ಬಿಗ್ ನ್ಯೂಸ್: ಮೋದಿ ಕಾರ್ಯವೈಖರಿ ಕಂಡು ಬೆರಗಾದ ಪ್ರಬಲ ನಾಯಕ ! ಬಿಜೆಪಿಗೆ ಆನೆಬಲ !!

ಈಗಾಗಲೇ ಹಲವಾರು ಸಮೀಕ್ಷೆಗಳಲ್ಲಿ ಬಿಜೆಪಿ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತವಾಗಿದೆ. ಇನ್ನು ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಬಹುಮತವನ್ನು ಪಡೆದು ಅಧಿಕಾರದ ಗದ್ದುಗೆ ಏರಲಿದೆ ಎಂಬ ಫಲಿತಾಂಶಗಳು ಹೊರ ಬೀಳುತ್ತಿವೆ. ಪರಿಸ್ಥಿತಿ ಹೀಗಿರುವಾಗ ಒಂದು ವೇಳೆ ಬಿಜೆಪಿ ಪಕ್ಷವು ಬಹುಮತ ಸಾಧಿಸಲು ವಿಫಲವಾದಲ್ಲಿ, ಕೇವಲ ಒಂದು ಎರಡು ಲೋಕಸಭಾ ಸೀಟುಗಳನ್ನು ಇಟ್ಟುಕೊಂಡು ನಾವ್ ಯಾಕೆ ಪ್ರಧಾನಿ ಆಗಬಾರದು ಎಂದು ಹಲವಾರು ನಾಯಕರು ಈಗಾಗಲೇ ತಮ್ಮದೇ ಆದ ರಣತಂತ್ರ ರೂಪಿಸಿ ಕೊಂಡು ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಒಂದು ವೇಳೆ ಅದೇ ನಡೆದಲ್ಲಿ ಪ್ರಾದೇಶಿಕ ಪಕ್ಷಗಳು ಎಲ್ಲರೂ ಒಟ್ಟಾಗಿ ಸರ್ಕಾರ ರಚಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಇನ್ನೂ ಕೆಲವು ಪ್ರಾದೇಶಿಕ ಪಕ್ಷಗಳು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತವೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಆದರೆ ಪ್ರಧಾನಿಯಾಗುವ ಕನಸನ್ನು ಕೆಲವರು ಕಂಡು ಮೋದಿ ಅವರಿಗೆ ಕೈ ಕೊಡುವ ಸಾಧ್ಯತೆಗಳು ಹೆಚ್ಚಾಗಿವೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಮೈತ್ರಿ ಸರ್ಕಾರಗಳು ಅಧಿಕಾರಕ್ಕೆ ಬಂದಲ್ಲಿ ಅಭಿವೃದ್ಧಿಯ ಹಾದಿ ದುರ್ಗಮವಾಗಲಿದೆ, ಇದಕ್ಕೆ ಈಗಾಗಲೇ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಎರಡು ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡರೆ ಪರಿಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗೂ ತಿಳಿದಿದೆ, ಹೀಗಿರುವಾಗ ಇಪ್ಪತ್ತಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿದರೆ ದೇಶದ ಪರಿಸ್ಥಿತಿ ಏನಾಗಬಹುದು ಎಂಬುದು ನಿಮ್ಮ ಊಹೆಗೆ ನಿಲುಕದ್ದು.

