ಬಿಗ್ ಟ್ವಿಸ್ಟ್ – ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್

ಮುಂದಿನ ಲೋಕಸಭಾ ಚುನಾವಣೆಯ ಇನ್ನಿಲ್ಲದ ಕುತೂಹಲವನ್ನು ಕೆರಳಿಸಿ ಇರುವ ಕಾರಣ ಕರ್ನಾಟಕದ ಕೆಲವು ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ಆರಂಭವಾದ ಕ್ಷಣದಿಂದಲೂ ಹಣದ ಹೊಳೆಯೇ ಹರಿಯುತ್ತಿದೆ ಎಂದು ಆರೋಪಗಳು ಕೇಳಿಬಂದಿದ್ದವು. ಆದಕಾರಣ ಐಟಿ ಅಧಿಕಾರಿಗಳು ಹಲವಾರು ದಿನಗಳಿಂದ ಸತತವಾಗಿ ವಿವಿಧ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಐಟಿ ಅಧಿಕಾರಿಗಳು ದೇವೇಗೌಡರ ಕುಲದೇವರ ದೇವಸ್ಥಾನದ ಹುಂಡಿಯಲ್ಲಿ ಚುನಾವಣೆಗೆ ಎಂದು ಹಣ ಎತ್ತಿ ಇಡಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಆದರೆ ಈ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ, ಐಟಿ ಅಧಿಕಾರಿಗಳು ನೀಡಿದ ಮಾಹಿತಿಗೆ ಇಡೀ ರಾಜ್ಯ ಇದೀಗ ತಲ್ಲಣಗೊಂಡಿದೆ. ಮಾಜಿ ಪ್ರಧಾನಿ ಗಳಾಗಿರುವ ಹೆಚ್ ಡಿ ದೇವೇಗೌಡರ ಕುಲದೇವರಾದ ಹರದನಹಳ್ಳಿ ಈಶ್ವರ ದೇವಾಲಯದ ಮೇಲೆ ಐಟಿ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು, ತದನಂತರ ಐಟಿ ಅಧಿಕಾರಿಗಳು ದೇವಾಲಯದ ಅರ್ಚಕ ಪ್ರಕಾಶ್ ಭಟ್ ಅವರ ಮನೆ ಮೇಲೆ ದಾಳಿ ಮಾಡಿ ಎರಡು ಕಡೆ ಏನು ಸಿಗದ ಕಾರಣ ವಾಪಸ್ ಆಗಿದ್ದಾರೆ ಎಂದು ಮಾಹಿತಿಗಳು ಹೊರಬಿದ್ದಿದ್ದವು. ಆದರೆ ಇಲ್ಲಿ ನಡೆದಿರುವುದೇ ಬೇರೆ ! ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಕರ್ನಾಟಕದಲ್ಲಿ ಯಾವುದೇ ದೇವಸ್ಥಾನ ಅಥವಾ ಅರ್ಚಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಸಂಪೂರ್ಣ ಮಾಹಿತಿ ಹಾಗೂ ವಿವರಗಳೊಂದಿಗೆ ಐಟಿ ಇಲಾಖೆಯು ಇದೀಗ ಮಾಧ್ಯಮಗಳ ಮುಂದೆ ನಮ್ಮ ಅಧಿಕಾರಿಗಳು ಯಾವುದೇ ದೇವಸ್ಥಾನ ಅಥವಾ ಅರ್ಚಕರ ಮನೆಯ ಮೇಲೆ ದಾಳಿ ನಡೆಸಿ ಇಲ್ಲ ಎಂದು ಖಚಿತಪಡಿಸಿದ ಕ್ಷಣ ಇಡೀ ರಾಜ್ಯವೇ ಒಂದು ಕ್ಷಣ ಶಾಕ್ ಆಗಿದೆ. ಯಾಕೆಂದರೆ ಅಲ್ಲಿ ಐಟಿ ಅಧಿಕಾರಿಗಳು ಅಲ್ಲ ಬದಲಾಗಿ ಕೆಲವು ದುಷ್ಕರ್ಮಿಗಳು.

ಹೌದು ಕೆಲವು ಅಪರಿಚಿತರು ದೇವಾಲಯದ ಶೋಧ ನಡೆಸಲು ಹಾಗೂ ಮನೆಯನ್ನು ಸಂಪೂರ್ಣವಾಗಿ ಶೋಧ  ಮಾಡಲು ಐಟಿ ಅಧಿಕಾರಿಗಳಂತೆ ಧಾವಿಸಿ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿಯನ್ನು ನೆಪ ಮಾಡಿಕೊಂಡು ಸಿನಿಮೀಯ ರೀತಿಯಲ್ಲಿ ದೇವಸ್ಥಾನ ಹಾಗೂ ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಅಧಿಕಾರಿಗಳಂತೆ ನಡೆಸಿ ಮನೆಗಳ ಹಾಗೂ ದೇವಸ್ಥಾನಗಳ ಸಂಪೂರ್ಣ ಶೋಧ ಮಾಡಿ ಅಪರಿಚಿತರು ಪರಾರಿಯಾಗಿದ್ದಾರೆ. ಇದೀಗ ಅರ್ಚಕ ಪ್ರಕಾಶ್ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತರು ದೇವಾಲಯ, ಮನೆಯನ್ನು ಶೋಧ ಮಾಡಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

Post Author: Ravi Yadav