ನಿಖಿಲ್ ಸಿಕ್ಕಿರುವುದನ್ನು ಖಚಿತಪಡಿಸಿದ ಅನಂತ್ ಕುಮಾರ್ ಹೆಗಡೆ ! ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ಗೆ ಬಿತ್ತು ಬ್ರೇಕ್.

ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವರ್ಷದ ಅತಿ ದೊಡ್ಡ ಟ್ರೋಲ್ ಗಳಲ್ಲಿ ಒಂದಾಗಿರುವ ನಿಖಿಲ್ ಎಲ್ಲಿದಿಯಪ್ಪ ಟ್ರೋಲ್ಗೆ ಕೊನೆಗೂ ಬ್ರೇಕ್ ಹಾಕಲು ಅನಂತ್ ಕುಮಾರ್ ಹೆಗಡೆ ಅವರು ನಿರ್ಧರಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ರವರನ್ನು ನಿಖಿಲ ಎಲ್ಲಿದಿಯಪ್ಪ ಎಂದು ಕೇಳಬೇಡಿ ಎಂದು ಅನಂತ್ ಕುಮಾರ್ ಹೆಗಡೆ ಅವರು ಹೇಳಿದ್ದಾರೆ ಯಾಕೆಂದರೆ ಕೊನೆಗೂ ನಿ.ಪತ್ರನೊಬ್ಬರ ಕೈಯಲ್ಲಿ ಸಿಕ್ಕಿಬಿದ್ದಿರುವುದನ್ನು ಖಚಿತ ಪಡಿಸಿದ ಅನಂತ್ ಕುಮಾರ್ ಹೆಗ್ಡೆ ರವರು ಇನ್ನು ಮುಂದೆ ಕೇಳ್ಬೇಡಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ನಿಕಿಲ್ ಎಲ್ಲಿದೀಯಪ್ಪ ಟ್ರೊಲ್ ಮತ್ತಷ್ಟು ವೈರಲ್ ಆಗಿದೆ.

ನಿನ್ನೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಯ ನಾಯಕರು ಕಾರ್ಯಕರ್ತರಿಗೆ ನಾನು ನಿಖಿಲ್ ಎಂಬ ಚಿತ್ರವುಳ್ಳ ಟಿ-ಶರ್ಟ್ ನೀಡಿದ್ದಾರೆ. ಅದರ ಜೊತೆಗೆ ಮದ್ಯದ ಬಾಟಲ್ ಗಳನ್ನು ಕೂಡ ಹಂಚಿದ್ದಾರೆ, ಹೀಗಾಗಿ ಟೀ ಶರ್ಟ್ ಹಾಕಿಕೊಂಡಿದ್ದ ಯುವಕ ಎಣ್ಣೆ ಹೊಡೆದು ಟೈಟಾಗಿ ದಾರಿಯಲ್ಲಿ ಬಿದ್ದಿದ್ದ, ಪತ್ರಕರ್ತನೊಬ್ಬ ಅವನ ಫೋಟೋ ತೆಗೆದು ಎಲ್ಲರಿಗೂ ಕಳಿಸಿ ನಿಖಿಲ್ ಸಿಕ್ಕಿದ್ದಾನೆ ಎಂದು ಸುದ್ದಿ ಮುಟ್ಟಿಸಿದ್ದಾರೆ. ಆದ ಕಾರಣದಿಂದ ದಯವಿಟ್ಟು ಇನ್ನು ಯಾರೂ ಕೂಡ ನಿಖಿಲ್ ಎಲ್ಲಿದಿಯಪ್ಪ ಎಂದು ಪ್ರಶ್ನಿಸಬೇಡಿ ಎಂದು ವ್ಯಂಗ್ಯ ವಾಡಿದ್ದಾರೆ.

Post Author: Ravi Yadav