ಹಗರಣ- ಸಿದ್ದುಗೆ ಬಿಗ್ ಶಾಕ್, ಹಗರಣದ ಕೇಸ್ ರೀ ಓಪನ್ – ಸಾಬೀತಾದರೆ ನೇರ ಜೈಲಿಗೆ

ಹಗರಣ- ಸಿದ್ದುಗೆ ಬಿಗ್ ಶಾಕ್, ಹಗರಣದ ಕೇಸ್ ರೀ ಓಪನ್ – ಸಾಬೀತಾದರೆ ನೇರ ಜೈಲಿಗೆ

ಮಾಜಿ ಮುಖ್ಯಮಂತ್ರಿ ಗಳಾಗಿರುವ ಸಿದ್ದರಾಮಯ್ಯರವರ ಅದೃಷ್ಟ ಯಾಕೋ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ನೀಡಿದ್ದ ತೀರ್ಪನ್ನು ನ್ಯಾಯಾಲಯ ಹಿಂತೆಗೆದುಕೊಂಡಿದೆ. ಈ ಮೂಲಕ ಸಿದ್ದರಾಮಯ್ಯರವರ ಮೇಲೆ ತನಿಖೆ ಮತ್ತೊಮ್ಮೆ ಆರಂಭವಾಗಲಿದ್ದು, ಒಂದು ವೇಳೆ ಸಾಬೀತಾದರೆ ಸಿದ್ದರಾಮಯ್ಯರವರು ನೇರವಾಗಿ ಜೈಲಿಗೆ ಹೋಗಬೇಕಾದ ಸಂದರ್ಭ ಎದುರಾಗಲಿದೆ. ಹೌದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣಕ್ಕೆ ಮರುಜೀವ ಸಿಕ್ಕಿದೆ. ಪ್ರಕರಣವನ್ನು ಮೈಸೂರು ನಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದ್ದು ಸಿದ್ದರಾಮಯ್ಯರವರಿಗೆ ಹೊಸ ತಲೆನೋವು ಆರಂಭವಾಗಿದೆ.

ಕಳೆದ ವರ್ಷ ಮೈಸೂರಿನಲ್ಲಿ ದಾಖಲಾಗಿದ್ದ ದೂರನ್ನು ತನಿಖೆ ನಡೆಸಿದ್ದ ಲಕ್ಷ್ಮೀಪುರ ಠಾಣೆಯ ಪೊಲೀಸರು 2018ರ ನವಂಬರ್ 3 ರಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದರು, ಆದರೆ ಸಿದ್ದರಾಮಯ್ಯರವರು ಬಾದಾಮಿ ಕ್ಷೇತ್ರದ ಶಾಸಕರಾದ ಕಾರಣ ಮೈಸೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾಗಿರುವ ಯಶವಂತ್ ಕುಮಾರ್ ರವರು ಪ್ರಕರಣವನ್ನು ರಾಜಧಾನಿ ಬೆಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ. ಈ ಪ್ರಕರಣ ವಿಚಾರಣೆ ಇದೇ ಜೂನ್ ತಿಂಗಳಿನ 10 ನೇ ತಾರೀಖಿನಂದು ನಡೆಯಲಿದ್ದು ಸಿದ್ದರಾಮಯ್ಯ ರವರ ಮೇಲೆ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಅವರು ಮಾಡಿದ್ದ ಡಿನೋಟಿಫಿಕೇಷನ್ ಹಗರಣದ ಕೇಸ್ ಕೊನೆಗೂ ಮರು ಜೀವ ಪಡೆದುಕೊಂಡಿದೆ.