ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದ ಖರ್ಗೆ ಸಂಬಂಧಿ, ಸಿದ್ದು ಆಪ್ತ – ಬಿಜೆಪಿ ಗೆ ಮತ್ತಷ್ಟು ಬಲ

ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇದೆ, ಮೊದಲಿಂದಲೂ ಚುನಾವಣಾ ದಿನಾಂಕ ಪ್ರಕಟಣೆಗೊಳ್ಳುವಂತೆ ಪಕ್ಷಾಂತರಗಳು ಹೆಚ್ಚಾಗುತ್ತಿದ್ದವು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರಗಳು ಕಡಿಮೆಯಾಗುತ್ತಿದ್ದವು, ಆದರೆ ಈ ಬಾರಿ ಚುನಾವಣೆಗೆ ಚುನಾವಣೆ ಹತ್ತಿರ ಬಂದರು ಸಹ ಪಕ್ಷಾಂತರಗಳು ಕಡಿಮೆಯಾಗಿಲ್ಲ ಹಾಗೂ ಬಿಜೆಪಿ ಪಕ್ಷಕ್ಕೆ ವಲಸೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಲವಾರು ಕಾರಣಗಳಿಂದ ದಿನೇ ದಿನೇ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಗೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈದೀಗ ಇದೆ ಸಾಲಿಗೆ ಮಲ್ಲಿಕಾರ್ಜುನ ಖರ್ಗೆ ರವರ ಸಂಬಂಧಿ, ಸಿದ್ದು ಆಪ್ತ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ.ನಗರದ ಮಾರಿಗುಡಿ ಬಳಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿ ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.

ರಾಜಕೀಯದಲ್ಲಿ ಸಿದ್ದರಾಮಯ್ಯ ರವರ ಆಪ್ತ ಬಳಗದಲ್ಲೂ ಗುರುತಿಸಿಕೊಂಡು, ಸಿದ್ದು ರವರ ಪಕ್ಕ ಶಿಷ್ಯ ಎನಿಸಿಕೊಂಡಿದ್ದ ಡಿ ನ್ .ಎನ್‌.ನಟರಾಜು ಹಾಗೂ ಎ.ಆರ್.ಕೃಷ್ಣಮೂರ್ತಿ ಸಹೋದರ ಎ.ಆರ್.ಬಾಲರಾಜು ಕೈಬಿಟ್ಟು ಬಿಜೆಪಿ ಪಕ್ಷಕ್ಕೆ ಸೇಇಕೊಂಡಿದ್ದಾರೆ. ಇನ್ನು ಈ ಕುರಿತಂತೆ ಪ್ರತಿಕ್ರಯಿಸಿದ ಡಿ.ಎನ್‌.ನಟರಾಜ್ ರವರು ನನಗೆ ಸಿಗಬೇಕಾದ ಗೌರವ ಮತ್ತು ಸ್ಥಾನ ಸಿಗದಿದ್ದರಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ, ಬಿಜೆಪಿ ಪಕ್ಷ ಸಂಘಟನೆ ಮಾಡುತ್ತೆ, ರಾಜ್ಯದ ಅಧ್ಯಕ್ಷರು ತೋರಿಸಿದ ದಾರಿಯಲ್ಲಿ ನಡೆಯುತ್ತೇನೆ ಎಂದರು. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಹೋದರ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದ ಕಾರಣ ಕಾಂಗ್ರೆಸ್ ಸೇರಿದ್ದ ಬಾಲರಾಜು ಈದೀಗ ಮತ್ತೊಮ್ಮೆ ಬಿಜೆಪಿ ಪಕ್ಷಕ್ಕೆ ವಾಪಾಸ್ ಆಗಿದ್ದಾರೆ.

Post Author: Ravi Yadav