ಮತ್ತೊಂದು ಲೀಗ್ ನಿಂದ ಹಿಂದೆ ಸರಿದು ಬಿಗ್ ಶಾಕ್ ನೀಡಿದ ಎ ಬಿ ಡಿವಿಲಿಯರ್ಸ್

ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿವಿಲಿಯರ್ಸ್ ರವರು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ. ವಿಶ್ವದಲ್ಲಿ ಬಾರಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಎ ಬಿ ಡಿವಿಲಿಯರ್ಸ್ ರವರು ಇತ್ತೀಚೆಗೆ ಯಾಕೋ ಕ್ರಿಕೆಟ್ ಆಟದಿಂದ ದೂರ ಉಳಿಯುವಂತಹ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಎ ಬಿ ಡಿವಿಲಿಯರ್ಸ್ ರವರು, ಇತ್ತೀಚೆಗೆ ಪಾಕಿಸ್ತಾನ ಪ್ರೀಮಿಯರ್ ಲೀಗ್ ನಲ್ಲಿಯೂ ಸಹ ಸಂಪೂರ್ಣವಾಗಿ ತಮ್ಮನ್ನು ತಾವೇ ತೊಡಗಿಸಿಕೊಳ್ಳದೆ ತಮ್ಮ ದೇಶಕ್ಕೆ ಮರಳಿ ತದನಂತರ ಐಪಿಎಲ್ ಲೀಗ್ ನಲ್ಲಿ ಸಂಪೂರ್ಣವಾಗಿ ಆಡಿ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ನೆಮ್ಮದಿಯನ್ನು ನೀಡಿದ್ದರು. ಆದರೆ ಇದೀಗ ಮತ್ತೊಂದು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿಯಲು ಎ ಬಿ ಡಿವಿಲಿಯರ್ಸ್ ರವರು ನಿರ್ಧಾರ ಮಾಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ವಕಪ್ ಮುಗಿದ ನಂತರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಸ್ಟ್ರೇಲಿಯಾ ತಂಡವು ನ್ಯೂಜಿಲೆಂಡ್ ದೇಶದ ವಿರುದ್ಧ ಟೆಸ್ಟ್ ಹಾಗೂ ಭಾರತ ತಂಡದ ವಿರುದ್ಧ ಏಕದಿನ ಸರಣಿಯನ್ನು ಆಡಲು ನಿರ್ಧಾರ ಮಾಡಿದೆ. ಆದ ಕಾರಣದಿಂದ ಬಿಗ್‌ ಬ್ಯಾಶ್‌ ಲೀಗ್ ತನ್ನ ವರ್ಚಸ್ಸನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ. ಇದೀಗ ಎ ಬಿ ಡಿವಿಲಿಯರ್ಸ್ ಅವರು ಸಹ ಬಿಗ್‌ ಬ್ಯಾಶ್‌ ಲೀಗ್ ನಿಂದ ಹೊರಗುಳಿಯುವ ನಿರ್ಧಾರ ವನ್ನು ಮಾಡಿದ್ದಾರೆ ಎನ್ನಲಾಗಿದೆ.ಇದರಿಂದ ಕ್ರಿಕೆಟ್ ಆಸ್ಪ್ರೇಲಿಯಾಗೆ ಮತ್ತೊಂದು ಶಾಕ್ ಎದುರಾಗಿದ್ದು ಲೀಗ್ ಮತ್ತಷ್ಟು ಕಳೆಗುಂದುವ ಸಾಧ್ಯತೆ ಇದೆ.  ಹೌದು ಮುಂದಿನ ಆವೃತ್ತಿಯ ಬಿಗ್‌ ಬ್ಯಾಶ್‌ ಲೀಗ್ ನಿಂದ ಎ ಬಿ ಡಿವಿಲಿಯರ್ಸ್ ರವರು ಹೊರಗುಳಿಯುವ ನಿರ್ಧಾರ ಮಾಡಿದ್ದು ಕಾರಣ ಏನೆಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ ‌. ವಿಶ್ವ ಕಪ್ ನಲ್ಲಿ ಎ ಬಿ ಡಿವಿಲಿಯರ್ಸ್ ಆಟ ನೋಡಲು ಸಾಧ್ಯವಾಗದ ಅಭಿಮಾನಿಗಳು ಬಿಗ್‌ ಬ್ಯಾಶ್‌ ಲೀಗ್ ನ ಮೂಲಕ ಎ ಬಿ ಡಿವಿಲಿಯರ್ಸ್ ರವರ ಆಟವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದರು ಆದರೆ ಎ ಬಿ ಡಿವಿಲಿಯರ್ಸ್ ಅವರ ಈ ನಿರ್ಧಾರ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

Post Author: Ravi Yadav