ಬಯಲಾಯಿತು ಮಹಾ ಸಮೀಕ್ಷೆ- ವಿರೋಧ ಪಕ್ಷಗಳಿಗೆ ಮರ್ಮಾಘಾತ, ಮೋದಿಗೆ ಅಧಿಕಾರದ ಗದ್ದುಗೆ ಖಚಿತ

ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಇಂಡಿಯಾ ಟಿವಿ ಹಾಗೂ ಸಿ ಎನ್ ಎಕ್ಸ್ ಸಂಸ್ಥೆಗಳು ಪ್ರತಿ ಬಾರಿಯ ಚುನಾವಣೆಯಂತೆ ಈ ಬಾರಿಯೂ ಚುನಾವಣೆಗೂ ಮುನ್ನ ಸಮೀಕ್ಷೆ ನಡೆಸಿ ಫಲಿತಾಂಶವನ್ನು ಹೊರಹಾಕಿದ್ದು ದೇಶದೆಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನರೇಂದ್ರ ಮೋದಿ ಅವರನ್ನು ಸೋಲಿಸಲು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಜೊತೆ ಚುನಾವಣಾ ಮೈತ್ರಿಯನ್ನು ಮಾಡಿಕೊಂಡು ಸ್ಪರ್ಧಿಸುತ್ತಿರುವ ಕಾರಣ ನರೇಂದ್ರ ಮೋದಿ ಅವರಿಗೆ ಅಧಿಕಾರದ ಗದ್ದುಗೆ ಸಿಗುತ್ತಾ ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.

ಆದರೆ ಈ ಪ್ರಶ್ನೆಗಳಿಗೆ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ ಇಂಡಿಯಾ ಟಿವಿ ಹಾಗೂ ಸಿ ಎನ್ ಎಕ್ಸ್ ಸಂಸ್ಥೆಗಳು ಇಡೀ ದೇಶದಲ್ಲಿಡೇ ಅಭಿಪ್ರಾಯವನ್ನು ಸಂಗ್ರಹಿಸಿ 543 ಕ್ಷೇತ್ರಗಳಲ್ಲಿ ವಿವಿಧ ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಫಲಿತಾಂಶವನ್ನು ಹೊರಹಾಕಿದೆ. ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿರವರು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಇನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳ ಮೈತ್ರಿ ಕೂಟವು ಕೇವಲ 147 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ ಎಂಬ ಅಂಶ ಹೊರಬಿದ್ದಿದೆ.

ಕಳೆದ ಮಾರ್ಚ್ ತಿಂಗಳ ಸಮೀಕ್ಷೆಯಲ್ಲಿ 272 ಸೀಟುಗಳನ್ನು ಎನ್ಡಿಎ ಮೈತ್ರಿಕೂಟ ಪಡೆದುಕೊಳ್ಳಲಿದೆ ಎಂಬ ಮಾಹಿತಿ ಹೊರ ಬಿದ್ದಿತ್ತು, ಇದೀಗ ಹೊರಬಂದಿರುವ ಸಮೀಕ್ಷೆಯು ಬಿಜೆಪಿ ಪಕ್ಷವು 275 ಸೀಟುಗಳ ಮೂಲಕ ಮೈತ್ರಿ ಗಳ ನೆರವಿಲ್ಲದೆ ಅಧಿಕಾರದ ಗದ್ದುಗೆ ಏರುವುದು ಖಚಿತ ಎಂದು ಸಮೀಕ್ಷೆ ಹೇಳಿದೆ. ಇನ್ನು ಕರ್ನಾಟಕದ ರಾಜಕೀಯ ಚಿತ್ರಣವನ್ನು ನೋಡಿದರೆ ಬಿಜೆಪಿ ಪಕ್ಷವು 16 ಸೀಟುಗಳನ್ನು ಗೆದ್ದು ಬೀಗಲಿದೆ, ಉಳಿದಂತೆ ಕಾಂಗ್ರೆಸ್ 10 ಹಾಗೂ ಜೆಡಿಎಸ್ ಪಕ್ಷವು ಎರಡು ಸೀಟುಗಳನ್ನು ಗೆಲ್ಲಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇನ್ನು ಎಸ್ಪಿ ಹಾಗೂ ಬಿಎಸ್ಪಿ ಸೇರಿದಂತೆ ಉಳಿದ ಎಲ್ಲಾ ಪಕ್ಷೇತರ ಅಭ್ಯರ್ಥಿಗಳು 121 ಸ್ಥಾನಗಳಲ್ಲಿ ಗೆಲುವು ದಾಖಲಿಸಿ, ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರು ಸಹ ಅಧಿಕಾರದ ಗದ್ದುಗೆ ಏರುವುದು ಅಸಾಧ್ಯ. ಒಟ್ಟಿನಲ್ಲಿ ಇತ್ತೀಚಿನ ಸಮೀಕ್ಷೆಗಳಲ್ಲಿ ದಿನೇದಿನೇ ನರೇಂದ್ರ ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಒಂದು ವೇಳೆ ಇದೇ ಮುಂದುವರೆದಲ್ಲಿ ಮೇ 23ರಂದು ಯಾವ ಪಕ್ಷದ ಬೆಂಬಲ ಇಲ್ಲದೆ ಬಿಜೆಪಿ ಪಕ್ಷವು ಅಧಿಕಾರದ ಗದ್ದುಗೆ ಏರಲಿದೆ.

Post Author: Ravi Yadav