ಸಿಎಂ ವಿರುದ್ಧ ರೊಚ್ಚಿಗೆದ್ದ ಜನ ,ಭಾರತೀಯ ಸೇನೆ ದಾಳಿ ಬಗ್ಗೆ ಬಾರಿ ವಿವಾದಾದ್ಮತಕ ಹೇಳಿಕೆ !

ಕುಮಾರಸ್ವಾಮಿ ರವರು ಇತ್ತೀಚೆಗೆ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದಾರೆ. ಬಿಜೆಪಿ ಹಾಗೂ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ದೇಶದ ಭದ್ರತೆಯ ವಿಚಾರದಲ್ಲಿ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕುಮಾರಸ್ವಾಮಿ ಅವರ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಾಲ ಕೋಟ್ ದಾಳಿ ನಡೆದ ಕ್ಷಣದಿಂದಲೂ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕುಮಾರಸ್ವಾಮಿ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸೇನೆಗೆ ಮತ್ತಷ್ಟು ಅವಮಾನ ಮಾಡುವ ಮೂಲಕ ದೊಡ್ಡ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.

ಮೊದಲು ಬಾಲಕೋಟ ವೈಮಾನಿಕ ದಾಳಿಯನ್ನು ಸಂಭ್ರಮಿಸಬೇಡಿ, ಮೋದಿ ಸ್ವತಹ ವೈಮಾನಿಕ ದಾಳಿ ನಡೆಸಿಲ್ಲ, ಇದೇ ರೀತಿ ಹಲವಾರು ಹೇಳಿಕೆಗಳ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇಡೀ ವಿಶ್ವವೇ ಭಾರತ ಪುಲ್ವಾಮಾ ಉಗ್ರರ ದಾಳಿಗೆ ತೀರಿಸಿಕೊಂಡ ಪ್ರತೀಕಾರಕ್ಕೆ ಭೇಷ್ ಎನ್ನುತ್ತಿದೆ, ಆದರೆ ಕೇಂದ್ರ ಸರ್ಕಾರವನ್ನು ಧೂಷಿಸುವ ಬರದಲ್ಲಿ ವಿರೋಧಿಗಳು ಮಾತ್ರ ಸೇನೆಯ ಈ ಪರಾಕ್ರಮಕ್ಕೆ ಇನ್ನಿಲ್ಲದ ಅವಮಾನಗಳನ್ನು ಮಾಡುತ್ತಿದ್ದಾರೆ. ಇದೇ ವಿಚಾರದಲ್ಲಿ ಈಗ ಇತ್ತೀಚೆಗಷ್ಟೇ ನರೇಂದ್ರ ಮೋದಿರವರು ಕುಮಾರಸ್ವಾಮಿ ರವರು ಕಣ್ಣೀರು ಹಾಕಿ ಮತ ಕೇಳುತ್ತಾರೆ ಒಂದು ರಾಜ್ಯದ ಮುಖ್ಯಮಂತ್ರಿಗೆ ಈ ರೀತಿಯ ಕೆಲಸಗಳು ಶೋಭೆ ತರುವುದಿಲ್ಲ ಎಂದು ಹೇಳಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿರುವ ಕುಮಾರಸ್ವಾಮಿ ಅವರು ನೇರವಾಗಿ ಸೇನೆಯನ್ನು ಎಳೆದು ತಂದಿದ್ದಾರೆ. ಕುಮಾರಸ್ವಾಮಿ ರವರು ಕಣ್ಣೀರು ಹಾಕುವ ವಿಚಾರವನ್ನು ಕೆದಕಿ ನಾನು ಕಣ್ಣೀರು ಹಾಕಿದ್ದು ಪಾಕಿಸ್ತಾನದಲ್ಲಿ ಆಗಿರುವ ನೋವಿ ಗಲ್ಲ, ಪಾಕಿಸ್ತಾನದಲ್ಲಿ ಏನು ಆಗಿಲ್ಲ, ಪಾಕಿಸ್ತಾನದ ಗಡಿಯಲ್ಲಿ ಜನರು ಇಲ್ಲದ ಪ್ರದೇಶದಲ್ಲಿ ಯಾವುದೋ ಒಂದು ಕಾಡಿನಲ್ಲಿ ಭಾರತೀಯ ಸೇನೆಯು ಬಾಂಬ್ ಹಾಕಿ ಬಂದಿದ್ದಾರೆ. ಇದು ನಾನು ಕಾಣದಿರುವುದು ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ನಾನು ಕಣ್ಣೀರಿಟ್ಟಿದ್ದು ಪುಲ್ವಾಮದಲ್ಲಿ ಬಡ ಕುಟುಂಬದ ಮೈಸೂರು ಭಾಗದ ಯೋಧ ಹತ್ಯೆಯಾದರು ( ಸ್ವಾಮಿ ಅದು ಹತ್ಯೆ ಎಲ್ಲಾ ವೀರ ಮರಣ), 19 ವರ್ಷದ ಹೆಣ್ಣು ಮಗಳು ವಿಧವೆಯಾದರು ಎಂಬ ಕಾರಣಕ್ಕೆ ಕಣ್ಣೀರು ಹಾಕಿದ್ದೇನೆ ಎಂದು ಮೋದಿ ರವರಿಗೆ ಉತ್ತರಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಹೊರಬಿದ್ದ ತಕ್ಷಣ ಕುಮಾರ ಸ್ವಾಮಿ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಜೆಡಿಎಸ್ ಬೆಂಬಲಿತ ಕಾರ್ಯಕರ್ತರು ಸಹ ಕುಮಾರಸ್ವಾಮಿ ರವರು ತಮ್ಮ ಹೇಳಿಕೆಗಳನ್ನು ವಾಪಸು ತೆಗೆದುಕೊಳ್ಳಬೇಕು ಭಾರತೀಯ ಸೇನೆಯ ಸಾಹಸದ ಬಗ್ಗೆ ಯಾವೊಬ್ಬ ರಾಜಕಾರಣಿಯೂ ಕೀಳಾಗಿ ಮಾತನಾಡಬಾರದು. ಸ್ವತಹ ಪಾಕಿಸ್ತಾನವೇ ದಾಳಿಯನ್ನು ಖಚಿತಪಡಿಸಿದೆ, ಹೀಗಿರುವಾಗ ಭಾರತೀಯ ರಾಜಕಾರಣಿಗಳು ಸಾಕ್ಷಿಗಳನ್ನು ಕೇಳಿ ಅಥವಾ ದಾಳಿ ನಡೆದಿಲ್ಲ ಎಂಬಂತೆ ಮಾತನಾಡಿ ಸೇನೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ರವರೆ ದಯವಿಟ್ಟು ನಿಮ್ಮ ರಾಜಕೀಯ ಲಾಭಕ್ಕಾಗಿ ಸೇನೆಯನ್ನು ಈ ರೀತಿ ಬಿಂಬಿಸಬೇಡಿ ಎಂದು ಇನ್ನು ಕೆಲವರು ಮನವಿ ಮಾಡಿಕೊಂಡಿದ್ದಾರೆ.

Post Author: Ravi Yadav