ಸ್ವಂತ ಹಣದಿಂದ ಲಕ್ಷಾಂತರ ಗೋವುಗಳ ಜೀವ ಉಳಿಸುತ್ತಿರುವ ಯಶ್ ರವರಿಗೆ ನಮ್ಮದೊಂದು ಸಲಾಂ.

ಕನ್ನಡದ ಖ್ಯಾತ ನಟರಾಗಿರುವ ಯಶ್ ರವರು ಮೊದಲಿನಿಂದಲೂ ಕೇವಲ ನಟನೆಯಲ್ಲಿ ಮಾತ್ರ ಹೆಸರು ಮಾಡದೆ ಬದಲಾಗಿ ತಮ್ಮ ಸಮಾಜಮುಖಿ ಕಾರ್ಯಗಳಿಂದ ಹೆಸರು ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ಯಶ್ ರವರು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಈಗಾಗಲೇ ಹಲವಾರು ಬಾರಿ ಜನರ ಕಷ್ಟಗಳಿಗೆ ಸ್ಪಂದಿಸಿ ಎಲ್ಲರ ಮನಗೆದ್ದಿದ್ದಾರೆ. ಇದೀಗ ಮತ್ತೊಮ್ಮೆ ನಟ ಯಶ್ ರವರು ಕೋಟ್ಯಂತರ ಮನ ಗೆಲ್ಲುವಂತಹ ಕೆಲಸ ಮಾಡಿದ್ದು, ಯಾವ ಮಾಧ್ಯಮಗಳು ಇದರ ಬಗ್ಗೆ ತೋರಿಸುತ್ತಿಲ್ಲ. ನಮಗೂ ಸಹ ಯಾವುದೋ ಒಂದು ಬೇರೆ ಭಾಷೆಯ ಫೇಸ್ಬುಕ್ ಪೇಜಿನ ಮೂಲಕ ಈ ವಿಷಯ ತಿಳಿದಿದ್ದು ನಿಮ್ಮ ಮುಂದೆ ಅದರ ಸಂಪೂರ್ಣ ವಿವರವನ್ನು ನೀಡುತ್ತಿದ್ದೇವೆ ಒಮ್ಮೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದಲ್ಲಿ ಹಲವಾರು ಕಡೆ ಭೀಕರ ಬರಗಾಲ ಎದುರಾಗಿದೆ. ಇನ್ನು ಕೆಲವು ಕಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತ ಗೊಳ್ಳುವಂತೆ ಪರಿಸ್ಥಿತಿ ಸಹ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಸಾಮಾನ್ಯವಾಗಿ ಹಲವಾರು ಸಂಘ ಸಂಸ್ಥೆಗಳು ಜನರ ಬೆಂಬಲಕ್ಕೆ ನಿಲ್ಲುತ್ತವೆ. ಅದೇ ರೀತಿ ಧ್ಯಾನ್ ಫೌಂಡೇಶನ್ ಹಾಗೂ ಶ್ರೀ ರಾಮಚಂದ್ರಪುರ ಮಾತಾ ಎಂಬ ಎರಡು ಸಂಸ್ಥೆಗಳು ಗೋವುಗಳ ರಕ್ಷಣೆಗೆ ನಿಲ್ಲುತ್ತವೆ. ಭೀಕರ ಬರಗಾಲವನ್ನು ಎದುರಿಸುತ್ತಿರುವ ಹಳ್ಳಿಗಳಿಗೆ ಭೇಟಿ ನೀಡುವ ಈ ಎರಡು ಸಂಸ್ಥೆಗಳು ಗೋರಕ್ಷಣೆಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಮತ್ತಷ್ಟು ಸಹಾಯಕ್ಕಾಗಿ ವೀಡಿಯೋ ಮೂಲಕ ಮನವಿ ಮಾಡಿಕೊಳ್ಳುತ್ತಾರೆ.

ಕೆಲವು ಕೆಲವು ದಿನಗಳ ಹಿಂದೆ ಇದೇ ರೀತಿಯ ವಿಡಿಯೋ ಅದೇಗೋ ಕನ್ನಡದ ಖ್ಯಾತ ನಟರಾಗಿರುವ ಯಶ್ ರವರ ಕಣ್ಣಿಗೆ ಬೀಳುತ್ತದೆ. ಸರಿಯಾದ ಊಟವಿಲ್ಲದೆ ಲಕ್ಷಾಂತರ ಗೋವುಗಳು ಸಾವಿಗೆ ಈಡಾಗುತ್ತಿರುವಂತಹ ಮನಕಲಕುವ ಘಟನೆಯನ್ನು ಕಣ್ಣಾರೆ ಕಂಡ ಯಶ್ ರವರ ಜಾನುವಾರುಗಳ ಪರಿಸ್ಥಿತಿಯನ್ನು ಕಂಡು ತಕ್ಷಣವೇ ಇಡೀ ಹಳ್ಳಿಯ ಜನರ ಜಾನುವಾರುಗಳ ಬೆಂಬಲಕ್ಕೆ ನಿಲ್ಲಲು ನಿರ್ಧಾರ ಮಾಡುತ್ತಾರೆ.

ತದನಂತರ ತಮ್ಮ ಸ್ವಂತ ಹಣದಿಂದ ಜಾನುವಾರುಗಳಿಗೆ ಬೇಕಾದಂತಹ ಟನ್ ಗಟ್ಟಲೆ ಮೇವನ್ನು ಪ್ರತಿದಿನ ಸರಬರಾಜು ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಕೋಟಿ ಕೋಟಿ ನುಂಗಿದ ರಾಜಕಾರಣಿಗಳ ಕಣ್ಣಿಗೆ ಬೀಳದ ಜಾನುವಾರುಗಳ ನೋವು ಯಶ್ ಅವರ ಕಣ್ಣಿಗೆ ಬಿದ್ದಿದೆ. ಯಾವುದೇ ಅಪೇಕ್ಷೆ ಗಳಿಲ್ಲದೆ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ರವರಿಗೆ ಕರುನಾಡು ವಾಣಿಯ ಪರವಾಗಿ ಧನ್ಯವಾದಗಳು. ನಿಮ್ಮ ಈ ರೀತಿಯ ಸಮಾಜ ಸೇವೆ ಹೀಗೆ ಮುಂದುವರೆಯಲಿ ಹಾಗೂ ನಿಮ್ಮ ಎಲ್ಲಾ ಚಿತ್ರಗಳು ಹಿಟ್ ಆಗಲಿ ಎಂದು ಆಶಿಸುತ್ತಾ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುತ್ತೇವೆ.

Post Author: Ravi Yadav