ಒಂದು ವೇಳೆ ಅದೇ ನಡೆದು ಬಿಜೆಪಿ ಪಕ್ಷವು ಬಹುಮತದ ಬಳಿ ಹೋಗಿ ಸಂಖ್ಯಾಬಲವನ್ನು ಸಾಧಿಸಲು ವಿಫಲವಾದಲ್ಲಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಲು ಮತ್ತೊಂದು ಪಕ್ಷ ಸಿದ್ಧವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಪಕ್ಷದ ಸೀಟುಗಳ ಸಂಖ್ಯೆ ಯಿಂದ ಬಹಳ ಸುಲಭವಾಗಿ ನರೇಂದ್ರ ಮೋದಿ ಅವರು ಅಧಿಕಾರದ ಗದ್ದುಗೆ ಏರುತ್ತಾರೆ. ಬೇರೆ ಪಕ್ಷಗಳು ವಿಧಿಸುವಂತೆ ಪ್ರಧಾನಿ ಹುದ್ದೆಯಲ್ಲಿ ಬದಲಾವಣೆಯನ್ನು ಈ ಪಕ್ಷ ನಿರೀಕ್ಷಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಯಾಕೆಂದರೆ ಈ ಪಕ್ಷ ಆಕರ್ಷಿತವಾಗಿರುವುದು ಕೇವಲ ನರೇಂದ್ರ ಮೋದಿ ಅವರ ನಾಯಕತ್ವದಿಂದ ಎಂದರೆ ನೀವು ನಂಬಲೇಬೇಕು. ಅಷ್ಟಕ್ಕೂ ಅದು ಯಾವ ಪಕ್ಷ? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಒಡಿಸ್ಸಾ ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಅಲೆ ಜೋರಾಗಿಯೇ ಇತ್ತು. ಆದರೆ ಅಧಿಕಾರದಲ್ಲಿರುವ ಬಿಜೆಡಿ ಪಕ್ಷದ ತಾಕತ್ತು ಎಲ್ಲರಿಗೂ ತಿಳಿದೇ ಇದೆ. ಯಾರೂ ಊಹಿಸದ ರೀತಿಯಲ್ಲಿ ಬೆಳೆದು ನಿಂತಿರುವ ಬಿಜೆಡಿ ಪಕ್ಷವು ಒಡಿಸ್ಸಾ ರಾಜ್ಯದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದೆ. ಬದ್ದ ವೈರಿಗಳಂತೆ ಓಡಿಸಾ ರಾಜ್ಯದ ಅಧಿಕಾರ ಪಕ್ಷ ಹಾಗೂ ಬಿಜೆಪಿ ಪಕ್ಷವು ಲೋಕಸಭಾ ಚುನಾವಣೆಯನ್ನು ಎದುರಿಸಿವೆ. ಆದರೆ ತದನಂತರ ನರೇಂದ್ರ ಮೋದಿರವರು ಒಡಿಸ್ಸಾ ರಾಜ್ಯವು ಫೋನಿ ಚಂಡಮಾರುತಕ್ಕೆ ಒಳಗಾದಾಗ ನೀಡಿದ ನೆರವು ಹಾಗೂ ಅವರ ಕಾರ್ಯವೈಖರಿಗೆ ಆಕರ್ಷಿತರಾಗಿರುವ ಬಿಜೆಡಿ ಪಕ್ಷದ ನಾಯಕ ಪಟ್ನಾಯಕ್ ಅವರು ಬಿಜೆಪಿ ಪಕ್ಷಕ್ಕೆ ಸರ್ಕಾರ ರಚಿಸಲು ಬೆಂಬಲ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಹೌದು ಫೋನಿ ಚಂಡಮಾರುತ ಒಡಿಸ್ಸಾ ಗೆ ಅಪ್ಪಳಿಸಿದಾಗ ನರೇಂದ್ರ ಮೋದಿರವರು ಏಕಾಏಕಿ ಒಂದು ಸಾವಿರ ಕೋಟಿ ನೆರವನ್ನು ಘೋಷಿಸಿದ್ದರು, ಚಂಡಮಾರುತದ ಮುನ್ಸೂಚನೆ ತಿಳಿದ ತಕ್ಷಣ 10 ಲಕ್ಷಕ್ಕೂ ಹೆಚ್ಚು ಜನರನ್ನು ಕೂಡಲೇ ಸ್ಥಳಾಂತರ ಮಾಡಿ ಲಕ್ಷಾಂತರ ಸಾವುಗಳನ್ನು ನರೇಂದ್ರ ಮೋದಿರವರು ತಪ್ಪಿಸಿದ್ದರು. ನರೇಂದ್ರ ಮೋದಿ ಅವರ ಈ ಕಾರ್ಯಕ್ಕೆ ವಿಶ್ವಸಂಸ್ಥೆಯಿಂದ ಕೂಡ ಬಹಳ ಶ್ಲಾಘನೀಯ ಮಾತುಗಳು ಕೇಳಿಬಂದಿದ್ದವು. ಪಕ್ಷವನ್ನು ಮರೆತು ನರೇಂದ್ರ ಮೋದಿರವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಜೊತೆ ಸೇರಿಕೊಂಡು ಒಡಿಸ್ಸಾ ರಾಜ್ಯದಲ್ಲಿ ಚಂಡಮಾರುತದ ಪರಿಣಾಮ ಗಳನ್ನು ಬಹಳ ಚಾಕಚಕ್ಯತೆಯಿಂದ ನಿರ್ವಹಣೆ ಮಾಡಿದರು.

ನರೇಂದ್ರ ಮೋದಿ ರವರ ಈ ಕಾರ್ಯದಿಂದ ಆಕರ್ಷಿತರಾಗಿ ರುವ ನವೀನ್ ಪಟ್ನಾಯಕ್ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಎಲ್ಲಾ ಸಾಧ್ಯತೆಗಳು ಇವೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಈ ಅಭಿಪ್ರಾಯಕ್ಕೆ ಮತ್ತಷ್ಟು ಪೂರಕ ಎಂಬಂತೆ ನವೀನ್ ಪಟ್ನಾಯಕ್ ಅವರು ಈಗಾಗಲೇ ಹಲವಾರು ಬಾರಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಹಾಗೂ ನರೇಂದ್ರ ಮೋದಿ ಅವರಿಗೆ ಖುದ್ದು ಪ್ರಶಂಸೆ ತಿಳಿಸುವ ರೀತಿಯಲ್ಲಿ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಬಿಜೆಪಿ ಪಕ್ಷವು ಬಹುಮತದ ಬಳಿ ಬಂದು ಸಂಖ್ಯಾಬಲ ನಿರೂಪಿಸಲು ವಿಫಲವಾದಲ್ಲಿ ಬಿಜೆಡಿ ಪಕ್ಷ ಕೈ ಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಹೆಮ್ಮೆಯ ಭಾರತ ವನ್ನು ಐದು ವರ್ಷಗಳ ಕಾಲ ಮುನ್ನಡೆಸುವ ನಾಯಕರಾದ ರಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶವೂ ಹೊರಬೀಳುವ ಮುನ್ನವೇ ಮೈತ್ರಿ ಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬಿಜೆಪಿ ಪಕ್ಷ ಬಹುಮತ ವನ್ನು ಸ್ಥಾಪಿಸಿ ಅಧಿಕಾರದ ಗದ್ದುಗೆ ಏರುತ್ತದೆಯೇ? ಪ್ರಾದೇಶಿಕ ಪಕ್ಷಗಳು ಸೇರಿಕೊಂಡು ಸರ್ಕಾರವನ್ನು ರಚಿಸುತ್ತಾರೆಯೇ? ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷಗಳ ಜೊತೆ ಮಹಾ ಮೈತ್ರಿಯನ್ನು ಮಾಡಿಕೊಂಡು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತದೆಯೇ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಮೇ 23 ನೇ ತಾರೀಖಿನಂದು ಸಿಗಲಿದೆ. ಕ್ಷಣ ಕ್ಷಣದ ಚುನಾವಣಾ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಫಾಲೋ ಮಾಡಿ.