ಬಿಗ್ ನ್ಯೂಸ್- ಬೆತ್ತಲಾದ ಜೆಡಿಎಸ್, ತಪ್ಪೊಪ್ಪಿಕೊಂಡ ಮಾದೇಗೌಡ, ಊಟ ಎಣ್ಣೆ ಕೊಡಲು ಹಣ ಬೇಕೇ ಬೇಕು – ಉತ್ತರಿಸಿ ಕುಮಾರಸ್ವಾಮಿ

ಕಳೆದ ಕೆಲವು ಗಂಟೆಗಳಿಂದ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಚಿವ ಪುಟ್ಟರಾಜು ಹಾಗೂ ಕಾಂಗ್ರೆಸ್ ಮುಖಂಡರಾಗಿರುವ ಮಾದೇಗೌಡರ ನಡುವೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ. ಎಲ್ಲಾ ಮಾಧ್ಯಮಗಳಲ್ಲಿಯೂ ಇದೇ ಸುದ್ದಿ ಹರಿದಾಡುತ್ತಿದೆ, ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ರವರೆ ಉತ್ತರ ನೀಡಿ ಎಂದು ಜನರು ಮುಗಿ ಬಿದ್ದಿದ್ದಾರೆ. ಐಟಿ ರೈಡ್ ಆಗಲು ಕಾರಣ ಇದೀಗ ನಿಮಗೆ ತಿಳಿಯಿತೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಆರೋಪಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದ್ದು ಸತ್ಯ ಒಪ್ಪಿಕೊಂಡಿರುವ ಮಾದೇಗೌಡರು ತದನಂತರ ತಮ್ಮ ತಪ್ಪನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಂಪೂರ್ಣ ವಿಷಯಗಳಿಗಾಗಿ ಕೆಳಗಡೆ ಓದಿ..

ಇಡೀ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಂದು ಆಡಿಯೋ ಬಿಡುಗಡೆಗೊಂಡಿದ್ದು ಸಚಿವ ಪುಟ್ಟರಾಜು ರವರ ಬಳಿ ಕಾಂಗ್ರೆಸ್ ಮುಖಂಡರಾಗಿರುವ ಮಾದೇಗೌಡರು ಹಣಕ್ಕೆ ಬೇಡಿಕೆ ಇಟ್ಟಿದ್ದು, ಚುನಾವಣಾ ಕರ್ಚಿಗಾಗಿ ಹಣ ಕಳುಹಿಸುತ್ತೇವೆ ಎಂದು ಪುಟ್ಟರಾಜು ಅವರು ತಿಳಿಸಿದ ಆಡಿಯೋ ಭಾರೀ ಸಂಚಲನವನ್ನು ಸೃಷ್ಟಿಸಿದೆ. ಜಿ ಮಾದೇಗೌಡರು ಜನ ಹಣ ಕೇಳುತ್ತಿದ್ದಾರೆ ದಯವಿಟ್ಟು ಆದಷ್ಟು ಬೇಗ ಹಣದ ವ್ಯವಸ್ಥೆ ಮಾಡಿ ನೀವು ಒಂದು ಸಲ ಬಂದು ಹೋಗಿ ಎಂದು ಸಚಿವ ಪುಟ್ಟರಾಜು ಅವರ ಬಳಿ ಮಾದೇಗೌಡರು ಮನವಿ ಮಾಡಿಕೊಂಡಿದ್ದರು. ಒಂದು ವೇಳೆ  ಆಡಿಯೋ ಕ್ಲಿಪ್ಪನ್ನು ನೀವು ಕೇಳಿ ಇಲ್ಲ ಎಂದಾದಲ್ಲಿ ಕೆಳಗಡೆ ಇದೆ ಸ್ವತಹ ನೀವೇ ಕೇಳಿಸಿಕೊಳ್ಳಿ.

ಈ ಆಡಿಯೋ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಿ ಮಾದೇಗೌಡ ರವರು ತಪ್ಪನ್ನು ಒಪ್ಪಿಕೊಂಡು ತಮ್ಮ ತಪ್ಪನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಆಡಿಯೋ ದಲ್ಲಿ ಇರುವ ಧ್ವನಿ ನನ್ನದೇ ಹಣ ಕೊಡದೆ ಯಾರು ಚುನಾವಣೆ ಮಾಡಲು ಸಾಧ್ಯವಿಲ್ಲ ಪ್ರಚಾರಕ್ಕೆ ಬಂದವರಿಗೆ ಹಣ ಕೊಡಿ ಅಂತ ಕೇಳಿದ್ದೇನೆ ಅದರಲ್ಲಿ ತಪ್ಪೇನಿದೆ, ಬಂದವರಿಗೆ ತಿಂಡಿ-ಊಟ ಕೊಡಿಸಬೇಕು ಅದೇ ಕಾರಣಕ್ಕಾಗಿ ಸಚಿವ ಪುಟ್ಟರಾಜು ರವರ ಬಳಿ ಹಣ ಕೊಡಿ ಎಂದು ಕೇಳಿದೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಗಾಂಧಿ ಭವನದಲ್ಲಿ ಪ್ರತಿಕ್ರಿಯೆ ನೀಡಿರುವ ಮಾದೇಗೌಡರು ಭಾರತದಲ್ಲಿ ದುಡ್ಡು ಖರ್ಚು ಮಾಡದೆ ಯಾರು ಎಲೆಕ್ಷನ್ ಮಾಡಲು ಸಾಧ್ಯವಿಲ್ಲ. ಮೋದಿಯಿಂದ ಹಿಡಿದು ದುಡ್ಡು ಖರ್ಚು ಮಾಡದೇ ಇರುವವರು ಯಾರಾದರೂ ಇದ್ದಾರಾ ಮೊನ್ನೆ ಹುಡುಗರು ಬಂದು ಪ್ರಚಾರಕ್ಕೆ ಬಂದವರಿಗೆ ಕಾಫಿ, ಊಟ, ಎಣ್ಣೆ ಕೊಡಿಸಬೇಕು ಎಂದು ಕೇಳುತ್ತಾರೆ. ಇದು ಈಗ ಕಾಮನ್ ಆಗಿದೆ ಅದಕ್ಕೆ ನಾನು ಎಲ್ಲಿಂದ ತಂದು ಹಣ ಹೊಂದಿಸಲಿ ಹಾಗಾಗಿ ಸಚಿವರ ಬಳಿ ಹಣ ಕೇಳಿದ್ದೇನೆ, ನಾನು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Post Author: Ravi Yadav