ಅತ್ತ ಮೋದಿಗೊಂದು ದೇವಸ್ಥಾನ, ಇತ್ತ ಸೋನಿಯಾ ಗಾಂಧಿರವರೆಗೂ ಇದೆ ದೇವಸ್ಥಾನ, ಎಲ್ಲಿ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ನಿಮಗೆಲ್ಲರಿಗೂ ತಿಳಿದು ಹಾಗೆ ಊಹಿಸದ ರೀತಿಯಲ್ಲಿ ದೇಶದ ಪ್ರಧಾನ ಸೇವಕರು ಎನಿಸಿಕೊಂಡಿರುವ ನರೇಂದ್ರ ಮೋದಿರವರು ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ತಮ್ಮ ಕಾರ್ಯವೈಖರಿಯಿಂದ ಇಡೀ ದೇಶದ ಯುವಕರ ಮನಗೆದ್ದಿರುವ ನರೇಂದ್ರ ಮೋದಿ ರವರ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೇ ರೀತಿ ನರೇಂದ್ರ ಮೋದಿ ಅವರಿಂದ ಆಕರ್ಷಣೆಗೆ ಒಳಗಾದ ಹಲವಾರು ಯುವಕರು ನರೇಂದ್ರ ಮೋದಿ ಅವರಿಗೆ ದೇವಸ್ಥಾನ ನಿರ್ಮಿಸಿದ್ದಾರೆ, ಅದೇ ರೀತಿ ಸೋನಿಯಾ ಗಾಂಧಿ ಅವರಿಗೂ ಸಹ ಒಂದು ದೇವಸ್ಥಾನ ನಿರ್ಮಾಣ ವಾಗಿತ್ತು ಕಾರಣ ಕೇಳಿದರೆ ಅಚ್ಚರಿ ಪಡುತ್ತೀರಾ. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಪ್ರಧಾನಿ ಮೋದಿಯನ್ನು ಬಹಳಷ್ಟು ಯುವ ಜನತೆ ತಮ್ಮ ಆದರ್ಶ ವ್ಯಕ್ತಿಯನ್ನಾಗಿ ನಂಬಿದ್ದಾರೆ. ಮೋದಿ ಆಳ್ವಿಕೆಯ ಮೇಲೆ ಕೋಟ್ಯಾಂತರ ಜನರು ನಂಬಿಕೆ ಇಟ್ಟು, ದೇಶವನ್ನು ಮುನ್ನಡೆಸಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಸೂಕ್ತ ಎಂದು ಎಲ್ಲೆಡೆ ತಾವೇ ಖುದ್ದು ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ರೀತಿ ಅಭಿಮಾನಿಗಳು ಗುಜರಾತ್ ನಲ್ಲಿ ಒಟ್ಟಿಗೆ ಸೇರಿಕೊಂಡು ನರೇಂದ್ರ ಮೋದಿ ರವರ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿರುವ ವ್ಯಕ್ತಿ ಗಾಗಿ ಗುಜರಾತ್ ನಲ್ಲಿ ದೇವಸ್ಥಾನ ನಿರ್ಮಿಸಿರುವುದು ಇದೇ ಮೊಟ್ಟಮೊದಲ ಬಾರಿಗೆ ಎನ್ನಲಾಗುತ್ತಿದೆ.

ಸುಮಾರು 350 ಜನರ ಗುಂಪು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸಾಮಾನ್ಯ ಜನರಿಂದ ದೇಣಿಗೆಯನ್ನು ಸಂಗ್ರಹಿಸಿ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಇದು ಅಹಮದಾಬಾದ್ ನಗರದಿಂದ ಸುಮಾರು 130 ಮೈಲಿ ದೂರದಲ್ಲಿ ಇದೆ. ನರೇಂದ್ರ ಮೋದಿ ರವರ ವಿಗ್ರಹಕ್ಕೆ ಸರಿ ಸುಮಾರು ಎರಡು ಲಕ್ಷ ಖರ್ಚಾಗಿದ್ದು ಸಂಪೂರ್ಣ ಹಣವನ್ನು ನರೇಂದ್ರ ಮೋದಿ ರವರ ಅಭಿಮಾನಿಗಳು ಜನರಿಂದ ದೇಣಿಗೆ ಯನ್ನಾಗಿ ತೆಗೆದುಕೊಂಡು ನಿರ್ಮಿಸಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರೂ ಸಹ ಸೋನಿಯಾ ಗಾಂಧಿ ರವರ ದೇವಾಲಯವನ್ನು ನಿರ್ಮಿಸಿ ದೇವಾಲಯದ ಒಳಗೆ ಬಿಳಿ ಮಾರ್ಬಲ್ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ.

ದೇವಾಲಯದ ಗೋಡೆಗಳ ಮೇಲೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ರವರ ಭಾವಚಿತ್ರ ಗಳನ್ನು ನೀವು ಇಲ್ಲಿ ನೋಡಬಹುದು. ಈ ದೇವಾಲಯವನ್ನು ನಿರ್ಮಿಸಲು ಬೇಕಾದ ಭೂಮಿ ಹಣ ಮತ್ತು ಇತರ ಅಗತ್ಯವಸ್ತುಗಳನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ ಎನ್ನಲಾಗಿದೆ. ತೆಲಂಗಾಣ ರಾಜ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸೋನಿಯಾ ಗಾಂಧಿ ರವರು ಕಾರಣ, ಅದೇ ಕಾರಣಕ್ಕಾಗಿ ಸೋನಿಯಾ ಗಾಂಧಿ ರವರಿಗೆ ದೇವಾಲಯವನ್ನು ಕಟ್ಟಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನು ಭಾರತದ ರಾಜ್ಯ ತೆಲಂಗಾಣದಲ್ಲಿ ಮಲ್ಲಿಯಾಲ್ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ರವರಿಗೆ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

Post Author: Ravi Yadav