ಕುತಂತ್ರಿ ನಾಯ್ಡುಗೆ ಬುದ್ಧಿ ಕಲಿಸಿದ ಆಂಧ್ರ ಪ್ರದೇಶದ ಜನ- ಮುಖ್ಯಮಂತ್ರಿ ಸ್ಥಾನ ಢಮಾರ್ !!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಡೀ ದೇಶವೇ ಇಂದು ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕಾದು ಕುಳಿತಿದೆ. ಅದರಂತೆಯೇ ಲೋಕಸಭಾ ಚುನಾವಣೆ ಜೊತೆಗೆ ಆಂಧ್ರಪ್ರದೇಶ ಸೇರಿದಂತೆ ಇನ್ನೂ ಹಲವಾರು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಜನರು ಕಾದು ಕುಳಿತಿದ್ದಾರೆ. ಹೀಗಿರುವಾಗ ಕಳೆದ ಬಾರಿ ನರೇಂದ್ರ ಮೋದಿ ರವರಿಗೆ ಮೊದಲು ಬೆಂಬಲ ನೀಡಿ ತದನಂತರ ಆಂಧ್ರಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂದು ನರೇಂದ್ರ ಮೋದಿ ಅವರ ವಿರುದ್ಧ ಬಹುಮತ ಸಾಬೀತು ಪಡಿಸಿ ಎಂದು ಒತ್ತಾಯ ಮಾಡಿ ಹಲವಾರು ಪಕ್ಷಗಳನ್ನು ನರೇಂದ್ರ ಮೋದಿ ರವರ ವಿರುದ್ಧ ಎತ್ತು ಕಟ್ಟಲು ಹಲವಾರು ತಂತ್ರಗಳನ್ನು ಹೆಣೆದ ಚಂದ್ರಬಾಬು ನಾಯ್ಡುರವರ ಸ್ಥಿತಿ ಇದೀಗ ಹೇಗಾಗಿದೆ ಗೊತ್ತಾ?

ಹೌದು, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು ನಾಯ್ಡುರವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾದಂತೆ ಕಾಣುತ್ತಿದೆ. ಜಗಮೋಹನ್ ರೆಡ್ಡಿ ರವರ ಪಕ್ಷದ ವಿರುದ್ಧ ಹೀನಾಯವಾಗಿ ಸೋಲನ್ನು ಕಾಣುವ ಮುನ್ಸೂಚನೆ ಇದೀಗ ಚುನಾವಣೋತ್ತರ ಸಮೀಕ್ಷೆ ಗಳಲ್ಲಿ ಕಂಡು ಬಂದಿದೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಕತ್ತಿಮಸೆದ ಚಂದ್ರಬಾಬು ನಾಯ್ಡು ಅವರು ಇದೀಗ ತಮ್ಮ ರಾಜ್ಯದಲ್ಲಿಯೇ ಅಧಿಕಾರವನ್ನು ಕಳೆದುಕೊಳ್ಳುವತ್ತ ಸಾಗಿದ್ದಾರೆ, ಬಹುತೇಕ ಸಮೀಕ್ಷೆಗಳಲ್ಲಿ ಆಂಧ್ರ ಪ್ರದೇಶದಲ್ಲಿ ಹೊಸ ಪಕ್ಷದ ಸರ್ಕಾರ ರಚನೆಯಾಗುವುದು ಖಚಿತ ವಾಗಿದೆ. ಅಷ್ಟೇ ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆಯನ್ನು ಮಾಡುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಮಹಾ ಮೈತ್ರಿಯನ್ನು ಮಾಡಿಕೊಂಡು ಪ್ರಧಾನ ಮಂತ್ರಿ ಆಗುತ್ತೇನೆ ಎಂಬ ಕನಸು ಕಾಣುತ್ತಿದ್ದ ಚಂದ್ರಬಾಬು ನಾಯ್ಡು ರವರಿಗೆ ಇದ್ದ ಮುಖ್ಯಮಂತ್ರಿ ಕುರ್ಚಿ ಸಹ ಇದೀಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

Post Author: Ravi Yadav