ಬಿಗ್ ನ್ಯೂಸ್: ಯೋಧನಿಂದ ಬಿತ್ತು ಸುಮಲತಾ ರವರಿಗೆ ಮೊದಲ ವೋಟ್, ಕಾರಣ ಸಮೇತ ತನ್ನ ನಿರ್ಧಾರ ಸಮರ್ಥಿಸಿದ ಯೋಧ ??

ಬಿಗ್ ನ್ಯೂಸ್: ಯೋಧನಿಂದ ಬಿತ್ತು ಸುಮಲತಾ ರವರಿಗೆ ಮೊದಲ ವೋಟ್, ಕಾರಣ ಸಮೇತ ತನ್ನ ನಿರ್ಧಾರ ಸಮರ್ಥಿಸಿದ ಯೋಧ ??

ಮಂಡ್ಯ ಲೋಕಸಭಾ ಅಕಾಡೆಮಿ ಇನ್ನಿಲ್ಲದ ಕುತೂಹಲಕ್ಕೆ ಕಾರಣವಾಗುತ್ತಿದೆ. ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ವಿರುದ್ಧ ನೇರ ಸ್ಪರ್ಧೆ ಏರ್ಪಟ್ಟಿದೆ. ಮೊದಲಿನಿಂದಲೂ ಕುಮಾರಸ್ವಾಮಿರವರ ಮಗ ನಿಖಿಲ್ ಕುಮಾರಸ್ವಾಮಿ ರವರಿಗೆ ಸೋಲನ್ನು ಕಾಣಿಸಲು ಸತತ ಪ್ರಯತ್ನವನ್ನು ನಡೆಸುತ್ತಿರುವ ಸುಮಲತಾ ರವರಿಗೆ ಭಾರಿ ಜನ ಬೆಂಬಲ ಕೇಳಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅದರಂತೆ ಇಂದು ಸುಮಲತಾ ರವರಿಗೆ ಮತ್ತೊಂದು ಆನೆ ಬಲ ಬಂದಂತಾಗಿದೆ ಹಾಗೂ ಚುನಾವಣೆಗೆ ಮುನ್ನ ಮೊದಲ ಮತ ಸುಮಲತಾ ರವರಿಗೆ ದಕ್ಕಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲೋಕಸಭಾ ಚುನಾವಣೆ ಇರುವುದರಿಂದ ಗಡಿಯಲ್ಲಿ ದೇಶದ ರಕ್ಷಣೆ ಮಾಡುವ ಯೋಧರು ಚುನಾವಣಾ ಸಮಯದಲ್ಲಿ ಶಾಂತಿ ಸ್ಥಾಪಿಸಿ ಅಕ್ರಮಗಳನ್ನು ತಡೆಗಟ್ಟಲು ರಕ್ಷಣಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಅದೇ ಕಾರಣವಾಗಿ ಇಂದು ದೇಶದ ಹಲವೆಡೆ ಯೋಧರಿಗೆ ಮತದಾನದ ಹಕ್ಕು ನೀಡಲಾಗಿತ್ತು, ಇದೇ ಸಮಯದಲ್ಲಿ ಜಿದ್ದಾಜಿದ್ದಿನ ಕಣವಾದ ಮಂಡ್ಯ ಲೋಕಸಭಾ  ಕ್ಷೇತ್ರದಲ್ಲಿನ ಯೋಧ ಇಂದು ಮತ ಚಲಾಯಿಸಿದ್ದಾರೆ.

ನಮ್ಮ ದೇಶ ಕಾಯುವ ಯೋಧ ಮಂಡ್ಯ ಜಿಲ್ಲೆಯ ನಾಯಕ್ ರವರು ಯುಗಾದಿ ಹಬ್ಬದ ದಿನ ನಾನು ಸುಮಲತಾ ರವರಿಗೆ ಮತದಾನ ಮಾಡುತ್ತಿದ್ದೇನೆ, ದಯವಿಟ್ಟು ಮಂಡ್ಯದ ಜನತೆ ಸುಮಲತಾ ರವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಂಡ್ಯ ರೈತರ ಕಷ್ಟ ಸಂಪೂರ್ಣವಾಗಿ ಬಗೆಹರಿಯಬೇಕು, ಸೈನಿಕರ ಕುಟುಂಬಕ್ಕೆ ಒಳ್ಳೆಯದು ಆಗಬೇಕು, ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ಸುಮಲತಾ ರವರಿಗೆ ಮಾತ್ರ ಸಾಧ್ಯವಾಗುತ್ತದೆ ಎಂದು ನಾಯಕ್ ಅವರು ತಿಳಿಸಿದ್ದಾರೆ.

ಯೋಧ ಆರ್ ನಾಯಕ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಪ್ರಕಟಣೆ ಮಾಡಿದ ತಕ್ಷಣ ಇದಕ್ಕೆ ಉತ್ತರ ನೀಡಿರುವ ಸುಮಲತಾ ಅಂಬರೀಶ್ ರವರು ನಿಮ್ಮಂತವರ ಪ್ರೀತಿಯೇ ಇಂದು ನನ್ನನ್ನು ಹೋರಾಟದ ದಾರಿಯಲ್ಲಿ ನಡೆಯಲು ಶಕ್ತಿ ನೀಡುತ್ತಿದೆ. ನಿಮ್ಮ ಈ ಪ್ರೇರಣದಾಯಕ ಪತ್ರ ಹಾಗೂ ನೀವು ನನಗೆ ಸಲ್ಲಿಸಿರುವ ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ನಿಮ್ಮ ಹಾರೈಕೆಯನ್ನು ಮಂಡ್ಯದ ಜನ ಖಂಡಿತವಾಗಿಯೂ ಈಡೇರಿಸುತ್ತಾರೆ ಮಂಡ್ಯ ಜಿಲ್ಲೆಯನ್ನು ನಾನು ಸ್ವಾಭಿಮಾನ ದಿಕ್ಕಿನ ಕಡೆ ಕರೆದುಕೊಂಡು ಹೋಗಬೇಕು ಎಂಬ ಮಹದಾಸೆಯಿಂದ ಮುಂದೆ ಹೋಗುತ್ತಿದ್ದೇನೆ.

ನಿಮ್ಮ ಅಭಿಮಾನ ಮತ್ತು ಪ್ರೀತಿ ಹಾಗೂ ಅದೇ ರೀತಿ ನಿಮ್ಮ ಅಂಬರೀಶ ರವರ ಬಗ್ಗೆ ಇಟ್ಟುಕೊಂಡಿರುವ ಅಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮಂಡ್ಯ ಜಿಲ್ಲೆಯನ್ನು ಬದಲಾವಣೆ ಮಾಡಿ ತೋರಿಸುತ್ತೇನೆ ಎಂದು ಫೇಸ್ಬುಕ್ ನಲ್ಲಿ ಯೋಧ ಆರ್ ನಾಯಕ್ ಅವರಿಗೆ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಇನ್ನೂ ಚುನಾವಣೆಗೂ ಮುನ್ನವೇ ಸುಮಲತಾ ರವರು ಒಂದು ಮತದ ಮೂಲಕ ಮುನ್ನಡೆ ಪಡೆದು ಕೊಂಡಿದ್ದಾರೆ. ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡಿ ಹಾಗೂ ಫಾಲೋ ಮಾಡಿ. ಸುದ್ದಿಗಳನ್ನು ಎಲ್ಲರಿಗೂ ತಲುಪಿಸಲು ಶೇರ್ ಮಾಡುವ ಮೂಲಕ ಸಹಾಯ ಮಾಡಿ.