ನಿಖಿಲ್ ಗೆ ಬಿಗ್ ಶಾಕ್, ಮಹಾ ಸಮೀಕ್ಷೆಯಲ್ಲಿ ಯಾರಿಗೆ ಗೆಲುವು ಗೊತ್ತಾ??

ಪ್ರತಿಬಾರಿಯ ಚುನಾವಣೆಯಂತೆ ರಾಜಕೀಯ ತಜ್ಞರಾಗಿರುವ ಚಿಂತಾಮಣಿ ನವರು ಈ ಬಾರಿಯೂ ಮುಂದಿನ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಸಮೀಕ್ಷೆ ನಡೆಸಿದ್ದಾರೆ. ಇಡೀ ದೇಶದೆಲ್ಲೆಡೆ ಭಾರೀ ತಲ್ಲಣವನ್ನು ಸೃಷ್ಟಿಸಿರುವ ಚಿಂತಾಮಣಿ ರವರ ಸಮೀಕ್ಷೆ ದೇಶದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ. ಈ ಸಮೀಕ್ಷೆಯಿಂದ ಕುಮಾರಸ್ವಾಮಿ ರವರಿಗೆ ಹೊಸ ತಲೆನೋವು ಎದುರಾಗಿದ್ದು ಮುಂದೇನು ಎಂಬ ಚಿಂತೆ ಕಾಡತೊಡಗಿದೆ, ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ದೊಡ್ಡ ಶಾಕ್ ಎದುರಾಗಿದೆ.

ಕೆಲವು ಮಾಧ್ಯಮಗಳಲ್ಲಿ ಸುಮಲತಾ ರವರು ಭಾರಿ ಜನ ಬೆಂಬಲ ದೊಂದಿಗೆ ಮುಂದುವರೆಯುತ್ತಿದ್ದಾರೆ. ಆದರೆ ಇನ್ನು ಕೆಲವು ಮಾಧ್ಯಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಗೆಲುವು ಖಚಿತ ಎಂದು ವರದಿಗಳು ಕೇಳಿ ಬರುತ್ತಿವೆ ಆದರೆ ಜನರು ಇದನ್ನು ಒಪ್ಪಲು ಸಿದ್ಧರಿಲ್ಲ, ಬದಲಾಗಿ ರಾಜಕೀಯ ಪಕ್ಷಗಳಿಗೆ ಬಕೆಟ್ ಇಡಿಯುವ ಟಿವಿ ಮಾಧ್ಯಮಗಳು ಎಂದು ಟೀಕೆ ಮಾಡುತ್ತಾ ಬಂದಿದ್ದಾರೆ. ಆದರೆ ಹೀಗೆ ಎಲ್ಲಾ ಸಮೀಕ್ಷೆಗಳ ನಡುವೆ ಇದೀಗ ಹಿರಿಯ ರಾಜಕೀಯ ತಜ್ಞರಾಗಿರುವ ಚಿಂತಾಮಣಿ ಅವರು ನಡೆಸಿರುವ ಈ ಸಮೀಕ್ಷೆ ಹೊಸ ಸುದ್ದಿಯನ್ನು ಹೊರಹಾಕಿದೆ.

ರಾಜಕೀಯ ತಜ್ಞರಾಗಿರುವ ಚಿಂತಾಮಣಿ ರವರ ಸಮೀಕ್ಷೆ ಪ್ರಕಾರ ಮಂಡ್ಯ ಪಕ್ಷದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಕಾರಣ ಆಂತರಿಕ ಬಿಕ್ಕಟ್ಟು ಹೆಚ್ಚಾಗಿ ಸುಮಲತಾ ರವರು ಬಹಳ ಸುಲಭವಾಗಿ ಗೆಲವು ದಾಖಲಿಸಲಿದ್ದಾರೆ ಎಂಬ ಅಂಶ ಇದೀಗ ಹೊರಬಿದ್ದಿದೆ. ಮಂಡ್ಯ ಜಿಲ್ಲೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಯಾಗಿರುವ ನಿಖಿಲ್ ಕುಮಾರಸ್ವಾಮಿ ರವರು ಸುಮಲತಾ ಅವರ ಮುಂದೆ ಸೋಲನ್ನು ಕಾಣಲಿದ್ದಾರೆ ಎಂಬ ಶಾಕಿಂಗ್ ಸುದ್ದಿ ಎಂದು ಸ್ವತಹ ಈ ಸಮೀಕ್ಷೆ ಹೊರಹಾಕಿದೆ.

ಇನ್ನು ಇಡೀ ಕರ್ನಾಟಕದಲ್ಲಿ ಬಿಜೆಪಿ ಪಕ್ಷವು 19 ಸ್ಥಾನಗಳನ್ನು ಗಳಿಸಲಿದೆ ಎಂಬ ಮಾಹಿತಿ ಸಹ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷವು 7 ಹಾಗೂ ಜೆಡಿಎಸ್ ಪಕ್ಷವು ಒಂದು ಸೀಟು ಮಾತ್ರ ಗೆಲ್ಲಲಿದೆ ಎಂಬ ಅಂಶ ಹೊರ ಬಿದ್ದಿದೆ. ಉಳಿದ ಒಂದು ಕ್ಷೇತ್ರ ಪಕ್ಷೇತರ ಪಾಲಾಗಲಿದೆ ಅದುವೇ ಮಂಡ್ಯ ಲೋಕಸಭಾ ಕ್ಷೇತ್ರ. ಈ ಸಮೀಕ್ಷೆ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮಂಡ್ಯ ಜಿಲ್ಲೆಗೆ ದೌಡಾಯಿಸಿ ಕಾಂಗ್ರೆಸ್ ಪಕ್ಷದ ಭಿನ್ನಮತವನ್ನು ಶಮನ ಮಾಡಲು ಪ್ರಯತ್ನ ಮಾಡಲು ನಿರ್ಧರಿಸಿದ್ದಾರೆ. ಮತ್ತೊಂದು ಸಭೆ ಕರೆದಿರುವ ಕಾಂಗ್ರೆಸ್ ನ ಹಿರಿಯ ನಾಯಕರು ಹಾಗೂ ದಿನೇಶ್ ಗುಂಡೂರಾವ್ ರವರು ಚೆಲುವರಾಯಸ್ವಾಮಿ ಹಾಗೂ ಇನ್ನಿತರ ಬಂಡಾಯ ನಾಯಕರನ್ನು ಮಾತನಾಡಿಸಿ ಪಕ್ಷದ ಪರ ಪ್ರಚಾರ ಮಾಡಲು ಮನವೊಲಿಸಲು ಪ್ರಯತ್ನ ಮಾಡುತ್ತಿದ್ದಾರೆ.

Post Author: Ravi Yadav