ವಿಪಕ್ಷಗಳಿಗೆ ಓಪನ್ ಚಾಲೆಂಜ್ ಎಸೆದ ಮೋದಿ- ತಾಕತ್ತಿದ್ದರೆ ಸ್ವೀಕರಿಸಿ !!

ವಿಪಕ್ಷಗಳಿಗೆ ಓಪನ್ ಚಾಲೆಂಜ್ ಎಸೆದ ಮೋದಿ- ತಾಕತ್ತಿದ್ದರೆ ಸ್ವೀಕರಿಸಿ !!

ನರೇಂದ್ರ ಮೋದಿರವರು ಯಾವುದೋ ಕುಟುಂಬ ರಾಜಕಾರಣದಿಂದ ರಾಜಕೀಯದಲ್ಲಿ ಬೆಳೆದು ಬಂದವರಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ತನ್ನ ರಾಜಕೀಯ ಜೀವನವನ್ನು ಆರಂಭಿಸಿ, ಇಂದು ವಿಶ್ವದಲ್ಲಿಯೇ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಭಾರತದಂತಹ ಮಹಾನ್ ರಾಷ್ಟ್ರಕ್ಕೆ ಪ್ರಧಾನಿಯಾಗಿ ಬೆಳೆದು ನಿಂತಿದ್ದಾರೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ ನರೇಂದ್ರ ಮೋದಿ ರವರ ಮೇಲೆ ಆ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿಲ್ಲ. ಇನ್ನು ಕಳೆದ ಐದು ವರ್ಷಗಳಲ್ಲಿಯೂ ಸಹ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಡೆಸಿದ್ದಾರೆ. ಇಷ್ಟೇ ಅಲ್ಲದೆ ನರೇಂದ್ರ ಮೋದಿರವರು ನಡೆಸುವ ಪ್ರತಿಯೊಂದು ವ್ಯವಹಾರಗಳು ಬಹಳ ಪಾರದರ್ಶಿಕವಾಗಿರುತ್ತವೆ.

ಇದೀಗ ವಿರೋಧ ಪಕ್ಷಗಳಿಗೆ ಇದನ್ನೇ ಅಸ್ತ್ರ ಮಾಡಿಕೊಂಡು ಸವಾಲನ್ನು ಎಸೆದಿರುವ ನರೇಂದ್ರ ಮೋದಿರವರು ನಾನು ದೇಶದ ಪ್ರಧಾನಿಯಾಗಿ ಕಳೆದ ಐದು ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಯಾವುದಾದರೂ ವಿಪಕ್ಷದ ನಾಯಕರು ನಾನು ವೈಯಕ್ತಿಕವಾಗಿ ಸಂಪತ್ತನ್ನು ಕೂಡಿ ಹಾಕಿದ್ದರೆ, ವಿದೇಶಿ ಬ್ಯಾಂಕುಗಳಲ್ಲಿ ಹಣ ಇಟ್ಟಿದ್ದನ್ನು ಸಾಬೀತುಪಡಿಸಿ ಎಂದು ಬಹಿರಂಗ ಸವಾಲ್ ಎಸೆದಿದ್ದಾರೆ. ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಪ್ರಚಾರ ಕೊನೆಗೊಳ್ಳುವ ಒಂದು ದಿನದ ಮುನ್ನ ವಿಪಕ್ಷಗಳಿಗೆ ಸವಾಲನ್ನು ಎಸೆದಿರುವ ನರೇಂದ್ರ ಮೋದಿರವರು, ನನ್ನ ವಿರುದ್ಧ ವ್ಯಂಗದ ಮಾತು, ವ್ಯರ್ಥ ಗೇಲಿ ಮಾತುಗಳನ್ನು ಆಡುವ ಬದಲು ನನ್ನ ಬೇನಾಮಿ ಆಸ್ತಿಯನ್ನು ಸಾಬೀತು ಪಡಿಸಿ ಎಂದು ಬಹಿರಂಗ ಸವಾಲ್ ಎಸೆದಿದ್ದಾರೆ. ನರೇಂದ್ರ ಮೋದಿ ರವರ ಈ ಹೇಳಿಕೆಗೆ ನಮೋ ಭಕ್ತರು ಜೈ ಎಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟನ್ನು ಶೇರ್ ಮಾಡಿ ವಿರೋಧ ಪಕ್ಷದ ಬೆಂಬಲಿಗರಿಗೆ ಸಾಬೀತು ಮಾಡಲು ಸವಾಲ್ ಎಸೆದಿದ್ದಾರೆ.