ಬಿಗ್ ನ್ಯೂಸ್: ಕರ್ನಾಟಕ ರಾಜಕೀಯಕ್ಕೆ ಚಾಣಕ್ಯನ ಎಂಟ್ರಿ, ಬಿಎಸ್ವೈ ಮತ್ತೆ ಸಿಎಂ?? ನಡುಗಿದ ದೋಸ್ತಿಗಳು

ಬಿಗ್ ನ್ಯೂಸ್: ಕರ್ನಾಟಕ ರಾಜಕೀಯಕ್ಕೆ ಚಾಣಕ್ಯನ ಎಂಟ್ರಿ, ಬಿಎಸ್ವೈ ಮತ್ತೆ ಸಿಎಂ?? ನಡುಗಿದ ದೋಸ್ತಿಗಳು

ಕಳೆದ ಒಂದು ವರ್ಷದಿಂದ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅದೃಷ್ಟ ಯಾಕೋ ಚೆನ್ನಾಗಿಲ್ಲ ಕಾಣುತ್ತಿಲ್ಲ. ಮೊದಲಿನಿಂದಲೂ ಸರ್ಕಾರ ಬೀಳುವ ಭೀತಿಯಲ್ಲಿ ಅಧಿಕಾರ ನಡೆಸುತ್ತಿರುವ ಮೈತ್ರಿ ಸರ್ಕಾರವು ಈ ಬಾರಿ ಬಿಜೆಪಿ ಪಕ್ಷದ ತಂತ್ರವನ್ನು ಮಣಿಸಿ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವೇ ಎಂಬ ಅನುಮಾನ ಎಲ್ಲರಲ್ಲೂ ಬಲವಾಗಿ ಮೂಡಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹೀನಾಯವಾಗಿ ಸೋಲುತ್ತದೆ ಎಂಬ ಫಲಿತಾಂಶ ಹೊರಬಿದ್ದಿದೆ. ಇದರ ಬೆನ್ನಲ್ಲೇ ವಾದವಿವಾದಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಆರಂಭವಾಗಿದ್ದು ಸೋಲಿನ ಹೊಣೆ ಹೊರಲು ಯಾರು ಸಿದ್ಧವಾಗಿಲ್ಲ ಎಂಬುದು ಹಲವಾರು ನಾಯಕರ ಹೇಳಿಕೆಗಳಿಂದ ಕಂಡುಬರುತ್ತಿದೆ.

ಕೆಲವು ಗಂಟೆಗಳ ಹಿಂದಷ್ಟೇ ಜೆಡಿಎಸ್ ಪಕ್ಷದ ನಾಯಕ ಶರವಣ ರವರು ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ತಪ್ಪು ಮಾಡಿದೆವು ಎಂದೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಇಷ್ಟು ಸಾಲದು ಎಂಬಂತೆ ಇಂದು ರಾಹುಲ್ ಗಾಂಧಿ ರವರ ಜೊತೆ ಸಭೆ ನಡೆಸಿದ ಕಾಂಗ್ರೆಸ್ ಪಕ್ಷದ ಹಲವಾರು ನಾಯಕರು ಜೆಡಿಎಸ್ ಪಕ್ಷದ ಜೊತೆ ಮೈತ್ರಿಯಿಂದ ನಮಗೆ ಲಾಭಕ್ಕಿಂತ ನಷ್ಟ ಹೆಚ್ಚು ಎಂದು ಅಭಿಪ್ರಾಯ ಪಟ್ಟಿರುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯ. ಈತನ್ಮಧ್ಯೆ ರಮೇಶ್ ಜಾರಕಿಹೊಳಿ ಅವರು ಮತ್ತೊಮ್ಮೆ ದೆಹಲಿಗೆ ಹಾರಿದ್ದು, ಸದ್ಯದಲ್ಲೇ ಸಿಹಿ ಸುದ್ದಿ ನೀಡುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಹೊರಟಿದ್ದಾರೆ. ಇನ್ನೊಂದು ಕಡೆ ಇಷ್ಟು ದಿವಸ ಸರ್ಕಾರ ಉಳಿಯಲು ಕಾರಣಕರ್ತರಾಗಿದ್ದ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಚುನಾವಣೆ ಮುಗಿಯುತ್ತಿದ್ದಂತೆ ತಮ್ಮ ಕುಟುಂಬದ ಸಮೇತ ಆಸ್ಟ್ರೇಲಿಯಾ ಗೆ ಪ್ರವಾಸಕ್ಕೆ ತೆರಳಿದ್ದಾರೆ, ಇವರ ಸ್ಥಾನವನ್ನು ಮತ್ತೊಬ್ಬರು ತುಂಬಲು ಯಾವ ಒಬ್ಬ ಪ್ರಭಾವಿ ನಾಯಕರು ಇಲ್ಲ.

