ಕರ್ನಾಟಕ ಬಿಟ್ಟು ಕೇರಳ ಪರ ನಿಂತ ರಾಹುಲ್ ಗಾಂಧಿ

ಕರ್ನಾಟಕ ಬಿಟ್ಟು ಕೇರಳ ಪರ ನಿಂತ ರಾಹುಲ್ ಗಾಂಧಿ

ಅಮಿತಿಯಲ್ಲಿ ತಮ್ಮ ಗೆಲುವು ಕಗ್ಗಂಟಾದ ತಕ್ಷಣ ಎರಡನೇ ಆಯ್ಕೆಯಾಗಿ ಕೇರಳ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಾದ ರಾಹುಲ್ ಗಾಂಧಿ ರವರು ಇದೀಗ ತಮ್ಮ ಗೆಲುವಿಗಾಗಿ ಕರ್ನಾಟಕದ ಕೈಬಿಟ್ಟಿದ್ದಾರೆ. ಕರ್ನಾಟಕ ಹಾಗೂ ಕೇರಳ ನಡುವಿನ ಸಮಸ್ಯೆ ಬಗ್ಗೆ ಅರಿವೇ ಇಲ್ಲದ ರಾಹುಲ್ ಗಾಂಧಿ ಅವರು ನೇರವಾಗಿ ಕೇರಳ ರಾಜ್ಯದ ಬೆಂಬಲಕ್ಕೆ ನಿಂತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ರಾಹುಲ್ ಗಾಂಧಿ ರವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು ಬಾರೀ ಆಕ್ರೋಶ ಕೇಳಿ ಬಂದಿದೆ. ವಿಷಯದ ಸಂಪೂರ್ಣ ಮಾಹಿತಿ ಹಾಗೂ ಮೂಲ ಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ರಾಜ್ಯವು ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಯ ವೇಳೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ನೆರೆಯ ರಾಜ್ಯವಾದ ಕೇರಳ ಸರ್ಕಾರವು ಬಂಡಿಪುರ ಅರಣ್ಯ ಪ್ರದೇಶವನ್ನು ಸಂಪೂರ್ಣ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಸಂಪೂರ್ಣ ಲಾಬಿಯನ್ನು ನಡೆಸುತ್ತಾ ಮೊದಲಿನಿಂದಲೂ ರಾತ್ರಿ ಸಂಚಾರ ನಿಷೇಧ ತೆರೆದು ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಳ್ಳಲು ಪ್ರಯತ್ನ ಪಡುತ್ತಿದೆ, ಯಾವುದಕ್ಕೂ ಜಗ್ಗದ ಕರ್ನಾಟಕ ರಾಜ್ಯ ಸರ್ಕಾರವು ನ್ಯಾಯಾಲಯದ ಮೆಟ್ಟಿಲೇರಿ ನಿಷೇಧವನ್ನು ಎತ್ತಿ ಹಿಡಿದಿತ್ತು.

ಬಂಡೀಪುರ ಹೆದ್ದಾರಿ ಯು ಕರ್ನಾಟಕ ಹಾಗೂ ವಯನಾಡಿನ ನಡುವೆ ಕೊಂಡಿಯಂತೆ ಇದೆ, ಆದ ಕಾರಣದಿಂದ ಮೊದಲಿನಿಂದಲೂ ವಯನಾಡಿನ ಜನತೆ ರಾತ್ರಿಯ ಸಂಚಾರ ನಿಷೇಧವನ್ನು ತೆಗೆಯಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಇದರ ಪರವಾಗಿ ಧ್ವನಿ ಎತ್ತಿರುವ ರಾಹುಲ್ ಗಾಂಧಿ ರವರು ಸಮಸ್ಯೆ ಬಗ್ಗೆ ಮಾಹಿತಿ ಇಲ್ಲದೆ ನೇರವಾಗಿ ವನ್ಯಜೀವಿಗಳ ಹಿತದೃಷ್ಟಿಯನ್ನು ಮರೆತು ಬಂಡಿಪುರ ಅರಣ್ಯ ಪ್ರದೇಶದಲ್ಲಿ ನಿಷೇಧಿಸಲಾದ ರಾತ್ರಿಯ ಸಂಚಾರ ನಿಯಮಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ನ್ಯಾಯ ಒದಗಿಸುವುದಾಗಿ ಪ್ರಚಾರದ ಸಮಯದಲ್ಲಿ ಘೋಷಿಸಿದ್ದಾರೆ.

ಕೇವಲ ವಯನಾಡಿನ ಜನತೆಯ ಮತಗಳನ್ನು ಪಡೆಯಲು ರಾಹುಲ್ ಗಾಂಧಿ ರವರು ಯಾವ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಂಡಿಪುರ ಅರಣ್ಯ ಪ್ರದೇಶದಲ್ಲಿ ರಾತ್ರಿಯ ಸಂಚಾರವನ್ನು ನಿಷೇಧಿಸಿದೆ ಎಂಬ ಅರಿವು ಇಲ್ಲದೆ ನೇರವಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಈಗಾಗಲೇ ವಿಶ್ವದ ಅರ್ಧ ಅರಣ್ಯ ಸಂಪತ್ತು ನಾಶವಾಗಿದೆ, ಅಪರೂಪಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ವನ್ಯಜೀವಿಗಳ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಂಡು ನ್ಯಾಯಾಲಯದ ಮೆಟ್ಟಿಲೇರಿ ನಿಷೇಧ ಮಾಡಿದ್ದಾರೆ. ಕೇವಲ ಮತಕ್ಕಾಗಿ ವನ್ಯಜೀವಿಗಳನ್ನು ಪಣಕ್ಕೆ ಇಡುವುದು ರಾಹುಲ್ ಗಾಂಧಿ ರವರಿಗೆ ಒಂದು ತಮಾಷೆಯ ವಿಷಯ ವಾದಂತೆ ಕಾಣುತ್ತಿದೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ.