ಕೊಹ್ಲಿಯ ನಾಯಕತ್ವದ ಕುರಿತು ದ್ರಾವಿಡ್ ರವರ ಅಭಿಪ್ರಾಯವೇನು ಗೊತ್ತಾ??

ವಿಶ್ವ ಕಪ್ ಟೂರ್ನಿಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಇದೇ ತಿಂಗಳ ಮೇ 22 ನೇ ತಾರೀಖಿನಂದು ಇಂಗ್ಲೆಂಡ್ ಗೆ ತೆರಳಲಿದೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ರಾಷ್ಟ್ರಗಳಲ್ಲಿ ಮೊದಲನೆ ಸಾಲಿನಲ್ಲಿ ನಿಲ್ಲುವ ಭಾರತ ತಂಡವು ಬಾರಿ ಸಿದ್ಧತೆಯೊಂದಿಗೆ ವಿಶ್ವಕಪ್ ಗೆಲ್ಲುವ ಮಹತ್ವಾಕಾಂಕ್ಷೆಯನ್ನು ಮನದಲ್ಲಿ ಇಟ್ಟುಕೊಂಡು ಆಂಗ್ಲರ ನಾಡಿಗೆ ಪ್ರವಾಸ ಬೆಳೆಸಲಿದೆ. ಐಪಿಎಲ್ 12 ನೇ ಆವೃತ್ತಿಯ ನಂತರ ವಿರಾಟ್ ಕೊಹ್ಲಿ ಅವರ ನಾಯಕತ್ವ ತೀವ್ರ ಚರ್ಚೆಗೆ ಗ್ರಾಸವಾಗಿತ್ತು, ಇದೇ ವಿಷಯವಾಗಿ ಮಾತನಾಡಿರುವ ರಾಹುಲ್ ದ್ರಾವಿಡ್ ರವರು ವಿರಾಟ್ ಕೊಹ್ಲಿ ಅವರ ನಾಯಕತ್ವದ ಕುರಿತು ಈ ರೀತಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ರವರು ಮೊದಲಿನಿಂದಲೂ ಪ್ರತಿ ವಿದೇಶಿ ಪ್ರವಾಸದಲ್ಲಿ ಸಾಕಷ್ಟು ಹೊಸತನ್ನು ಕಲಿತಿದ್ದಾರೆ, ಪ್ರತಿ ಬಾರಿ ವಿದೇಶಿ ಪ್ರವಾಸ ಮಾಡಿದ ನಂತರ ಮುಂದಿನ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕೊಹ್ಲಿ ರವರು ತಮ್ಮ ತಪ್ಪನ್ನು ಸಾಕಷ್ಟು ವೇಗದಲ್ಲಿ ತಿದ್ದಿಕೊಂಡು ತಂಡವನ್ನು ಮುನ್ನಡೆಸುತ್ತಾರೆ, ಹೀಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಯಶಸ್ಸು ಸಿಗಲಿದೆ ಎಂದು ರಾಹುಲ್ ದ್ರಾವಿಡ್ ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ ಸರಣಿಗಳಲ್ಲಿಯೂ ವಿರಾಟ್ ಕೊಹ್ಲಿ ರವರು ಹೊಸ ರೀತಿಯ ದಾಖಲೆಗಳನ್ನು ಬರೆಯುತ್ತಾರೆ, ಇದು ವಿರಾಟ್ ಕೊಹ್ಲಿ ರವರ ಪ್ರದರ್ಶನಕ್ಕೆ ಇರುವ ಸಾಕ್ಷಿ. ಹೀಗಾಗಿ 2019ರ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಪ್ರಶಸ್ತಿ ಗೆಲ್ಲುವ ಎಲ್ಲಾ ಹೆಚ್ಚಿನ ಸಾಧ್ಯತೆಗಳಿವೆ ಎಂದು ದ್ರಾವಿಡ್ ಅವರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav