ಸುಮಲತಾ ರವರ ಮೇಲೆ ಕೇಸ್ – ಮುಗಿಬಿದ್ದ 6 ವಕೀಲರು, ಸಾಬೀತಾದರೆ ಗೆದ್ದರೂ ಸಂಸದ ಸ್ಥಾನದಿಂದ ವಜಾ??

ಮಂಡ್ಯ ಜಿಲ್ಲೆಯ ಚುನಾವಣಾ ರಂಗು ಯಾರು ಊಹಿಸದ ರೀತಿಯಲ್ಲಿ ಮುಂದೆ ಸಾಗುತ್ತಿದೆ. ಇಡೀ ಕರ್ನಾಟಕದ ಲೋಕಸಭಾ ಚುನಾವಣೆಯ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿದ್ದು ಮಂಡ್ಯ ಜಿಲ್ಲೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ. ಅದೇ ರೀತಿ ಚುನಾವಣೆ ಮುಗಿದ ನಂತರ ಮಂಡ್ಯ ಜಿಲ್ಲೆಯ ರಾಜಕೀಯ ಚಿತ್ರಣ ಮತ್ತೊಮ್ಮೆ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಅದ್ಯಾಕೋ ಚುನಾವಣೆ ಮುಗಿದ ಮೇಲೂ ಸಹ ಮಂಡ್ಯ ಜಿಲ್ಲೆಯು ಸಹಜ ಸ್ಥಿತಿಗೆ ಮರಳುತ್ತಿಲ್ಲ ಬದಲಾಗಿ ದಿನೇ ದಿನೆ ರಂಗೇರುತ್ತಿದೆ. ಇದೀಗ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದ್ದು ಸುಮಲತಾ ರವರ ಮೇಲೆ ಇದ್ದಕ್ಕಿದ್ದ ಹಾಗೆ 6 ವಕೀಲರು ಕೇಸನ್ನು ದಾಖಲಿ ಸಿದ್ದಾರೆ, ಒಂದು ವೇಳೆ ಈ ಪ್ರಕರಣ ಸಾಬೀತುಗೊಂಡಲ್ಲಿ ಸುಮಲತಾ ರವರು ಗೆದ್ದರೂ ಸಹ ಸಂಸದ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಕರಣದ ಸಂಪೂರ್ಣ ಮಾಹಿತಿ ಹಾಗೂ ರಾಜಕೀಯ ಚಿಂತಕರ ವಿಶ್ಲೇಷಣೆಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುಮಲತಾ ರವರಿಗೆ ಮೊದಲ ಮತ ನೀಡಿದ್ದು ಮಂಡ್ಯ ಜಿಲ್ಲೆಯ ವೀರಯೋಧ, ತಾನು ಸುಮಲತಾ ರವರಿಗೆ ಮತ ನೀಡುತ್ತಿದ್ದೇನೆ ನೀವು ಸಹ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸುಮಲತಾ ಅವರಿಗೆ ಮತ ನೀಡಿ ಎಂದು ನಾನು ಮತ ನೀಡಿದ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಸುಮಲತಾ ರವರನ್ನು ಈ ಪೋಸ್ಟ್ ಟ್ಯಾಗ್ ಮಾಡಿದ್ದ ಯೋಧನನ್ನು ಕಂಡು ಸುಮಲತಾ ರವರು ನಿಮ್ಮ ಈ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ, ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದರು. ತದನಂತರ ಇತ್ತೀಚಿಗೆ ಕೆಲವೇ ಕೆಲವು ದಿನಗಳ ಹಿಂದೆ ಯೋಧನ ಮತ ಅಸಿಂಧು ಎಂದು ಚುನಾವಣಾ ಆಯೋಗ ಪ್ರಕಟನೆ ಮಾಡಿತ್ತು.

ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಿರಣ್ ಕುಮಾರ್, ಸಂತೋಷ್ ಕುಮಾರ್, ಶಿವಕುಮಾರ್, ಶರತ್ ಭರೇಶ್ ಸೇರಿದಂತೆ ಬರೋಬ್ಬರಿ ಆರು ವಕೀಲರು ಸುಮಲತಾ ಅಂಬರೀಶ್ ರವರ ಮೇಲೆ ಇದೀಗ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಯೋಧನು ಮತ ನೀಡಿದ ಬ್ಯಾಲೆಟ್ ಪೇಪರ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ, ಈ ಮೂಲಕ ತಮ್ಮ ರಾಜಕೀಯ ಉದ್ದೇಶಕ್ಕಾಗಿ ದೇಶದ ಯೋಧರನ್ನು ಬಳಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಹಲವಾರು ಸೆಕ್ಷನ್ಗಳಡಿ ಕೇಸು ದಾಖಲಾಗಿದ್ದು ಪ್ರಕರಣದ ತೀರ್ಪಿಗಾಗಿ ಎಲ್ಲರೂ ಕಾದು ಕುಳಿತಿದ್ದಾರೆ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಸುಮಲತಾ ಅಂಬರೀಶ್ ರವರು ಯಾವುದೇ ಫೋಟೋ ಬಳಸಿಕೊಂಡು ಪ್ರಚಾರ ನಡೆಸಿಲ್ಲ. ತಾನು ಮತ ನೀಡಿದ ಫೋಟೋ ಕ್ಲಿಕ್ಕಿಸಿ ಯೋಧನೊಬ್ಬನ ಸಾಮಾಜಿಕ ಜಾಲತಾಣಗಳಲ್ಲಿ ತಾನೇ ಹರಿಬಿಟ್ಟಿದ್ದನು, ಹಾಗೂ ತಾನೇ ಸ್ವತಹ ಸುಮಲತಾ ಅಂಬರೀಶ್ ರವರನ್ನು ಟ್ಯಾಗ್ ಮಾಡಿದ್ದರು ಎನ್ನಲಾಗಿದೆ. ಈ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲದೆ ಇದ್ದರೂ ಸುಮಲತಾ ಅಂಬರೀಶ್ ರವರ ಮೇಲೆ ಕೇಸು ದಾಖಲಿಸಿದ್ದಾರೆ ಎನ್ನಲಾಗುತ್ತಿದ್ದು ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಕ್ರೋಶ ಹೊರ ಹಾಕಿದ್ದಾರೆ. ಆದರೆ ಚುನಾವಣಾ ಅಧಿಕಾರಿಗಳು ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು ಎಂಬುದು ತಿಳಿದಿರುವ ವಿಷಯ ಆದ ಕಾರಣಕ್ಕಾಗಿ ಇದೀಗ ಎಲ್ಲರ ಚಿತ್ತ ಮತ್ತೊಮ್ಮೆ ಮಂಡ್ಯ ಜಿಲ್ಲೆಯತ್ತ ನೆಟ್ಟಿದೆ.

Post Author: Ravi Yadav