ಮೋದಿ vs ಖರ್ಗೆ- ಖರ್ಗೆ ಹೇಳಿಕೆಗೆ ಬಿದ್ದು ಬಿದ್ದು ನಕ್ಕ ಜನ

ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದು ಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ರವರು ಈ ಬಾರಿ ಸೋಲಿನ ಭೀತಿ ಎದುರಿಸುತ್ತಿದ್ದಾರೆ ಎಂದು ರಾಜಕೀಯ ಪಂಡಿತರು ಈಗಾಗಲೇ ಹಲವಾರು ಬಾರಿ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಕಲಬುರುಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆಯವರ ವಿರುದ್ಧ ಬಾರಿ ಧ್ವನಿ ಕೇಳಿ ಬಂದಿದೆ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿರುವ ಉಮೇಶ್ ಜಾದವ್ ಅವರ ಬೆಂಬಲಕ್ಕೆ ಹಲವಾರು ಸಂಘಟನೆಗಳು ಹಾಗೂ ಮುಖಂಡರು ಬೆಂಬಲ ಸೂಚಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾದವ್ ರವರನ್ನು ಗೆಲ್ಲಿಸಿ ಕೊಂಡು ಬರುತ್ತೇವೆ ಎಂದು ಉತ್ಸಾಹದಿಂದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ.

ಸದಾ ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರುವ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ, ಅದರಲ್ಲಿಯೂ ಬಿಜೆಪಿ ಪಕ್ಷದ ಬೆಂಬಲಿಗರು ಮಲ್ಲಿಕಾರ್ಜುನ ಖರ್ಗೆ ರವರ ಮಾತನ್ನು ವೈರಲ್ ಮಾಡಿದ್ದು ಬಾರಿ ಮೀಮ್ ಗಳ ಮೂಲಕ ಖರ್ಗೆ ರವರ ಕಾಲು ಎಳೆಯುತ್ತಿದ್ದಾರೆ. ಇತ್ತ ಟ್ವಿಟರ್ ನಲ್ಲಿ ಖರ್ಗೆ ಅವರ ಹೇಳಿಕೆಗಳನ್ನು ನೆಟ್ಟಿಗರು ತಮಾಷೆಯಂತೆ ತೆಗೆದುಕೊಂಡು ಮನರಂಜನೆ ಪಡುತ್ತಿದ್ದಾರೆ.

ಈಗಾಗಲೇ ಕಲಬುರುಗಿ ಲೋಕಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏನು ಎದುರಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿ ಅವರನ್ನು ಎದುರಿಸಲು ಸಿದ್ಧರಾಗಿ ರುವುದಾಗಿ ಘೋಷಿಸಿಕೊಂಡಿದ್ದಾರೆ. ಕಲಬುರ್ಗಿ ಲೋಕಸಭಾ ಕ್ಷೇತ್ರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೀಸಲು ಕ್ಷೇತ್ರ ಆದ ಕಾರಣದಿಂದ ನರೇಂದ್ರ ಮೋದಿರವರು ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ, ಆದ ಕಾರಣದಿಂದ ನಾನು ನರೇಂದ್ರ ಮೋದಿ ಅವರನ್ನು ಎದುರಿಸಲು ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧವಿರುವುದಾಗಿ ಘೋಷಿಸಿಕೊಂಡಿದ್ದಾರೆ. ಒಂದು ವೇಳೆ ಕಲಬುರ್ಗಿ ಜನತೆ ಅನುಮತಿ ನೀಡಿ, ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಿದರೆ ವಾರಣಾಸಿಯಿಂದ ನರೇಂದ್ರ ಮೋದಿ ರವರ ವಿರುದ್ಧ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಹೊರಬಿದ್ದ ತಕ್ಷಣ, ಮಲ್ಲಿಕಾರ್ಜುನ ಖರ್ಗೆ ರವರನ್ನು ನೆಟ್ಟಿಗರು ಬಾರಿ ಟ್ರೋಲ್ ಗೆ ಗುರಿ ಮಾಡಿದ್ದಾರೆ. ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿನ ಭೀತಿಯಿಂದ ಎರಡನೇ ಕ್ಷೇತ್ರವನ್ನು ಆಯ್ಕೆ ಮಾಡುವುದು ಸೂಕ್ತ ಆದರೆ ರಾಹುಲ್ ಗಾಂಧಿ ಅವರಂತೆ ಯಾವುದಾದರೂ ಕಾಂಗ್ರೆಸ್ ಪಕ್ಷದ ಕೋಟೆಯಿಂದ ಸ್ಪರ್ಧಿಸಲಿ ಅದನ್ನು ಬಿಟ್ಟು ನೇರವಾಗಿ ನರೇಂದ್ರ ಮೋದಿ ರವರ ಎದುರು ಸೋಲಲು ಯಾಕೆ ವಾರಣಾಸಿ ಅವರಿಗೆ ಹೋಗಬೇಕು ಎಂದು ಕಾಲೆಳೆದಿದ್ದಾರೆ.

Post Author: Ravi Yadav