ಕೆಸಿಆರ್ ಗೆ ಭಾರಿ ಮುಖಭಂಗ- ಅಂತ್ಯವಾದ ಮಹಾಘಟಬಂಧನ್

ಕೇವಲ ಕೆಲವು ದಿನಗಳ ಹಿಂದೆ ದೇಶದಲ್ಲಿ ನರೇಂದ್ರ ಮೋದಿ ರವರ ಅಲೆಯು ಸುನಾಮಿಯಾಗಿ ಬದಲಾವಣೆಗೊಂಡ ನಂತರ, ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬೇರೆ ದಾರಿ ಇಲ್ಲದೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಚುನಾವಣೆಗೂ ಮುನ್ನ ಮಹಾಘಟಬಂಧನ್ ಎಂಬ ತೃತೀಯ ರಂಗವನ್ನು ರಚಿಸಿಕೊಂಡು ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತಾರೆ. ಆದರೆ ಕೇವಲ ಹೆಸರಿಗಷ್ಟೇ ಮಹಾಘಟಬಂಧನ್ ಸೀಮಿತವಾಗುತ್ತದೆ, ಚುನಾವಣೆಗೂ ಮುನ್ನವೇ ಮಹಾಘಟಬಂಧನ್ ಫೇಲ್ ಆಗುತ್ತದೆ. ಇನ್ನುಳಿದಂತೆ ಕೆಲವು ಪ್ರಾದೇಶಿಕ ಪಕ್ಷಗಳು ಮಾತ್ರ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಅಕಾಡಕ್ಕೆ ಇಳಿಯುತ್ತಾರೆ.

ಪರಿಸ್ಥಿತಿ ಹೀಗಿರುವಾಗ ಮೊದಲಿನಿಂದಲೂ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡು ಬಂದಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ ಸಿ ಆರ್ ಅವರು ಪ್ರಧಾನಿ ಕುರ್ಚಿಯ ಮೇಲೆ ಕಣ್ಣನ್ನು ಇಟ್ಟು ಇತ್ತೀಚೆಗೆ ಕೆಲವು ದಿನಗಳಿಂದ ನರೇಂದ್ರ ಮೋದಿ ರವರ ವಿರುದ್ಧವಾಗಿ ಮತ್ತೊಮ್ಮೆ ಮಹಾಘಟಬಂಧನ್ ಎಂಬ ರಂಗವನ್ನು ರಚಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಕಾಂಗ್ರೆಸ್ ಪಕ್ಷದಿಂದ ಮೊದಲಿನಿಂದಲೂ ಅಂತರ ಕಾಯ್ದುಕೊಂಡಿದ್ದ ಕೆಸಿಆರ್ ರವರು ಇದೀಗ ಪ್ರಧಾನಿ ಹುದ್ದೆಗೆ ಆಸೆ ಪಟ್ಟು ಪ್ರಾದೇಶಿಕ ಪಕ್ಷಗಳ ಜೊತೆ ಕಾಂಗ್ರೆಸ್ ಪಕ್ಷದ ಜೊತೆ ಕೈಜೋಡಿಸಿ ದೇಶದ ಪ್ರಧಾನಿಯಾಗಲು ಹೊರಟಿದ್ದಾರೆ ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ಎಲ್ಲರೂ ಊಹಿಸಿದಂತೆ ಕೆಸಿಆರ್ ರವರ ಮಹಾಘಟಬಂಧನ್ ರಂಗದ ರಚನೆ ಆರಂಭದಲ್ಲಿಯೇ ಅಂತ್ಯ ಕಂಡಿದೆ. ಯಾಕೆಂದರೆ ಈ ಬಾರಿ ಪ್ರಧಾನಿ ಕುರ್ಚಿಗೆ ಬರೋಬ್ಬರಿ 20 ಕ್ಕೂ ಹೆಚ್ಚು ಅಭ್ಯರ್ಥಿಗಳು ಚಾನ್ಸ್ ಸಿಕ್ಕರೆ ಪ್ರಧಾನಿಯಾಗಿ ಬಿಡುವ ಎಂದು ಕಾದು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ಅವರು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಮೊದಲಿಂದಲೂ ಕೆಸಿಆರ್ ರವರ ಬದ್ಧ ಶತ್ರುವಾಗಿರುವ ಚಂದ್ರಬಾಬು ನಾಯ್ಡು ಅವರು ಕೆಸಿಆರ್ ಅವರಿಗೆ ಬೆಂಬಲ ನೀಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಪರಿಸ್ಥಿತಿ ಈಗಿರುವಾಗ  ಕೆಸಿಆರ್ ರವರ ಪ್ರಮುಖಆಶಾಭಾವನೆಯಾಗಿದ್ದ ಪಕ್ಷಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಹಾಗೂ ಕಳೆದ ಬಾರಿಯ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲದ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಕೆಸಿಆರ್ ರವರಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ ಮತ್ತು ಕೆಸಿಆರ್ ನೇತೃತ್ವದ ಮಹಾಘಟಬಂಧನ್ ರಂಗಕ್ಕೆ ತಮ್ಮ ಬೆಂಬಲವಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಕೇವಲ ತಮಿಳುನಾಡಿನ ಸ್ಟಾಲಿನ್ ರವರನ್ನು ಭೇಟಿ ಮಾಡಿ ಬೆರಳೆಣಿಕೆಯ ಸೀಟುಗಳನ್ನು ಇಟ್ಟುಕೊಂಡು ಪ್ರಧಾನಿಯಾಗುವ ಕೆಸಿಆರ್ ರವರ ಕನಸಿಗೆ ಇದೀಗ ತಣ್ಣೀರು ಬಿದ್ದಂತಾಗಿದೆ. ಯಾಕೆಂದರೆ ಮಮತಾ, ಮಾಯಾವತಿ ಹಾಗೂ ಅಖಿಲೇಶ್ ಯಾದವ್ ಮೂವರು ಪ್ರಧಾನಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ.

Post Author: Ravi Yadav