ಚಿಕ್ಕೋಡಿ ಬಿಜೆಪಿ ಗೆ ಬಂಪರ್, ಸಭೆಯ ಮೂಲಕ ಕಾಂಗ್ರೆಸ್ ಗೆ ಮರ್ಮಾಘಾತ ನೀಡಿದ ರಮೇಶ್ ಸಾಹುಕಾರ್

ಪ್ರತಿ ದಿಸ ಹೊಸದೊಂದು ವಿಷಯ ಕೇಳಿ ಬರುತ್ತಿದ್ದು ಲೋಕಸಭಾ ಚುನಾವಣೆ ದಿನೇ ದಿನೆ ರಂಗೇರುತ್ತಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಕ್ಷಣಕೊಂದು ಭಿನ್ನಮತಗಳು ಕಾಣಿಸಿಕೊಳ್ಳುತ್ತಿದ್ದು ಪಕ್ಷದ ವರಿಷ್ಠರಿಗೆ ಇನ್ನಿಲ್ಲದ ತಲೆನೋವು ಎದುರಾಗುತ್ತಿದೆ. ಈ ಭಿನ್ನಮತಗಳಲ್ಲಿ ಕೆಲವುಲು ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಸಹಕಾರ ನೀಡಿದರೆ ಇನ್ನು ಕೆಲವು ಭಿನ್ನಮತಗಳು ನೇರವಾಗಿ ಸಹಕಾರ ನೀಡುತ್ತಿವೆ. ಹಲವಾರು ಮುಖಂಡರು ಹಾಗೂ ಬೆಂಬಲಿಗರು ಈಗಾಗಲೇ ಬಿಜೆಪಿ ಪಕ್ಷ ಸೇರಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಬಹಳ ಕಷ್ಟಪಟ್ಟು ದುಡಿಯುತ್ತಿದ್ದಾರೆ ಇದೀಗ ಇದೇ ಸಾಲಿಗೆ ಮತ್ತೊಂದು ವಿಷಯ ಸೇರಿಕೊಂಡಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ರಮೇಶ್ ಜಾರಕಿಹೊಳಿ ಅವರ ನಡೆ ಬಹಳ ಕಗ್ಗಂಟಾಗಿ ಉಳಿದಿದೆ. ಈಗಾಗಲೇ ಹಲವಾರು ಬಾರಿ ಇನ್ನೇನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬಂದು ತದನಂತರ ಎಲ್ಲಾ ಸುದ್ದಿಗಳು ಹುಸಿಯಾಗಿವೆ. ಆದರೂ ಸಹ ತನ್ನ ಪ್ರತಿಷ್ಠೆಯನ್ನು ಬಿಡದ ರಮೇಶ್ ಜಾರಕಿಹೊಳಿ ರವರು ಯಾವುದೇ ಸಭೆಗಳಿಗೆ ಆಗಲಿ ಅಥವಾ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಲಿ ಇದುವರೆಗೂ ಭಾಗವಹಿಸಿಲ್ಲ. ಆದರೆ ಇದೀಗ ಒಂದೇ ಸಭೆಯ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿ ಬಿಜೆಪಿ ಪಕ್ಷಕ್ಕೆ ಜೈ ಎಂದಿದ್ದಾರೆ ಎನ್ನಲಾಗಿದೆ.

ಸ್ವತಹ ಸಿದ್ದರಾಮಯ್ಯರವರು ಸ್ಪೀಕರ್ ಬಳಿ ನೋಟಿಸ್ ಜಾರಿ ಮಾಡಿದರೂ ಸಹ ಕ್ಯಾರೆ ಎನ್ನದ ರಮೇಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದ ಹಾಗೆ ರಾಜಕೀಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿದ್ದಾರೆ. ಕಳೆದ ವಾರದಿಂದ ತಮ್ಮ ಪ್ರತಿಯೊಬ್ಬ ಬೆಂಬಲಿಗರ ಮನೆಗೆ ಭೇಟಿ ನೀಡುತ್ತಿರುವ ರಮೇಶ್ ಜಾರಕಿಹೊಳಿ ರವರು ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಮೊದಲಿನಿಂದಲೂ ದೋಸ್ತಿ ಸರ್ಕಾರಕ್ಕೆ ಬಹಳ ಕಂಟಕಗಳನ್ನು ತಂದೊಡ್ಡುತ್ತಿರುವ ರಮೇಶ್ ಜಾರಕಿಹೊಳಿ ಅವರು ಇದೀಗ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಇರುವಾಗ ಶಾಕ್ ನೀಡಿದ್ದಾರೆ.

ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಿಲ್ಲ ಎಂದು ಮುನಿಸಿಕೊಂಡು ಸರ್ಕಾರಕ್ಕೆ ಆಪತ್ತು ಬರುವ ಮಟ್ಟಕ್ಕೆ ಹೋಗಿದ್ದ ಜಾರಕಿಹೊಳಿ ಅವರು ಇದೀಗ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವುದು ಪಕ್ಕಾ ಆಗಿದೆ. ಅನರ್ಹತೆ ಭೀತಿಯನ್ನು ಎದುರಿಸುತ್ತಿದ್ದರೂ ಸಹ ಯಾವುದೇ ನೋಟಿಸ್ ಗಳಿಗೆ ಕ್ಯಾರೆ ಎನ್ನದೆ ತಮ್ಮ ನಿರ್ಧಾರವನ್ನು ಕಠಿಣವಾಗಿ ತೆಗೆದುಕೊಂಡು ಮುನ್ನುಗ್ಗುತ್ತಿರುವ ರಮೇಶ್ ಜಾರಕಿಹೊಳಿ ರವರು ದೋಸ್ತಿ ಗಳಿಗೆ ಈಗ ಮತ್ತೊಂದು ಸವಾಲು ತಂದಿದ್ದಾರೆ ಈ ಸವಾಲನ್ನು ದೋಸ್ತಿಗಳು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav