ಗೆದ್ದರೆ ಬಿಜೆಪಿ ಸೇರುತ್ತಾರಾ ಸುಮಲತಾ?? ಅವರ ಉತ್ತರ ಹೀಗಿದೆ ನೋಡಿ

ಮಂಡ್ಯ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳಾದ ಮಗನಾದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವ ಹಾದಿಯಲ್ಲಿ ಮುನ್ನುಗ್ಗುತ್ತಿರುವ ಸುಮಲತಾ ಅಂಬರೀಶ್ ಅವರು ಈಗಾಗಲೇ ಹಲವಾರು ಸಂಘಟನೆಗಳ ಬೆಂಬಲವನ್ನು ಪಡೆದು ಕೊಂಡಿದ್ದಾರೆ ಅದೇ ರೀತಿ ಬಿಜೆಪಿ ಪಕ್ಷವೂ ಸಹ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ನೀಡಿ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿದೆ. ಇನ್ನು ಬಿಜೆಪಿ ಕಾರ್ಯಕರ್ತರು ಸುಮಲತಾ ಅಂಬರೀಶ್ ರವರ ಪರವಾಗಿ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಬಿಜೆಪಿ ನಾಯಕ ಸಿದ್ದರಾಮಯ್ಯ ರವರ ಮನೆಗೆ ತೆರಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರುವ ಪ್ರಶ್ನೆಯನ್ನು ತಳ್ಳಿ ಹಾಕಿದ್ದಾರೆ.

ನಾನು ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳಬೇಕು ಎಂದುಕೊಂಡಿದ್ದರೆ, ರಾಜ್ಯದ ಬಿಜೆಪಿ ನಾಯಕರು ನೀಡಿದ ಆಫರ್ ತೆಗೆದುಕೊಂಡು ಸೇರಿಕೊಳ್ಳುತ್ತಿದೆ ಆದರೆ ನಾನು ಕೇವಲ ಮಂಡ್ಯ ಜನರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಒಂದು ವೇಳೆ ನಾನು ಗೆದ್ದರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ಉಳಿದುಕೊಳ್ಳುತ್ತೇನೆ ಎಂದು ಉತ್ತರ ನೀಡಿದ್ದಾರೆ. ಇವರ ಈ ಹೇಳಿಕೆಯ ನಂತರ ಇದಕ್ಕೆ ಪ್ರತಿಕ್ರಿಯಿಸುವ ಹಿರಿಯ ಬಿಜೆಪಿ ನಾಯಕರು ಸಹ ಹೌದು ಸುಮಲತಾ ರವರು ಬಿಜೆಪಿ ಪಕ್ಷಕ್ಕೆ ಸೇರುವ ಸಾಧ್ಯತೆಗಳಿಲ್ಲ ಆದರೆ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುವುದು ದಕ್ಕೆ ಸುಮಲತಾ ರವರನ್ನು ಬಿಜೆಪಿ ಪಕ್ಷ ಬೆಂಬಲಿಸಲಿದೆ ಎಂದು ಉತ್ತರ ನೀಡಿದ್ದಾರೆ.

Post Author: Ravi Yadav