ಸತ್ಯ ಸತ್ಯತೆ: ಮೋದಿ ವಾಹನ ಪರಿಶೀಲಿಸಿದ ಅಧಿಕಾರಿ ಸಸ್ಪೆಂಡ್ ಆಗಿದ್ದು ಯಾಕೆ ಗೊತ್ತಾ??

ಕಳೆದ ಕೆಲವು ಗಂಟೆಗಳಿಂದ ನರೇಂದ್ರ ಮೋದಿ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ದೇಶದ ಮಹತ್ವದ ಚುನಾವಣೆ ಎನಿಸಿಕೊಂಡಿರುವ ಲೋಕಸಭಾ ಚುನಾವಣೆಯ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದೆ. ಯಾವುದೇ ರಾಜಕೀಯ ನಾಯಕನ ವಾಹನ ಬಂದರೂ ತಪಾಸಣೆ ನಡೆಸದೆ ಚುನಾವಣಾ ಆಯೋಗವು ಸುಮ್ಮನೆ ಕೊಡುತ್ತಿಲ್ಲ ಇದಕ್ಕೆ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಗಳು ಹಾಗೂ ಹೆಲಿಕ್ಯಾಪ್ಟರ್ ಸೇರಿಕೊಂಡಿದೆ. ಅದೇ ರೀತಿ ನರೇಂದ್ರ ಮೋದಿ ರವರು ಸಹ ಸಂಪೂರ್ಣ ಸಹಕಾರ ನೀಡಿ ತಪಾಸಣೆ ನಡೆಸಲು ಅನುವು ಮಾಡಿಕೊಡುತ್ತಿದ್ದಾರೆ.

ಅದೇ ರೀತಿ ತಪಾಸಣೆ ನಡೆಸುವ ವೇಳೆ ಯಲ್ಲಿ ನಡೆದ ಘಟನೆಯನ್ನು ಆಧಾರವಾಗಿಟ್ಟುಕೊಂಡು ನರೇಂದ್ರ ಮೋದಿ ಅವರನ್ನು ಎಲ್ಲರೂ ಟೀಕೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ರವರ ಬೆಂಗಾ ವಲು ವಾಹನವನ್ನು ಪರಿಶೀಲಿಸಿದ ಕಾರಣಕ್ಕಾಗಿ ಚುನಾವಣಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ ನರೇಂದ್ರ ಮೋದಿ ಎಂಬ ಸುದ್ದಿ ಇದೀಗ ವೈರಲ್ ಆಗಿದೆ. ಇದಕ್ಕೆ ಇಂದು ಚುನಾವಣಾ ಆಯೋಗವು ಸಂಪೂರ್ಣ ಸ್ಪಷ್ಟತೆಯನ್ನು ನೀಡಿ ವಿರೋಧಿಗಳ ಬಾಯಿಗೆ ಬೀಗ ಜಡಿದಿದ್ದಾರೆ . ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ನರೇಂದ್ರ ಮೋದಿ ರವರ ಬೆಂಗಾವಲು ವಾಹನ ಪಡೆಯಲು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಸತ್ಯ, ಪ್ರಧಾನಿಯಾಗಲಿ ಅಥವಾ ಯಾವುದೇ ರಾಜಕೀಯ ನಾಯಕನಾಗಲಿ ದೇಶದ ಕಾನೂನುಗಳಿಗೆ ಬದ್ಧರಾಗಿರಬೇಕು. ಆದ ಕಾರಣ ಕ್ಕಾಗಿಯೇ ನರೇಂದ್ರ ಮೋದಿ ರವರ ಬೆಂಗಾವಲು ವಾಹನವನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ, ಆದರೆ ಚುನಾವಣಾ ಅಧಿಕಾರಿಗಳಿಗೂ ಸಹ ಕೆಲವೊಂದು ಕಾನೂನು ಗಳು ಇರುತ್ತವೆ, ಆ ಕಾನೂನುಗಳನ್ನು ಯಾರೇ ಮೀರಿದರೂ ಕಠಿಣ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗ ಮೀನಾಮೇಶ ಎಣಿಸುವುದಿಲ್ಲ.

ಅದೇ ರೀತಿ ಮೊಹಮದ್ ಎಂಬ ಐಪಿಎಸ್ ಅಧಿಕಾರಿ ಯು ನರೇಂದ್ರ ಮೋದಿ ರವರ ಭದ್ರತೆಗಾಗಿ ಆಯೋಜಿಸಿರುವ ಎಸ್ ಪಿ ಜಿ ವಾಹನವನ್ನು ತಪಾಸಣೆ ನಡೆಸುವ ವೇಳೆಯಲ್ಲಿ  ಚುನಾವಣಾ ಆಯೋಗದ ಕಾನೂನುಗಳನ್ನು ಪಾಲಿಸದೆ ನರೇಂದ್ರ ಮೋದಿರವರ ವಾಹನವನ್ನು ತಪಾಸಣೆ ನಡೆಸಿದ್ದಾರೆ, ತಪಾಸಣೆ ನಡೆಸುವ ವೇಳೆಯಲ್ಲಿ ಪಾಲಿಸಬೇಕಾದ ಯಾವುದೇ ಕಾನೂನು ಕ್ರಮಗಳನ್ನು ಇವರು ಪಾಲಿಸಿಲ್ಲ. ಆದಕಾರಣ ಸಂಬಲ್ಪುರಿ ಜಿಲ್ಲಾಧಿಕಾರಿ ಹಾಗೂ ಡಿ ಜಿ ಪಿ ಅವರು ಲಿಖಿತ ವರದಿಯನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಅದರ ಆಧಾರದ ಮೇರೆಗೆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಆದರೆ ಇದಕ್ಕೂ ನರೇಂದ್ರ ಮೋದಿ ಅವರಿಗೂ ಯಾವುದೇ ಸಂಬಂಧವಿಲ್ಲ, ಇದು ಕೇವಲ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದ ಕಾನೂನಿಗೆ ಒಳಪಡುತ್ತದೆ ಇಂದು ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ.

ಈ ವರದಿ ಹೊರಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದ್ದು. ಕಳೆದ 24 ಗಂಟೆ ಗಳಿಂದ ನರೇಂದ್ರ ಮೋದಿ ರವರ ಮೇಲೆ ಕೇಳಿ ಬಂದಿದ್ದ ಆರೋಪಗಳಿಗೆ  ನರೇಂದ್ರ ಮೋದಿರವರ ಬೆಂಬಲಿಗರು ಇದೀಗ ಉತ್ತರ ನೀಡಲು ಆರಂಭಿಸಿದ್ದಾರೆ. ಈ ವರದಿಯ ಮೂಲಕ ಚುನಾವಣಾ ಆಯೋಗವು ಟೀಕೆ ಗಾರ ಬಾಯಿಗಳಿಗೆ ಬೀಗ ಹಾಕಿದ್ದು ವಿರೋಧಿಗಳು ನರೇಂದ್ರ ಮೋದಿ ಅವರನ್ನು ಟೀಕಿಸಲು ಮತ್ತೊಂದು ವಿಷಯವನ್ನು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Post Author: Ravi Yadav