ಪ್ರಜ್ವಲ್ ರೇವಣ್ಣ ಗೆ ಬಿಗ್ ಶಾಕ್ ನೀಡಿದ ಚುನಾವಣಾ ಆಯೋಗ- ಜೆಡಿಎಸ್ ಕತೆ ಮತ್ತಷ್ಟು ಕಗ್ಗಂಟು

ಪ್ರಜ್ವಲ್ ರೇವಣ್ಣ ಗೆ ಬಿಗ್ ಶಾಕ್ ನೀಡಿದ ಚುನಾವಣಾ ಆಯೋಗ- ಜೆಡಿಎಸ್ ಕತೆ ಮತ್ತಷ್ಟು ಕಗ್ಗಂಟು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಯಾಕೋ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಇನ್ನಿಲ್ಲದ ತೊಂದರೆಗಳು ಎದುರಾಗುತ್ತಿವೆ. ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದಿರುವ ಕಾರಣ ಹಲವಾರು ಕಾರ್ಯಕರ್ತರು ಈಗಾಗಲೇ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ, ಇನ್ನು ಇದೇ ರೀತಿ ಹತ್ತು ಹಲವಾರು ಭಿನ್ನಮತಗಳು, ಭಿನ್ನಾಭಿಪ್ರಾಯಗಳು ಜೆಡಿಎಸ್ ಪಕ್ಷದಲ್ಲಿ ಕಾಣಸಿಗುತ್ತಿವೆ. ಇನ್ನು ಪ್ರತಿಯೊಂದು ಕ್ಷೇತ್ರಗಳಲ್ಲೂ ದಿನಕ್ಕೊಂದು ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತಿದೆ. ಎಲ್ಲಾ ಸವಾಲುಗಳನ್ನು ಎದುರಿಸಿ ಜೆಡಿಎಸ್ ಪಕ್ಷವು ಕನಿಷ್ಠ ಒಂದು ಸ್ಥಾನ ಗೆದ್ದರೂ ಸಹ ಅದು ಸಾಧನೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

ಈಗ ಇದೇ ಸಾಲಿನಲ್ಲಿ ಮತ್ತೊಂದು ದೊಡ್ಡ ಆಘಾತ ಜೆಡಿಎಸ್ ಪಕ್ಷಕ್ಕೆ ಎದುರಾಗಿದ್ದು, ಬಹು ದೊಡ್ಡ ಶಾಕ್ ಎದುರಾಗಿದೆ.ನಾಮಪತ್ರ ಸಲ್ಲಿಸಿದ ಕ್ಷಣದಿಂದಲೂ ಪ್ರಬಲ ಸ್ಪರ್ಧಿ ಎನಿಸಿಕೊಂಡಿರುವ ಎ ಮಂಜುರವರು ನಾಮಪತ್ರದ ವಿರುದ್ಧ ಧ್ವನಿಯೆತ್ತಿದ್ದರು. ಆಸ್ತಿಗಳ ಲೆಕ್ಕಗಳನ್ನು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ದಲ್ಲಿ ಸರಿಯಾಗಿ ನೀಡಿಲ್ಲ ಎಂಬ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದೀಗ ಈ ದೂರಿಗೆ ಸ್ಪಂದಿಸಿರುವ ಚುನಾವಣಾ ಆಯೋಗವು ಪ್ರಜ್ವಲ್ ರೇವಣ್ಣ ಅವರಿಗೆ ಬಿಗ್ ಶಾಕ್ ನೀಡಿದೆ. ಹಲವಾರು ದಾಖಲೆಗಳನ್ನು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ ಎಂಬ ದೂರಿಗೆ ಮತ್ತಷ್ಟು ಪುಷ್ಟಿ ಈಗ ಸಿಕ್ಕಿದೆ.

ಪ್ರಾಥಮಿಕ ತನಿಖೆ ನಡೆಸಿದ ಚುನಾವಣಾ ಆಯೋಗವು ಇತ್ತೀಚೆಗೆ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಸನ ಜಿಲ್ಲೆಯಲ್ಲಿ ಅಧಿಕಾರ ಕೈಗೆತ್ತಿಕೊಂಡ ಜಿಲ್ಲಾಧಿಕಾರಿಗಳಿಗೆ ನಿರ್ದಿಷ್ಟ ಕ್ರಮ ಕೈಗೊಂಡು ಸಂಪೂರ್ಣವಾಗಿ ತನಿಖೆ ನಡೆಸುವಂತೆ ಆದೇಶ ನೀಡಲಾಗಿದೆ. ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿರುವ ಕಾರಣ ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಪ್ರಜ್ವಲ್ ರೇವಣ್ಣ ರವರ ಆಸ್ತಿಗಳ ತನಿಖೆ ನಡೆಸಿ ಫಲಿತಾಂಶವನ್ನು ಹೊರ ಹಾಕಬೇಕಾಗಿದೆ. ಹಾಸನದ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ಚುನಾವಣಾ ಅಧಿಕಾರಿಗಳು ತನಿಖೆ ಆದಷ್ಟು ಬೇಗ ಕೈಗೊಳ್ಳುವಂತೆ ಆದೇಶ ನೀಡಿದೆ.

ಒಟ್ಟಿನಲ್ಲಿ ಪ್ರಜ್ವಲ್ ರೇವಣ್ಣ ರವರ ರಾಜಕೀಯ ಭವಿಷ್ಯ ಇದೀಗ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಗಳ ಕೈಯಲ್ಲಿ ಇದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಚುನಾವಣೆ ನಡೆದ ನಂತರ ಪ್ರಜ್ವಲ್ ರೇವಣ್ಣ ಅವರು ತಪ್ಪು ಮಾಹಿತಿ ನೀಡಿ ಚುನಾವಣೆಯಲ್ಲಿ ಸ್ಪರ್ದಿಸಿದ್ದು ನಿಜವೇ ಆಗಿದ್ದಲ್ಲಿ ಗೆದ್ದರೂ ಸೋತರೂ ಶಿಕ್ಷೆ ತಪ್ಪಿದ್ದಲ್ಲ. ಒಂದು ವೇಳೆ ಗೆದ್ದ ನಂತರ ಇದು ಸಾಬೀತಾದರೆ ಸಂಸದ ಸ್ಥಾನವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಟ್ಟಿನಲ್ಲಿ ಜೆಡಿಎಸ್ ಪಕ್ಷಕ್ಕೆ ದಿನಕ್ಕೊಂದು ಸವಾಲುಗಳು ಎದುರಾಗುತ್ತಿದ್ದು ಇದನ್ನೆಲ್ಲಾ ನಿಭಾಯಿಸಿ ಜೆಡಿಎಸ್ ಪಕ್ಷವು ಗೆಲ್ಲಲು ಸಾಧ್ಯವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.