ವಿಷ್ಣು ಅಭಿಮಾನಿಗಳಿಗೆ ಸ್ಮಾರಕದ ವಿಷಯದಲ್ಲಿ ತುಸು ನೆಮ್ಮದಿ ನೀಡಿದ ಹೈ ಕೋರ್ಟ್

ಕನ್ನಡದ ದಿಗ್ಗಜ ನಟರಲ್ಲಿ ಮೊದಲನೆ ಸಾಲಿನಲ್ಲಿ ನಿಲ್ಲುವ ಸಾಹಸಸಿಂಹ ಎಂದೇ ಖ್ಯಾತಿ ಪಡೆದು ಕೊಂಡಿರುವ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸ್ಮಾರಕದ ವಿಷಯದಲ್ಲಿ ತುಸು ನೆಮ್ಮದಿ ಸಿಕ್ಕಿದೆ . ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ಡಾಕ್ಟರ್ ವಿಷ್ಣುವರ್ಧನ್ ರವರ ಅಭಿಮಾನಿಗಳು ಹಲವಾರು ವರ್ಷಗಳಿಂದ ಒಂದು ವಿಷಯಕ್ಕಾಗಿ ಹಾತೊರೆಯುತ್ತಿದ್ದರು. ಅದುವೇ ಡಾಕ್ಟರ್ ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ. ಡಾಕ್ಟರ್ ವಿಷ್ಣುವರ್ಧನ್ ರವರ ಲೀನವಾಗಿರುವ ಅಭಿಮಾನ್ ಸ್ಟುಡಿಯೋ ದಲ್ಲಿ ಸ್ಮಾರಕ ಆಗಬೇಕು ಎಂದು ಕೋಟ್ಯಾಂತರ ಅಭಿಮಾನಿಗಳ ಕನಸು ಆದರೆ ಈ ಜಾಗ ಸಂಪೂರ್ಣ ವಿವಾದವಾಗಿ ಮಾರ್ಪಟ್ಟು ಕೆಲವು ಕುತಂತ್ರಿಗಳಿಂದ ಹೈ ಕೋರ್ಟ್ ನಲ್ಲಿ ಕೇಸು ನಡೆಯುತ್ತಿದೆ.

ಇನ್ನು ಮೈಸೂರು ಜಿಲ್ಲಾಡಳಿತವು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕೆಲವು ತಿಂಗಳುಗಳ ಹಿಂದೆ ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಹತ್ತಿರವಿರುವ ಮಾನಂದವಾಡಿ ಮುಖ್ಯರಸ್ತೆಗೆ ಹೊಂದಿಕೊಳ್ಳುವಂತೆ ಇರುವ ಕಸಬಾ ಹೋಬಳಿ ಗ್ರಾಮದಲ್ಲಿ ಸುಮಾರು ಆರು ಎಕರೆ 5 ಗುಂಟೆ ಸರ್ಕಾರಿ ಭೂಮಿಯನ್ನು ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣಕ್ಕೆ ಮಂಜೂರು ಮಾಡಿತ್ತು. ಆದರೆ ಭೂಮಿ ನನ್ನದು ಎಂದು ಕೆಲವರು ಕೇಸು ದಾಖಲಿಸಿದ್ದರು. ಎರಡು ಕಡೆಯ ವಿವಾದಗಳಿಂದ ಅಭಿಮಾನಿಗಳು ಬೇಸತ್ತಿದ್ದರು ಇದರ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈ ಕೋರ್ಟ್ ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಹಾಗೂ ಅಂತಿಮ ವಿಚಾರಣೆಯ ನಂತರ ತೀರ್ಪನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಘೋಷಿಸಿದೆ. ಈ ತೀರ್ಪಿನಿಂದ ಅಭಿಮಾನಿಗಳಿಗೆ ತುಸು ನೆಮ್ಮದಿ ನೀಡಿದೆ ಆದರೂ ಸಹ ಇನ್ನು ಕೆಲವು ಅಭಿಮಾನಿಗಳು ಲೀನರಾದ ಜಾಗದಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

Post Author: Ravi Yadav