ಮಂಗಳೂರಿನಲ್ಲಿ ಮೋದಿ ಹಬ್ಬ ಜೋರು,ಮೋದಿ ಸ್ವಾಗತಿಸಲು ವಿಭಿನ್ನವಾಗಿ ಸಿದ್ದರಾದ ಹರೀಶ್ ಪೂಂಜ

ಬಿಜೆಪಿ ಶಾಸಕ ಹರೀಶ್ ಪೂಂಜಾ ರವರು ಸದಾ ಸುದ್ದಿಯಲ್ಲಿರುತ್ತಾರೆ, ಮೊದಲಿನಿಂದಲೂ ತಾವು ಒಬ್ಬ ಶಾಸಕ ಅಥವಾ ಪಕ್ಷದಲ್ಲಿ ಭಾರಿ ವರ್ಚಸ್ಸನ್ನು ಹೊಂದಿರುವ ನಾಯಕ ಎಂಬುದನ್ನು ಯಾವ ರೀತಿಯಲ್ಲೂ ತೋರಿಸಿಕೊಳ್ಳದೆ ಸಾಮಾನ್ಯ ಕಾರ್ಯಕರ್ತನಂತೆ, ಸಾಮಾನ್ಯ ಜನರಲ್ಲಿ ಬೆರೆತು ಪಕ್ಷಕ್ಕೆ ನಿಷ್ಠವಾಗಿ ದುಡಿಯುವುದರ ಮೂಲಕ ದೇಶ ಕಟ್ಟುವುದು ನನ್ನ ಪ್ರಮುಖ ಗುರಿ ಎಂಬ ದಾರಿಯಲ್ಲಿ ನಡೆದು ಯುವಕರಿಗೆ ಆದರ್ಶ ನಾಯಕನಾಗಿ ಬೆಳೆಯುತ್ತಿರುವ ಹರೀಶ್ ಪೂಂಜಾ ರವರು ಇಂದು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಇಂದು ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಇನ್ನಿಲ್ಲದ ಸಂತಸ ಮೂಡಿದೆ, ಐದು ವರ್ಷಗಳಿಂದ ದೇಶವನ್ನು ಸಮರ್ಥವಾಗಿ ಮುಂದುವರಿಸುತ್ತಿರುವ ತಮ್ಮ ನೆಚ್ಚಿನ ನಾಯಕನನ್ನು ಕಾಣಲು ಸಮಾವೇಶದತ್ತ ಇಡೀ  ಮಂಗಳೂರಿನ ಜನ ಈಗಾಗಲೇ ತೆರಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೇ ಅಲ್ಲದೆ ಮಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಯೂ ನರೇಂದ್ರ ಮೋದಿ ಅವರನ್ನು ಜನರು ಸ್ವಾಗತಿಸಲು ಸಿದ್ಧರಾಗಿದ್ದಾರೆ.  ಲಕ್ಷಾಂತರ ಅಭಿಮಾನಿಗಳು ನರೇಂದ್ರ ಮೋದಿ ರವರ ಆಗಮನಕ್ಕಾಗಿ ಇಂದು ಕಾದು ಕುಳಿತಿದ್ದಾರೆ.

ಒಂದು ಹಬ್ಬದಂತೆ ನರೇಂದ್ರ ಮೋದಿ ರವರ ಆಗಮನವನ್ನು ಸಂಭ್ರಮಿಸುತ್ತಿರುವ ಮಂಗಳೂರಿನ ನಾಯಕರು ವಿಭಿನ್ನವಾಗಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರಿಸಿಕೊಂಡಿದ್ದ ಅಭಿಮಾನಿಗಳು ಇಂದು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಸೇರಿದಂತೆ ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಇಂದು ಮೈ ಭಿ ಚೌಕಿದಾರ ಎನ್ನುವ ಹೆಸರು ಪಟ್ಟಿಯೊಂದಿಗೆ ಕಾವಲುಗಾರನ ಸಮವಸ್ತ್ರದಲ್ಲಿ ಕಾಣ ಸಿಗಲಿದ್ದಾರೆ.

ಬೆಳ್ತಂಗಡಿ ಶಾಸಕರಾಗಿರುವ ಹರೀಶ್ ಪೂಂಜಾ ರವರು ಸಹ ತಮ್ಮ ಚೌಕಿದಾರ್ ಸಮವಸ್ತ್ರವನ್ನು ಧರಿಸಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರೀಶ್ ಪೂಂಜಾ ರವರ ಫೋಟೋಗಳು ಬಾರಿ ಅಲೆಯನ್ನು ಸೃಷ್ಟಿಸಿದ್ದು, ಎಲ್ಲೆಡೆ ವೈರಲ್ ಆಗಿದೆ. ಒಟ್ಟಿನಲ್ಲಿ ಇಂದು ಇಡೀ ಮಂಗಳೂರು ನರೇಂದ್ರ ಮೋದಿ ಅವರ ಆಗಮನಕ್ಕಾಗಿ ತುದಿಗಾಲಲ್ಲಿ ಕಾದು ಕುಳಿತಿದೆ. ನರೇಂದ್ರ ಮೋದಿ ರವರ ಆಗಮನದ ನಂತರ ಸಂಭ್ರಮಾಚರಣೆ ಮತ್ತಷ್ಟು ಮುಗಿಲುಮುಟ್ಟಿಲಿದೆ.

Post Author: Ravi Yadav