ಕೊಹ್ಲಿ ಸೇರಿದಂತೆ ಇತರ ನಾಯಕರಿಗೆ ಎಚ್ಚರಿಕೆ ನೀಡಿದ ಅನಿಲ್ ಕುಂಬ್ಳೆ !!

ಇಂದು ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಗಾಗಿ ಕಾದು ಕುಳಿತಿದ್ದಾರೆ. ಭಾರತ ತಂಡದ ಆಟಗಾರರು ಸಹ ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಗಳಲ್ಲಿ ಒಂದಾಗಿದೆ. ಇನ್ನು ವಿಶ್ವಕಪ್ ಕಾಗಿ ತನ್ನದೇ ಆದ ತಂತ್ರ ಹಾಗೂ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಹಲವಾರು ದಿನಗಳು ಬಾಕಿ ಇರುವಂತೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ಬಲಾಡ್ಯ ತಂಡಗಳ ಸೆಣಸಾಟದ ನಡುವೆ ಕ್ರಿಕೆಟ್ ಶಿಶು ಎಂದು ಕರೆಯಲ್ಪಡುವ ಹಲವಾರು ತಂಡಗಳು ಕಾದಾಡಲಿವೆ. ಆದರೆ ಕಳೆದ ಬಾರಿಯ ಕ್ರಿಕೆಟ್ ಶಿಶು ಈ ಬಾರಿ ಬಲಾಡ್ಯ ತಂಡಗಳಿಗೆ ಶಾಕ್ ಕೊಡಲು ಸಿದ್ಧವಾಗಿದೆ ಎಂದು ಅನಿಲ್ ಕುಂಬ್ಳೆ ರವರು ಹೇಳಿಕೆ ನೀಡಿ ಎಲ್ಲಾ ಬಲಾಢ್ಯ ತಂಡಗಳಿಗೂ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ಅನಿಲ್ ಕುಂಬ್ಳೆ ಅವರು ಏನು ಹೇಳಿದ್ದಾರೆ ಗೊತ್ತಾ??

ಕಳೆದ ಬಾರಿಯ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ತಂಡವು ಈ ಬಾರಿ ಬಲಿಷ್ಠ ತಂಡಗಳಿಗೆ ಶಾಕ್ ಕೊಡಲು ಸಿದ್ಧವಾಗಿದೆ, ಬಲಿಷ್ಠ ತಂಡಗಳನ್ನು ಮಣಿಸುವ ಎಲ್ಲಾ ತಂತ್ರಗಳನ್ನು ಈಗಾಗಲೇ ರೂಪಿಸಿದಂತೆ ಕಾಣುತ್ತಿದೆ. ಆಫ್ಘಾನಿಸ್ತಾನ ತಂಡವು ಈ ಬಾರಿ ಕ್ರಿಕೆಟ್ ಶಿಶುವಾಗಿ ಉಳಿದಿಲ್ಲ, ಯಾವುದೇ ತಂಡಕ್ಕೂ ಠಕ್ಕರ್ ಕೊಡುವ ಸಾಮರ್ಥ್ಯವನ್ನು ಹೊಂದಿದೆ. ಆಫ್ಘಾನಿಸ್ತಾನ ತಂಡದ ಆಟಗಾರರಾಗಿರುವ ರಶೀದ್ ಖಾನ್, ಮೋಹಮ್ಮದ್ ನಬಿ, ರೆಹಮಾನ್ ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಅತ್ಯುತ್ತಮ ಪ್ರದರ್ಶನದಿಂದ ಮಿಂಚುತ್ತಿದ್ದಾರೆ. ಹೀಗಾಗಿ ಅಪಾಯ ತಪ್ಪಿದ್ದಲ್ಲ. ಯಾವುದೇ ಕಾರಣಕ್ಕೂ ಆಫ್ಘಾನಿಸ್ಥಾನ ತಂಡವನ್ನು ಲಘುವಾಗಿ ಪರಿಗಣಿಸಬೇಡಿ. ಕಳೆದ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಅತ್ಯುತ್ತಮ ತಂಡವಾಗಿ ಆಫ್ಘಾನಿಸ್ತಾನ ತಂಡವು ಹೊರಹೊಮ್ಮಿದೆ. ಆದ ಕಾರಣದಿಂದ ಈ ಬಾರಿ ಆಫ್ಘಾನಿಸ್ತಾನ ತಂಡವು ಎಲ್ಲರ ಲೆಕ್ಕಾಚಾರ ಬುಡಮೇಲು ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಅನಿಲ್ ಕುಂಬ್ಳೆ ಅವರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav