು ಕಂಡರೂ ಸಹ ಪ್ರಧಾನಿ ಪಟ್ಟಕ್ಕೆ ಏರುವ ಸಾಹಸಗಳನ್ನು ಮಾಡಲು ಇನ್ನಿಲ್ಲದ ರಣತಂತ್ರ ಗಳನ್ನು ಹೆಣೆಯುತ್ತಿದ್ದಾರೆ. ಅದೇ ವಿಚಾರವಾಗಿ ಇಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಆಗಿರುವ ಚಂದ್ರಬಾಬು ನಾಯ್ಡುರವರ ಪ್ರತಿಪಕ್ಷ ನಾಯಕ ರನ್ನು ಭೇಟಿ ಮಾಡಿ ಚುನಾವಣಾ ಆಯೋಗದ ಮುಂದೆ ಧರಣಿ ಕೂತು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾದರು. ಈತನ್ಮಧ್ಯೆ ಕರ್ನಾಟಕ ರಾಜ್ಯದಿಂದ ಪ್ರಧಾನಿಯಾಗುವ ಕನಸು ಕಂಡಿದ್ದ ದೇವೇಗೌಡರು ನರೇಂದ್ರ ಮೋದಿ ಅವರ ಅಲೆ ಕಂಡು ತೃತೀಯ ರಂಗಕ್ಕೆ ಎಳ್ಳುನೀರು ಬಿಟ್ಟಿದ್ದಾರೆ.

ಹೌದು, ಚುನಾವಣಾ ಫಲಿತಾಂಶ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಪಕ್ಷ ಪ್ರಾದೇಶಿಕ ಪಕ್ಷಗಳ ಜೊತೆ ಚುನಾವಣೋತ್ತರ ಮೈತ್ರಿಯ ಕುರಿತು ಹಲವಾರು ಸಭೆಗಳನ್ನು ಏರ್ಪಡಿಸಿತ್ತು. ಸಾಧ್ಯವಾದರೆ ಕಾಂಗ್ರೆಸ್ ಪಕ್ಷವನ್ನು ಹೊರಗೆ ಇಟ್ಟು ಪ್ರಾದೇಶಿಕ ಪಕ್ಷಗಳು ಸರ್ಕಾರ ರಚಿಸುವ ಸಾಧ್ಯತೆಗಳು ಹೆಚ್ಚಾಗಿದ್ದವು. ಒಂದು ವೇಳೆ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರ ಇಟ್ಟು ದಕ್ಷಿಣ ಭಾರತದಿಂದ ಒಂದು ಪಕ್ಷದ ನಾಯಕರು ಪ್ರಧಾನಿಯಾಗಿ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದರು.

ಇದೀಗ ಚುನಾವಣೋತ್ತರ ಸಮೀಕ್ಷೆಗಳಿಂದ ನರೇಂದ್ರ ಮೋದಿ ರವರ ಗೆಲುವು ಖಚಿತ ವಾಗಿ ರುವ ಕಾರಣ ದೇವೇಗೌಡ ರವರು ಯಾವುದೇ ತೃತೀಯ ರಂಗದ ಸಭೆಗಳಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇನ್ನು ಸರ್ಕಾರ ರಚನೆಗೆ ನಡೆಯಬೇಕಿದ್ದ ಪೂರ್ವ ಸಭೆಗಳನ್ನು ಈಗಾಗಲೇ ಕ್ಯಾನ್ಸಲ್ ಮಾಡಿದ್ದು ಎಚ್ ಡಿ ದೇವೇಗೌಡ ರವರು ಯಾವುದೇ ಆಸಕ್ತಿ ವಹಿಸಿದ ಕಾರಣ ಜೆಡಿಎಸ್ ಪಕ್ಷವು ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಸಭೆ ಈ ಮೂಲಕ ನಡೆಯುವ ಸಾಧ್ಯತೆ ಕ್ಷೀಣ ವಾಗಿದ್ದು, ಒಂದು ವೇಳೆ ಬಿಜೆಪಿ ಪಕ್ಷವು ಬಹುಮತ ಗಳಿಸದೆ ಇದ್ದಲ್ಲಿ ನಿರ್ಧಾರ ತೆಗೆದುಕೊಳ್ಳೋಣ ಅಲ್ಲಿಯವರೆಗೂ ತಟಸ್ಥವಾಗಿರೋಣ ಎಂದು ದೇವೇಗೌಡರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Post Author: Ravi Yadav