ಕೇರಳಕ್ಕೆ ಓಡಿ ಹೋದರು ರಾಹುಲ್ ಗೆ ತಪ್ಪಲಿಲ್ಲ ಸ್ಮೃತಿ ಇರಾನಿ ಕಾಟ

ರಾಜಕೀಯ ವಲಯದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎನಿಸಿಕೊಂಡಿರುವ ರಾಹುಲ್ ಗಾಂಧಿ ರವರು ಇದೇ ಮೊಟ್ಟಮೊದಲ ಬಾರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದೆ ಇಟ್ಟ ಹೆಜ್ಜೆ ಬಾರಿ ಸದ್ದು ಮಾಡಿತ್ತು, ಯಾಕೆಂದರೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಅಮೇತಿ ಕ್ಷೇತ್ರದಲ್ಲಿ ಸೃತಿ ಇರಾನಿ ರವರು ಬಹಳ ಸುಲಭವಾಗಿ ಗೆದ್ದು ಬೀಗಿತ್ತುರೆ ಎಂದು ಎಲ್ಲಾ ಸಮೀಕ್ಷೆಗಳು ಹಾಗೂ ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದರು. ಆದ ಕಾರಣಕ್ಕಾಗಿ ರಾಹುಲ್ ಗಾಂಧಿ ಕ್ಷೇತ್ರದಿಂದ ಪಲಾಯನ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇದನ್ನು ರಾಹುಲ್ ಗಾಂಧಿ ರವರು ನಿರಾಕರಿಸಿದರು ಸಹ ಯಾರೂ ಒಪ್ಪಲು ತಯಾರಾಗಿರಲಿಲ್ಲ.

ಇನ್ನು ಬೇರೆ ದಾರಿಯಿಲ್ಲದೆ ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದತ್ತ ಮುಖ ಮಾಡಿ ಸಂಪೂರ್ಣವಾಗಿ ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡು ಶೇಕಡ ೬೦ ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತಗಳನ್ನು ಹೊಂದಿರುವ ಕೇರಳ ರಾಜ್ಯದ ವಯನಾಡಿನಲ್ಲಿ ಸ್ಪರ್ಧಿಸಲು ನಿರ್ಧರಿಸಿ ಈಗಾಗಲೇ ನಾಮಪತ್ರವನ್ನು ಸಲ್ಲಿಸಿ ನಿನ್ನೆಯಷ್ಟೇ ಬಂಡಿಪುರ ವಿಚಾರದಲ್ಲಿ ಕರ್ನಾಟಕ ರಾಜ್ಯದ ವಿರುದ್ಧ ನಿಲ್ಲುವುದಾಗಿ ಘೋಷಣೆ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಸಹ ಗುರಿಯಾಗಿದ್ದರು. ಈ ವಿಷಯ ಮರೆ ಮಾಚುವ ಮುನ್ನವೇ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ.

ಯಾಕೆಂದರೆ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರಿಗೆ ತೀವ್ರ ಸ್ಪರ್ಧೆ ಯೊಡ್ಡುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ರವರು ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿರುವ ತುಷಾರ್ ನೆನಪಲ್ಲಿ ರವರ ಪರವಾಗಿ ಬೃಹತ್ ಸಮಾವೇಶವನ್ನು ನಡೆಸಿ ಮತದಾರರನ್ನು ಸೆಳೆಯಲು ಮುಂದೆ ಬಂದಿದ್ದಾರೆ. ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿ ಯಲ್ಲಿ ಸ್ಥಾನ ಪಡೆದುಕೊಂಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ರವರು ಅಮೇತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಯನಾಡಿನಲ್ಲಿ ರಾಹುಲ್ ಗಾಂಧಿ ಅವರಿಗೆ ಕಂಟಕವಾಗಿದ್ದಾರೆ. ಇದೀಗ ಸ್ಮೃತಿ ಇರಾನಿ ರವರ ಈ ನಡೆಯಿಂದ ವಯನಾಡು ಸಹ ಭಾರೀ ಕುತೂಹಲವನ್ನು ಕೆರಳಿಸಿದೆ. ಈಗಾಗಲೇ ಓವೈಸಿ ರವರು ಸಹ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಚಾರ ನಡೆಸುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಈ ಎಲ್ಲಾ ನಡೆಗಳಿಂದ ರಾಹುಲ್ ಗಾಂಧಿ ರವರ ಗೆಲುವು ಮತ್ತಷ್ಟು ಕಗ್ಗಂಟಾಗಿದೆ.

ಒಟ್ಟಿನಲ್ಲಿ ಪ್ರತಿಯೊಂದು ಕ್ಷೇತ್ರಗಳು ಬಹಳ ಮುಖ್ಯ ಎನಿಸಿಕೊಂಡಿರುವ ಮುಂದಿನ ದೇಶದ ಭವಿಷ್ಯವನ್ನು ನಿರ್ಧರಿಸುವ ಈ ಚುನಾವಣೆಯಲ್ಲಿ ದಿನೇ ದಿನೇ ಹೊಸ ಸವಾಲುಗಳು ಪ್ರತಿಯೊಂದು ಅಭ್ಯರ್ಥಿಗಳಿಗೂ ಎದುರಾಗುತ್ತಿವೆ. ಅದೇ ರೀತಿ ಇದೀಗ ರಾಹುಲ್ ಗಾಂಧಿ ಸರದಿ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು ರಾಹುಲ್ ಗಾಂಧಿ ರವರು ಈ ಎಲ್ಲಾ ಸವಾಲುಗಳನ್ನು ಎದುರಿಸಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಆದರೂ ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇಂದು ನಡೆಯಬೇಕಿದ್ದ ಸೃತಿ ಇರಾನಿ ರವರ ಸಮಾವೇಶವು ಸಹ ನಾಳೆಗೆ ಮುಂದೂಡಿದ್ದು ಈಗಾಗಲೇ ರಾಹುಲ್ ಗಾಂಧಿ ರವರ ಪರವಾಗಿ ವಯನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಪ್ರಿಯಾಂಕ ವಾದ್ರಾ ರವರು ಪ್ರಚಾರ ನಡೆಸಿದ್ದಾರೆ.

Post Author: Ravi Yadav