ಮತ್ತಷ್ಟು ಸದಸ್ಯರು ಬಿಜೆಪಿಗೆ ಸೇರ್ಪಡೆ-ದೋಸ್ತಿಗಳಿಗೆ ಮತ್ತೊಂದು ಗುದ್ದು ನೀಡಿದ ಬಿಎಸ್ ವೈ

ಕುಂದಗೋಳ ವಿಧಾನಸಭಾ ಉಪ ಚುನಾವಣೆಯನ್ನು ಡಿಕೆ ಶಿವಕುಮಾರ್ ಅವರು ತಮ್ಮ ಪ್ರತಿಷ್ಠೆಯ ಕಣ ವನ್ನಾಗಿ ತೆಗೆದುಕೊಂಡಿದ್ದಾರೆ. ತನ್ನ ಸ್ನೇಹಿತ ಶಿವಳ್ಳಿ ರವರಿಗಾಗಿ ಈ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಬಹಳ ಉತ್ಸಾಹದಿಂದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಇನ್ನು ಬಿಜೆಪಿ ಪಕ್ಷಕ್ಕೆ ತಾನು ಶಾಕ್ ನೀಡುವ ಸಲುವಾಗಿ, ಒಬ್ಬ ಬಿಜೆಪಿ ಮುಖಂಡ ನನ್ನು ಸೆಳೆದು ಆಪರೇಷನ್ ಕಾಂಗ್ರೆಸ್ ಆರಂಭ ಮಾಡಿದ್ದ ಡಿಕೆ ಶಿವಕುಮಾರ್ ಅವರಿಗೆ ಶಾಕ್ ಗಳ ಮೇಲೆ ಶಾಕ್ ಗ ಳು ಎದುರಾಗುತ್ತಿವೆ. ಕೇವಲ ನಿನ್ನೆಯಷ್ಟೇ ಬಿಎಸ್ ವೈ ರವರು ಕುಬಿಹಾಳ ತಾಲೂಕು ಪಂಚಾಯಿತಿ ಸದಸ್ಯರಾಗಿರುವ ಈಶ್ವರಪ್ಪನವರನ್ನು ಸೆಳೆದು ಭಾರಿ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆಯಾಗುವಂತೆ ಮಾಡಿದ್ದರು.

ಇದೀಗ ಮತ್ತೊಮ್ಮೆ ಗರ್ಜಿಸಿರುವ ಬಿ ಎಸ್ ಯಡಿಯೂರಪ್ಪನವರು ಮತ್ತೊಂದು ಆಪರೇಷನ್ ಕಮಲ ನಡೆಸಿ ಯಶಸ್ವಿಯಾಗಿದ್ದಾರೆ. ಮತದಾನಕ್ಕೆ ಇನ್ನು ಕೇವಲ ಕೆಲವೇ ಕೆಲವು ದಿನಗಳು ಇರುವ ಕಾರಣ ಪಕ್ಷಾಂತರ ಗಳು ಬಾರಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶೇಕಡವಾರು ಹೆಚ್ಚು ಮತ ಪ್ರಭಾವವನ್ನು ಹೊಂದಿರುವ ದ್ಯಾವನೂರು ಗ್ರಾಮ ಪಂಚಾಯಿತಿ ಮುಖಂಡರು ಇದೀಗ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಬಿಜೆಪಿ ಪಕ್ಷದ ಬಲ ಮತ್ತು ಹೆಚ್ಚಾಗಿದ್ದು, ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವು ಮೇಲುಗೈ ಸಾಧಿಸಿದೆ. ಒಂದು ವೇಳೆ ಇದೇ ರೀತಿಯ ವರ್ಚಸ್ಸು ಇನ್ನು ಕೇವಲ ಆರು ದಿನಗಳ ಕಾಲ ಮುಂದುವರೆದಲ್ಲಿ ಬಿಜೆಪಿ ಪಕ್ಷವು ಬಹಳ ಸುಲಭವಾಗಿ ಗೆಲುವಿನ ನಗೆ ಬೀರಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ವಾಗಿದೆ.

Post Author: Ravi Yadav