ಮೋದಿ ಅಲೆಗೆ ಕೊಚ್ಚಿಕೊಂಡು ಹೋಗ್ತಾರಾ ಖರ್ಗೆ? ಸಮೀಕ್ಷೆ ಹೇಳಿದ್ದೇನು ಗೊತ್ತಾ??

ಮೋದಿ ಅಲೆಗೆ ಕೊಚ್ಚಿಕೊಂಡು ಹೋಗ್ತಾರಾ ಖರ್ಗೆ? ಸಮೀಕ್ಷೆ ಹೇಳಿದ್ದೇನು ಗೊತ್ತಾ??

ನಿಮಗೆಲ್ಲರಿ ಮತ್ತೊಮ್ಮೆಗೂ ತಿಳಿದಿರುವ ಹಾಗೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಪ್ರಭುತ್ವ ಮೆರೆಯಲಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಬಹುಮತವನ್ನು ಸಾಧಿಸಿ ಅಧಿಕಾರದ ಗದ್ದುಗೆ ಏರಲಿದೆ. ಇನ್ನು ಕರ್ನಾಟಕ ರಾಜ್ಯದ ಚುನಾವಣೋತ್ತರ ಸಮೀಕ್ಷೆ ಯ ಬಗ್ಗೆ ಗಮನಹರಿಸಿದರೆ ಬಿಜೆಪಿ ಪಕ್ಷವು ಸರಾಸರಿ ಕನಿಷ್ಠ 18 ರಿಂದ 20 ಕ್ಷೇತ್ರಗಳಲ್ಲಿ ಗೆದ್ದು ಬೀಗುತ್ತದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಹೀಗಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಆತಂಕ ಎದುರಾಗಿದ್ದು ಮುಂದೇನು ಎಂಬ ಚಿಂತೆ ಕಾಡತೊಡಗಿದೆ. ಕಾಂಗ್ರೆಸ್ ಪಾಲಿಗೆ ಬಹು ಆಘಾತಕಾರಿ ಯಾಗಿರುವ ಸಿ ವೋಟರ್ ಸಮೀಕ್ಷೆಯಲ್ಲಿ ಮತ್ತೊಂದು ಶಾಕಿಂಗ್ ವರದಿ ಹೊರ ಬಿದ್ದಿದ್ದು, ಒಂದು ವೇಳೆ ಇದು ಸತ್ಯ ವಾದರೆ ಕರ್ನಾಟಕ ಮತ್ತಷ್ಟು ಕೇಸರಿಮಯ ವಾಗಲಿದೆ.

ಇದೀಗ ಕರ್ನಾಟಕದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಕಲಬುರ್ಗಿ ಕ್ಷೇತ್ರದ ಕಡೆ ಗಮನ ಹರಿಸಿದರೆ, ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದು ಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ರವರಿಗೆ ಸಿ ವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಸೋಲಾಗಲಿದೆ ಎಂಬ ಶಾಕಿಂಗ್ ವರದಿ ಹೊರಬಿದ್ದಿದೆ. ಒಂಬತ್ತು ಬಾರಿ ವಿಧಾನಸಭೆ ಹಾಗೂ ಎರಡು ಬಾರಿ ಲೋಕಸಭೆಗೆ ನಿರಂತರವಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕೊನೆಯ ಚುನಾವಣೆಯಲ್ಲಿ ಸೋಲುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ವರದಿ ಹೊರಬಿದ್ದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿ ಕೊಂಡಿದ್ದ ಉಮೇಶ್ ಜಾದವ್ ರವರು ಬಹಳ ಸುಲಭವಾಗಿ ಗೆದ್ದು ಬೀಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಒಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಫಲಿತಾಂಶ ತಿಳಿಯಲಿದ್ದು, ಭಾರಿ ಕುತೂಹಲ ಮೂಡಿಸಿರುವ ಚುನಾವಣೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಮೇ 23 ನೇ ತಾರೀಖಿನಂದು ಚುನಾವಣಾ ಫಲಿತಾಂಶ ಪ್ರಕಟಣೆ ಗೊಳ್ಳಲ್ಲಿದ್ದು ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.