ಮತ್ತೊಂದು ಖಡಕ್ ಹೆಜ್ಜೆಯಿಟ್ಟ ಶ್ರೀಲಂಕಾ ಸರ್ಕಾರ- ಅಕ್ರಮ ಮೌಲ್ವಿಗಳಿಗೆ ಶಾಕ್

ಯಾರೂ ಊಹಿಸದ ರೀತಿಯಲ್ಲಿ ಇತ್ತೀಚೆಗಷ್ಟೇ ಪ್ರವಾಸಿಗರನ್ನು ಸೆಳೆಯುವ ಮೂಲಕಹಂತ ಹಂತವಾಗಿ ಬೆಳೆಯಲು ಆರಂಭಿಸಿದ ಶ್ರೀಲಂಕಾ ದೇಶದಲ್ಲಿ ಕೆಲವೇ ಕೆಲವು ದಿನಗಳ ಹಿಂದಷ್ಟೇ ಉಗ್ರರು ಭಾರಿ ಅಲ್ಲೋಲ ಕಲ್ಲೋಲ ವನ್ನು ಸೃಷ್ಟಿಸುವಂತಹ ದಾಳಿಯನ್ನು ನಡೆಸಿ ವಿಶ್ವವನ್ನು ಬೆಚ್ಚಿ ಬೀಳಿಸಿದ್ದರು. ದಾಳಿ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡ ಶ್ರೀಲಂಕಾ ದೇಶವು ಇದೀಗ ಮತ್ತೊಂದು ದಿಟ್ಟ ಹೆಜ್ಜೆಯನ್ನಿಟ್ಟಿದೆ. ಉಗ್ರರನ್ನು ಹೊಡೆದುರುಳಿಸಿ, ಬುರ್ಖಾವನ್ನು ನಿಷೇಧಿಸಿದ್ದ ಶ್ರೀಲಂಕಾ ದೇಶವು ಇದೀಗ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರನ್ನು ಗಡಿಪಾರು ಮಾಡಿದೆ. ಈ ಮೂಲಕ ಅಕ್ರಮವಾಗಿ ನೆಲೆಸಿದ್ದ ಮೌಲ್ವಿಗಳಿಗೆ ದೊಡ್ಡ ಶಾಕ್ ಎದುರಾಗಿದೆ.

ಇಸ್ಲಾಮಿಕ್ ಪಾದ್ರಿಗಳು ಕಾನೂನಾತ್ಮಕವಾಗಿ ಶ್ರೀಲಂಕಾ ದೇಶದ ಒಳಗೆ ನುಸುಳಿದ್ದರು. ಆದರೆ ವೀಸಾ ಅವಧಿ ಮುಗಿದಿದ್ದರೂ ಸಹ ಶ್ರೀಲಂಕಾ ದೇಶದಲ್ಲಿ ನೆಲೆ ಕಂಡುಕೊಂಡಿದ್ದ ಇವರು ದೇಶವನ್ನು ಬಿಡಲು ಸಿದ್ಧರಾಗಿರಲಿಲ್ಲ‌. ಆದರೆ ಇಂದು ಶ್ರೀಲಂಕಾ ಗೃಹಸಚಿವ ವಜೀರ ಅಭಯ ವರ್ಧನ್ ಅವರು ಅಧಿಕಾರಿಗಳಿಗೆ ಖಡಕ್ ಆದೇಶ ಹೊರಡಿಸಿ ಕೇವಲ 24 ಗಂಟೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ. ದೇಶದಲ್ಲಿ ಧಾರ್ಮಿಕ ಸಂಸ್ಥೆಗಳ ಭೇಟಿಗೆಂದು ಆಗಮಿಸುತ್ತಿದ್ದ ವಿದೇಶಿ ಪಾದ್ರಿಗಳು ಮಕ್ಕಳಿಗೆ ಧಾರ್ಮಿಕತೆಯನ್ನು ಬೋಧಿಸುವ ನಿಟ್ಟಿನಲ್ಲಿ ಕೆಲವರು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಘಟನೆಗಳು ಸಹ ಹೊರಬಿದ್ದಿತ್ತು ಆದ ಕಾರಣ ಸರ್ಕಾರ ಈ ನಿರ್ಧಾರದ ಮೂಲಕ ಎಲ್ಲದಕ್ಕೂ ಬ್ರೇಕ್ ಹಾಕಲು ಚಿಂತನೆ ನಡೆಸಿದೆ.

Post Author: Ravi Yadav