ಮೋದಿ ಮತ್ತೊಮ್ಮೆ?? ಸಂಚಲನ ಸೃಷ್ಟಿಸಿದ ದೇವಿರಮ್ಮ ಭವಿಷ್ಯ

ಚಿಕ್ಕಮಗಳೂರು ಜಿಲ್ಲೆಯ ಬೆಟ್ಟದ ಮೇಲಿನ ಶಕ್ತಿಯ ದೇವತೆ ಎಂದೇ ಮನೆ ಮಾತಾಗಿರುವ ದೇವಿರಮ್ಮನ ಭವಿಷ್ಯದ ಬಗ್ಗೆ ಈಗಾಗಲೇ ಹಲವಾರು ಜನರಿಗೆ ತಿಳಿದಿದೆ. ಬೆಟ್ಟದ ಮೇಲೆ ನೆಲೆಸಿರುವ ದೇವಿರಮ್ಮ ದೇವಿಯು ಮಹಾ ಮಹಿಮಳು, ಭವಿಷ್ಯ ನುಡಿಯುತ್ತಾರೆ ಎಂಬ ಪ್ರತೀತಿ ಇದೆ. ಪ್ರತಿವರ್ಷ ಬಹಳ ವೈಭವವಾಗಿ ನರಕಚತುರ್ದಶಿಯ ಜಾತ್ರೆ ದೀಪೋತ್ಸವ ನಡೆಯುತ್ತದೆ. ಈಗಾಗಲೇ ಲಕ್ಷಾಂತರ ಭಕ್ತರು ದೇವಿರಮ್ಮನ ಭವಿಷ್ಯದ ಮೇಲೆ ಅಪಾರವಾದ ನಂಬಿಕೆ ಯನ್ನು ಇಟ್ಟಿದ್ದಾರೆ.

ಭಕ್ತಾದಿಗಳು ದೇವಿರಮ್ಮ ನವರ ಬಳಿ ಯಾವುದೇ ಬೇಡಿಕೆಯನ್ನು ಮುಂದಿಟ್ಟು ಬೇಡಿಕೊಂಡು ಹೂವು ಕೇಳಿದಾಗ ಒಂದು ವೇಳೆ ದೇವಿರಮ್ಮ ದೇವಿಯು ಬಲಗಡೆಯಿಂದ ಹೂವು ಕೊಟ್ಟರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಿಕೊಂಡಿದ್ದಾರೆ. ಈಗಾಗಲೇ ಇದಕ್ಕೆ ಹಲವಾರು ನಿದರ್ಶನಗಳು ಸಹ ನಮಗೆ ಕಾಣಸಿಗುತ್ತವೆ. ಅದೇ ಒಂದು ವೇಳೆ ಎಡಗಡೆ ಇಂದ ಹೂವು ಕೊಟ್ಟರೆ ನೆರವೇರುವುದಿಲ್ಲ ಎಂದು ಭಕ್ತಾದಿಗಳು ಹೇಳುತ್ತಾರೆ. ಇದೀಗ ನರೇಂದ್ರ ಮೋದಿರವರ ಪ್ರಧಾನಿ ಭವಿಷ್ಯವನ್ನು ಅಲ್ಲಿನ ಅರ್ಚಕರು ಹಾಗೂ ಭಕ್ತಾದಿಗಳು ಮುಂದೆ ಇಟ್ಟಾಗ ದೇವಿರಮ್ಮನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ??

narendra_modi_prime_minister_presentation_indium_106405_2048x1152

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹಲವಾರು ಕಡೆ ಹೋಮ ಹವನ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಬಹಳ ನಡೆಯುತ್ತಿವೆ ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಐತಿಹಾಸಿಕ ದೇವಾಲಯವಾದ ದೇವರಮ್ಮನ ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎಂಬ ಪ್ರಶ್ನೆಯನ್ನು ಮುಂದೆ ಇಡಲಾಗಿತ್ತು. ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದರೆ ಬಲಗಡೆಯಿಂದ ಪ್ರಸಾದ ಕೊಡು ತಾಯಿ ಇಲ್ಲವಾದಲ್ಲಿ ಎಡಗಡೆಯಿಂದ ಪ್ರಸಾದ ಕೊಡು ತಾಯಿ ಎಂದು ದೇವಿರಮ್ಮನ ಬಳಿ ಅರ್ಚಕರು ಹಾಗೂ ಭಕ್ತಾದಿಗಳು ಬೇಡಿಕೊಂಡ ವಿಡಿಯೋ ಕೆಳಗಡೆ ಇದೆ ನೋಡಿ.

ಈ ದೇಶದ ಏಳಿಗೆ ಗೋಸ್ಕರ ನರೇಂದ್ರ ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಈ ದೇಶವನ್ನು ಸಂರಕ್ಷಣೆ ಮಾಡಿ ಕಾಪಾಡುತ್ತಾರೆ ಎಂದಾದರೆ ಬಲಭಾಗದಿಂದ ಪ್ರಸಾದ ಕೊಡು ತಾಯಿ ಎಂದು ಮೂರು ಬಾರಿ ಅರ್ಚಕರು ಪ್ರಾರ್ಥಿಸಿದ ಹತ್ತು ಸೆಕೆಂಡಿನ ನಂತರ ಬಲಭಾಗದಿಂದ ದೇವರಿಗೆ ಹಾಕಿದ ಮಲ್ಲಿಗೆ ಹೂವಿನ ಹಾರ ಕೆಳಗೆ ಬೀಳುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ತಲ್ಲಣವನ್ನು ಸೃಷ್ಟಿಸಿದ್ದು ದೇವಿರಮ್ಮನ ಮಹಿಮೆಯನ್ನು ಬಲ್ಲವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಬಲವಾಗಿ ನಂಬಿದ್ದಾರೆ.

Post Author: Ravi Yadav