ದೇಶ ಮೊದಲು ಎಂಬುದನ್ನು ನಿರೂಪಿಸಿ ವಿರೋಧಿಗಳ ಬಾಯಿಗೆ ಬೀಗ ಹಾಕಿದ ತೇಜಸ್ವಿನಿ ಅನಂತ್ ಕುಮಾರ್ ! ಬಿಜೆಪಿಗೆ ಆನೆಬಲ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಭಾರೀ ಕುತೂಹಲವನ್ನು ಕೆರಳಿಸಿದೆ. ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿದ್ದ ಬೆಂಗಳೂರು ದಕ್ಷಿಣದಲ್ಲಿ ನಮ್ಮೆಲ್ಲರ ನೆಚ್ಚಿನ ಅನಂತ್ ಕುಮಾರ್ ರವರು ದಿವಂಗತರಾದ ನಂತರ ಇದೇ ಮೊಟ್ಟಮೊದಲ ಬಾರಿಗೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೊದಲಿನಿಂದಲೂ ತೇಜಸ್ವಿನಿ ಅನಂತ್ ಕುಮಾರ್ ರವರಿಗೆ ಟಿಕೆಟ್ ಖಾತ್ರಿಯಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿತ್ತು, ಇದರ ಜೊತೆಗೆ ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಥವಾ ನರೇಂದ್ರ ಮೋದಿ ಅವರು ಸ್ಪರ್ಧಿಸುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿ ಪಕ್ಷದ ಯುವ ನಾಯಕ ತೇಜಸ್ವಿ ಸೂರ್ಯ ರವರಿಗೆ ಬಿಜೆಪಿ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿ ಸ್ಪರ್ಧಿಸುವಂತೆ ಆದೇಶ ನೀಡಿತ್ತು. ಇದು ರಾಜ್ಯದ ಹಲವಾರು ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು, ಆದರೆ ಶಿಸ್ತಿನ ಪಕ್ಷ ಎಂದೇ ಖ್ಯಾತಿ ಪಡೆದು ಕೊಂಡಿರುವ ಬಿಜೆಪಿ ಪಕ್ಷದಲ್ಲಿ ಭಿನ್ನಮತ ಗಳು ಬಹಳ ಸುಲಭವಾಗಿ ಶಮನಗೊಂಡಿದ್ದವು ಹಾಗೂ ತೇಜಸ್ವಿ ಸೂರ್ಯ ರವರಿಗೆ ಇಡೀ ಪಕ್ಷದ ಬೆಂಬಲ ದೊರಕಿ ಮತ್ತೊಮ್ಮೆ ಗೆಲುವಿನ ಸೂಚನೆ ನೀಡಿದ್ದರು, ಆದರೆ ವಿರೋಧಿಗಳು ಮಾತ್ರ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದರು.

ವಿರೋಧ ಪಕ್ಷಗಳು ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರು ಮುಂದಿಟ್ಟುಕೊಂಡು ತೇಜಸ್ವಿ ಸೂರ್ಯ ರವರ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಿದರು, ಇಷ್ಟೇ ಅಲ್ಲದೆ ಬಿಜೆಪಿ ಪಕ್ಷದ ವಿರುದ್ಧ ಕಿಡಿಕಾರಿ ತೇಜಸ್ವಿನಿ ಅನಂತ್ ಕುಮಾರ್ ರವರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದರು. ಆದರೆ ಈ ಎಲ್ಲಾ ಆರೋಪಗಳಿಗೆ ಕಿವಿಕೊಡದೆ ತೇಜಸ್ವಿನಿ ಅನಂತ್ ಕುಮಾರ್ ಇಷ್ಟು ದಿನ ಸುಮ್ಮನೆ ಇದ್ದು ಇದೀಗ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಯಾರು ಊಹಿಸದ ರೀತಿಯಲ್ಲಿ ಪ್ರಚಾರಕ್ಕೆ ಇಳಿದಿರುವ ತೇಜಸ್ವಿನಿ ಅನಂತ್ ಕುಮಾರ್ ರವರು ಯಾವ ಬಿಜೆಪಿ ಪಕ್ಷದ ನಾಯಕರು ಅಥವಾ ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿರುವ ತೇಜಸ್ವಿ ಸೂರ್ಯ ರವರ ಜೊತೆ ಪ್ರಚಾರಕ್ಕೆ ಹೋಗದೆ ಏಕಾಂಗಿಯಾಗಿ ಇಡೀ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಪರ ಮತ ನೀಡುವಂತೆ ಪ್ರೇರೇಪಣೆ ಮಾಡುತ್ತಿದ್ದಾರೆ. ಮೊದಲಿನಿಂದಲೂ ದೇಶ ಮೊದಲು ಎಂಬ ಘೋಷಣೆಗೆ ಬದ್ಧರಾಗಿದ್ದ ತೇಜಸ್ವಿನಿ ಅನಂತಕುಮಾರ್ ಕೊನೆಗೂ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಇಳಿದು ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ ಹಾಗೂ ಈ ನಡೆಯ ಮೂಲಕ ವಿರೋಧಿಗಳ ಬಾಯಿಗೆ ಬೀಗ ಜಡಿದು ತಾವು ಎಂದು ಹೆಮ್ಮೆಯ ಭಾರತ ದೇಶಕ್ಕೆ ಮೊದಲ ಆದ್ಯತೆ ನೀಡುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

Post Author: Ravi Yadav