ಮತ್ತೊಂದು ಬೃಹತ್ ದಾಖಲೆ ನಿರ್ಮಿಸಿದ ಬಿಜೆಪಿ ಪಕ್ಷ

ಮತ್ತೊಂದು ಬೃಹತ್ ದಾಖಲೆ ನಿರ್ಮಿಸಿದ ಬಿಜೆಪಿ ಪಕ್ಷ

ಇತ್ತೀಚೆಗೆ ನೀವು ಫೇಸ್ಬುಕ್ ಅಥವಾ ಟ್ವಿಟರ್ ಯಾವುದೇ ಸಾಮಾಜಿಕ ಜಾಲತಾಣ ತೆಗೆದು ನೋಡಿದರೂ ಬಹುಶಹ ನಿಮಗೆ ಇದು ಸಾಮಾಜಿಕ ಜಾಲತಾಣವೊ ಅಥವಾ ಬಿಜೆಪಿ ಪಕ್ಷದ ಮುಖಪುಟವೊ ಎಂಬ ಅನುಮಾನ ಕಾಡುತ್ತದೆ. ಯಾಕೆಂದರೆ ಕೋಟ್ಯಂತರ ಸಂಖ್ಯೆಯಲ್ಲಿ ನರೇಂದ್ರ ಮೋದಿ ರವರ ಕಾರ್ಯಕ್ಷಮತೆಯಿಂದ ಆಕರ್ಷಿತರಾಗಿ ರುವ ನಮೋ ಭಕ್ತರು ಎಂಬ ಹಣೆಪಟ್ಟಿಯನ್ನು ಕಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಹವಾ ಸೃಷ್ಟಿಸಿ, ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಯಾವುದೇ ಅಪೇಕ್ಷೆಯಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಅದರ ಫಲವಾಗಿಯೇ ಬಿಜೆಪಿ ಪಕ್ಷವು ಮತ್ತೊಂದು ದಾಖಲೆಯನ್ನು ನಿರ್ಮಿಸಿದೆ.

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎನಿಸಿಕೊಂಡಿರುವ ಬಿಜೆಪಿ ಪಕ್ಷವು ತನ್ನ ಟ್ವಿಟ್ಟರ್ ಫಾಲೋವರ್ ಗಳ ಸಂಖ್ಯೆಯನ್ನು ಬರೋಬ್ಬರಿ ಹನ್ನೊಂದು ದಶಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ಈ ಕುರಿತು ಸಂತಸವನ್ನು ಹೊರ ಹಾಕಿರುವ ಬಿಜೆಪಿ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ರವರು ಬಿಜೆಪಿ ಪಕ್ಷದ ಖಾತೆ 11 ದಶಲಕ್ಷ ಫಾಲೋವರ್ಗಳ ಗಡಿ ದಾಟಿ ರುವುದಕ್ಕೆ ಸಂತಸವನ್ನು ಹೊರಹಾಕಿ ಇದು ಅತಿ ದೊಡ್ಡ ಮೈಲಿಗಲ್ಲು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇನ್ನುಳಿದಂತೆ ವಿಶ್ವದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಮೂರನೇ ರಾಜಕಾರಣಿ ಎಂದು ಖ್ಯಾತಿ ಪಡೆದು ಕೊಂಡಿರುವ ನರೇಂದ್ರ ಮೋದಿರವರು ಬರೋಬ್ಬರಿ 47.2 ದಶಲಕ್ಷ ಸಾಲುಮರಗಳನ್ನು ಹೊಂದಿದ್ದಾರೆ.