ನೌಕಾ ಸೇನೆಯ ಮೇಲೆ ಕೊಲೆ ಆರೋಪ ಮಾಡಿದ ಪ್ರಮೋದ್ ಮಧ್ವರಾಜ್

ಕಳೆದ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ದೋಸ್ತಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಪ್ರಮೋದ್ ಮಧ್ವರಾಜ್ ಅವರು ಹಲವಾರು ಬಾರಿ ಸುದ್ದಿ ಮಾಡಿದ್ದಾರೆ. ಮೊದಲು ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳ ಚಿನ್ಹೆಗಳನ್ನು ಕೊರಳಿನ ಮಾಲೆ ಯಾಗಿ ಬದಲಿಸಿಕೊಂಡು ಪ್ರಚಾರ ನಡೆಸಿ ಭಾರೀ ನಗೆಪಾಟಲಿಗೆ ಒಳಗಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ರಾಜಕೀಯ ವಿಷಯವಾಗಿ ಸುದ್ದಿಯಲ್ಲಿ ಇಲ್ಲ ಬದಲಾಗಿ ಸೇನೆಯ ವಿರುದ್ಧ ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಹಲವಾರು ತಿಂಗಳುಗಳ ನಂತರ ಮಲ್ಪೆ ಸಮುದ್ರ ದಡದಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳನ್ನು ನೌಕಾ ಸೇನೆಯು ಸತತ ಕಾರ್ಯಾಚರಣೆ ಗಳನ್ನು ನಡೆಸಿ ಮಹಾರಾಷ್ಟ್ರದ ಅರಬಿ ಸಮುದ್ರದ 60 ಅಡಿ ಆಳದಲ್ಲಿ ಪತ್ತೆ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಭಾರಿ ಸದ್ದು ಮಾಡಿತ್ತು, ಚುನಾವಣಾ ಸಂದರ್ಭದಲ್ಲಿ ಹಲವಾರು ಮೀನುಗಾರರು ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಖುದ್ದು ದೇಶದ ರಕ್ಷಣಾ ಸಚಿವೆಯಾಗಿರುವ ನಿರ್ಮಲ ಸೀತಾರಾಮನ್ ರವರು ಸಹ ಮೀನುಗಾರರ ಪತ್ತೆಹಚ್ಚುವಿಕೆ ಗೆ ಸಂಪೂರ್ಣ ಆದೇಶವನ್ನು ಹೊರಡಿಸಿರುವುದಾಗಿ ಘೋಷಣೆ ಮಾಡಿದ್ದರು.

ಇಷ್ಟೆಲ್ಲ ವಾದ ವಿವಾದಗಳ ನಂತರ ಕೊನೆಗೂ ನೌಕಾ ಸೇನೆಯು ಅದೇಗೋ ಮೀನುಗಾರರು ನಾಪತ್ತೆ ಯಾಗಿದ್ದ ದೋಣಿಯ ಅವಶೇಷಗಳನ್ನು ಪತ್ತೆ ಮಾಡಿ ಸುದ್ದಿ ತಲುಪಿಸಿದ್ದಾರೆ. ಆದರೆ ಇದೀಗ ನೌಕಾ ಸೇನೆಯ ವಿರುದ್ಧ ಪ್ರಮೋದ್ ಮಧ್ವರಾಜ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಹೌದು ಮಲ್ಪೆಯ ಇಬ್ಬರು ಹಾಗೂ ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಜನ ಮೀನುಗಾರರನ್ನು ಸ್ವತಹ ನೌಕಾಸೇನೆಯ ವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಪ್ರಮೋದ್ ಮಧ್ವರಾಜ್ ಅವರು ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮಧ್ವರಾಜ್ ರವರು ನೌಕಾ ಸೇನೆಯು 7 ಮೀನುಗಾರರನ್ನು ಕೊಲೆ ಮಾಡಿದೆ ಎಂದು ಹೇಳಿಕೆ ನೀಡುವ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದ್ದಾರೆ.

ಇನ್ನೂ ಮುಂದುವರೆದು ಭಾರತೀಯ ನೌಕಾ ಸೇನೆಯ ಸಿಬ್ಬಂದಿಗಳು ಮೀನುಗಾರರ ದೋಣಿ ಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ, ಏಳು ಮೀನುಗಾರರ ನಾಪತ್ತೆ ಯಾದ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ಸಂಪೂರ್ಣ ತನಿಖೆ ಮಾಡಬೇಕು. ಬಿಜೆಪಿ ಪಕ್ಷದವರು ಇಂತಹ ಸಂದರ್ಭದಲ್ಲಿ ಮೀನುಗಾರರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ರವರನ್ನು ಭೇಟಿಯಾಗಿ ಅವರೊಂದಿಗೆ ಇದರ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕೇಳಿಬಂದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಕ್ರೋಶ ಕೇಳಿಬಂದಿದ್ದು ಯಾವೊಬ್ಬ ಬಿಜೆಪಿ ನಾಯಕರು ಇದುವರೆಗೂ ಮೀನುಗಾರರ ಶವ ಮುಂದೆ ಇಟ್ಟುಕೊಂಡು ರಾಜಕೀಯ ಮಾಡಿಲ್ಲ ನೀವು ಈಗ ಆರಂಭ ಮಾಡಿದ್ದೀರಿ ಎಂದು ಪ್ರಮೋದ್ ಮಧ್ವರಾಜ್ ರವರ ಮೇಲೆ ಜನರು ಮುಗಿ ಬಿದ್ದಿದ್ದಾರೆ.

Post Author: Ravi Yadav