ಇಷ್ಟೆಲ್ಲಾ ಸವಾಲುಗಳನ್ನು ಎದುರಿಸುತ್ತಿರುವ ಮೈತ್ರಿ ಸರ್ಕಾರಕ್ಕೆ ಇದೀಗ ಮತ್ತೊಂದು ದೊಡ್ಡ ಸವಾಲು ಎದುರಾಗುವ ಭೀತಿ ಇದೆ, ಅದುವೇ ಚಾಣಕ್ಯ. ಹೌದು ಬಿಜೆಪಿ ಪಕ್ಷದ ಚಾಣಕ್ಯ ಎಂದು ಖ್ಯಾತಿ ಪಡೆದು ಕೊಂಡಿರುವ ಅಮಿತ್ ಶಾ ರವರು ಇದೀಗ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಚುನಾವಣೋತ್ತರ ಸಮೀಕ್ಷೆ ಹೊರಬೀಳುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ತನ್ನ ಆಟ ಆರಂಭಿಸಿರುವ ಅಮಿತ್ ಶಾ ರವರು ಇದೀಗ ಕರ್ನಾಟಕದಲ್ಲಿಯೂ ತನ್ನ ಆಟ ಆರಂಭಿಸಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಹೊರಬಿದ್ದಿದೆ. ಮಧ್ಯಪ್ರದೇಶ ನಂತರ ದಕ್ಷಿಣ ಭಾರತದ ಬಿಜೆಪಿ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಅಮಿತ್ ಶಾ ರವರ ಮುಂದಿನ ಟಾರ್ಗೆಟ್ ಎಂದು ರಾಜಕೀಯ ಪಂಡಿತರು ಈ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.

ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದ್ದು ಖುದ್ದು ಸರ್ಕಾರ ರಚಿಸುವಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಅಮಿತ್ ಶಾ ರವರು ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಎಂಟ್ರಿ ಕೊಟ್ಟು ಯಡಿಯೂರಪ್ಪನವರನ್ನು ಮತ್ತೊಮ್ಮೆ ಸಿಎಂ ಮಾಡುತ್ತಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ದೋಸ್ತಿಗಳ 1 ವರ್ಷದ ಅಧಿಕಾರ ಅಂತ್ಯವಾಗಿ ಯಡಿಯೂರಪ್ಪನವರು ಮತ್ತೊಮ್ಮೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಕೊಳ್ಳಲು ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಅದು ನಡೆದಲ್ಲಿ ಭಾರತ ದೇಶವು ಬಹುತೇಕ ಕೇಸರಿಮಯ ವಾಗಲಿದೆ, ಹಾಗೂ ಕರ್ನಾಟಕದಲ್ಲಿ ಕೇಸರಿ ಬಾವುಟಗಳು ರಾರಾಜಿಸಲಿವೆ. ವಿಶ್ವವೇ ಎದುರು ನೋಡುತ್ತಿರುವ ಮುಂದಿನ ಲೋಕಸಭಾ ಚುನಾವಣೆ ಫಲಿತಾಂಶ 23ನೇ ತಾರೀಖಿನಂದು ಪ್ರಕಟಣೆ ಗೊಳ್ಳಲಿದ್ದು, ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.